ಬೆಂಗಳೂರು: ಅನರ್ಹತೆ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮರುದಿನವೇ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಷನ್ ಬೇಗ್ ಹೊರತುಪಡಿಸಿ, ಉಳಿದ 16 ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಧ್ವಜ ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡರು. ಮಧ್ಯಾಹ್ನದ ಹೊತ್ತಿಗೆ ಶಿವಾಜಿನಗರದ ರೋಷನ್ ಬೇಗ್ ಹಾಗೂ ರಾಣೆಬೆನ್ನೂರಿನ ಆರ್. ಶಂಕರ್ ಹೊರತುಪಡಿಸಿ, ಉಳಿದ 13 ಮಂದಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿತು. ರಾಜರಾಜೇಶ್ವರಿ ನಗರ, ಮಸ್ಕಿಗೆ ಚುನಾವಣೆ ನಡೆಯುತ್ತಿಲ್ಲವಾದ ಕಾರಣ, ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿಲ್ಲ.
Advertisement
Advertisement
ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಬೆನ್ನಲ್ಲೇ, ಆರ್. ಶಂಕರ್ ಪ್ರತಿನಿಧಿಸುವ ರಾಣೆಬೆನ್ನೂರು ಹೊರತುಪಡಿಸಿ, 14 ಕ್ಷೇತ್ರಗಳಿಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ರಾಣೆಬೆನ್ನೂರಿನಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್‍ಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಶಿವಾಜಿನಗರದಲ್ಲಿ ಹಲಸೂರು ಕಾರ್ಪೋರೇಟರ್ ಮಮತಾ ಪತಿ ಶರವಣಗೆ ಟಿಕೆಟ್ ಕೊಡಲಾಗಿದೆ. ಎಚ್. ವಿಶ್ವನಾಥ್ ಹುಣಸೂರಿನಿಂದ ಮತ್ತೆ ಕಣಕ್ಕಿಳಿಸಿದ್ದಾರೆ.
Advertisement
ಜೆಡಿಎಸ್ ಕೂಡ 10 ಕ್ಷೇತ್ರಗಳಿಗೆ ಅಭ್ಯಥಿ ಪಟ್ಟಿ ಅಂತಿಮಗೊಳಿಸಿದೆ. ಹೊಸಕೋಟೆಯಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ಇದೇ ವೇಳೆ ಯಾವ ಪಕ್ಷದ ಜೊತೆಗೂ ಮೈತ್ರಿಯಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಶತ್ರುಗಳು ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಜೆಡಿಎಸ್ ಹೇಳಿಕೊಂಡಿದೆ. ಕಾಂಗ್ರೆಸ್ ಇವತ್ತು ಸಭೆ ಸೇರಿದ್ದರೂ ಕೂಡ ಪಟ್ಟಿ ಅಂತಿಮವಾಗಿಲ್ಲ. ನಾಳೆ ಉಳಿದ 7 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
Advertisement
ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?
ಹುಣಸೂರು
– ಎಚ್.ವಿಶ್ವನಾಥ್, ಬಿಜೆಪಿ
– ಹೆಚ್. ಪಿ ಮಂಜುನಾಥ್, ಕಾಂಗ್ರೆಸ್
– ಸೋಮಶೇಖರ್, ಜೆಡಿಎಸ್
ಗೋಕಾಕ್
– ರಮೇಶ್ ಜಾರಕಿಹೊಳಿ, ಬಿಜೆಪಿ
– ಲಖನ್ ಜಾರಕಿಹೊಳಿ, ಕಾಂಗ್ರೆಸ್ (ಫೈನಲ್ ಆಗಬಹುದು)
– ಜೆಡಿಎಸ್ ಅಭ್ಯರ್ಥಿ (ಫೈನಲ್ ಆಗಿಲ್ಲ)
ಚಿಕ್ಕಬಳ್ಳಾಪುರ
– ಕೆ.ಸುಧಾಕರ್, ಬಿಜೆಪಿ
– ಎಂ.ಆಂಜಿನಪ್ಪ, ಕಾಂಗ್ರೆಸ್
– ಕೆಪಿ ಬಚ್ಚೇಗೌಡ, ಜೆಡಿಎಸ್
ಹಿರೇಕೆರೂರು
– ಬಿ.ಸಿ.ಪಾಟೀಲ್, ಬಿಜೆಪಿ
– ಬಿ.ಹೆಚ್.ಬನ್ನಿಕೋಡ್, ಕಾಂಗ್ರೆಸ್
– ಉಜನೆಪ್ಪ ಕೋಡಿಹಳ್ಳಿ, ಜೆಡಿಎಸ್
ಕೆ.ಆರ್.ಪುರಂ
– ಬೈರತಿ ಬಸವರಾಜ್, ಬಿಜೆಪಿ
– ಎಂ.ನಾರಾಯಣಸ್ವಾಮಿ, ಕಾಂಗ್ರೆಸ್
– ಕೃಷ್ಣಮೂರ್ತಿ, ಜೆಡಿಎಸ್
ಯಶವಂತಪುರ
– ಎಸ್‍ಟಿ ಸೋಮಶೇಖರ್, ಬಿಜೆಪಿ
– ರಾಜಕುಮಾರ್ ನಾಯ್ಡು, ಕಾಂಗ್ರೆಸ್ (ಇನ್ನೂ ಘೋಷಣೆ ಆಗಿಲ್ಲ)
– ಜವರಾಯಿಗೌಡ, ಜೆಡಿಎಸ್ ಅಭ್ಯರ್ಥಿ
ಮಹಾಲಕ್ಷ್ಮಿ ಲೇಔಟ್
– ಕೆ.ಗೋಪಾಲಯ್ಯ, ಬಿಜೆಪಿ
– ಶಿವರಾಜ್, ಕಾಂಗ್ರೆಸ್
– ಜೆಡಿಎಸ್ (ಇನ್ನೂ ಫೈನಲ್ ಆಗಿಲ್ಲ)
ಅಥಣಿ
– ಮಹೇಶ್ ಕುಮಟಳ್ಳಿ, ಬಿಜೆಪಿ(ಡಿಸಿಎಂ ಲಕ್ಷ್ಮಣ ಸವದಿ ಟಿಕೆಟ್ ಆಕಾಂಕ್ಷಿ ಆಗಿದ್ದರು)
– ಕಾಂಗ್ರೆಸ್ (ಇನ್ನೂ ಫೈನಲ್ ಆಗಿಲ್ಲ)
– ಜೆಡಿಎಸ್ (ಇನ್ನೂ ಫೈನಲ್ ಆಗಿಲ್ಲ)
ಹೊಸಕೋಟೆ
– ಎಂಟಿಬಿ ನಾಗರಾಜ್, ಬಿಜೆಪಿ
– ಪದ್ಮಾವತಿ ಸುರೇಶ್, ಕಾಂಗ್ರೆಸ್
– ಶರತ್ ಬಚ್ಚೇಗೌಡ, ಪಕ್ಷೇತರ ಅಭ್ಯರ್ಥಿ (ಜೆಡಿಎಸ್ ಬೆಂಬಲ)
ಕಾಗವಾಡ ಕ್ಷೇತ್ರದ ಮಾಜಿ ಶಾಸಕ @rajukage ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ.
4 ಬಾರಿ ಶಾಸಕರಾಗಿ ಕೆಲಸ ಮಾಡಿರುವ ಇವರು ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಲಿದ್ದಾರೆ ಎನ್ನುವ ವಿಶ್ವಾಸವಿದೆ.
– @dineshgrao pic.twitter.com/tWq7wW0I5t
— Karnataka Congress (@INCKarnataka) November 14, 2019
ಕಾಗವಾಡ
– ಶ್ರೀಮಂತ್ ಪಾಟೀಲ್, ಬಿಜೆಪಿ
– ರಾಜು ಕಾಗೆ, ಕಾಂಗ್ರೆಸ್(ಇವತ್ತು ಕಾಂಗ್ರೆಸ್ಸಿಗೆ ಸೇರ್ಪಡೆ)
– ಜೆಡಿಎಸ್ (ಇನ್ನೂ ಫೈನಲ್ ಆಗಿಲ್ಲ)
ಯಲ್ಲಾಪುರ
– ಶಿವರಾಂ ಹೆಬ್ಬಾರ್, ಬಿಜೆಪಿ
– ಭೀಮಣ್ಣ ನಾಯ್ಕ್, ಕಾಂಗ್ರೆಸ್
– ಚೈತ್ರಾಗೌಡ, ಜೆಡಿಎಸ್
ವಿಜಯನಗರ
– ಆನಂದ್ ಸಿಂಗ್, ಬಿಜೆಪಿ ಅಭ್ಯರ್ಥಿ
– ವಿ.ವೈ. ಘೋರ್ಪಡೆ, ಕಾಂಗ್ರೆಸ್ ಅಭ್ಯರ್ಥಿ (ಫೈನಲ್ ಆಗಿಲ್ಲ)
– ನಬಿ, ಜೆಡಿಎಸ್
ಕೆಆರ್ ಪೇಟೆ
– ನಾರಾಯಣಗೌಡ, ಬಿಜೆಪಿ
– ಕೆಬಿ ಚಂದ್ರಶೇಖರ್, ಕಾಂಗ್ರೆಸ್ (ಫೈನಲ್ ಆಗಿಲ್ಲ)
– ದೇವರಾಜ್, ಜೆಡಿಎಸ್
ಶಿವಾಜಿನಗರ
– ಶರವಣ ಬಿಜೆಪಿ (ಹಲಸೂರು ಕಾರ್ಪೋರೇಟರ್ ಮಮತಾ ಪತಿ)
– ಕಾಂಗ್ರೆಸ್ (ಘೋಷಣೆ ಆಗಿಲ್ಲ)
– ತನ್ವೀರ್ ಅಹ್ಮದ್, ಜೆಡಿಎಸ್
– ರೋಷನ್ ಬೇಗ್, ಪಕ್ಷೇತರ ಅಭ್ಯರ್ಥಿ
ರಾಣೆಬೆನ್ನೂರು
– ಕಾಂತೇಶ್, ಬಿಜೆಪಿ ಅಭ್ಯರ್ಥಿ (ಈಶ್ವರಪ್ಪ ಪುತ್ರ ಕಾಂತೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಇನ್ನೂ ಫೈನಲ್ ಆಗಿಲ್ಲ)
– ಕೆಬಿ ಕೋಳಿವಾಡ, ಕಾಂಗ್ರೆಸ್ ಅಭ್ಯರ್ಥಿ
– ಜೆಡಿಎಸ್ ಅಭ್ಯರ್ಥಿ (ಘೋಷಣೆ ಆಗಿಲ್ಲ)