ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಪರೋಕ್ಷವವಾಗಿ ಟ್ಯಾಕ್ಸ್ ಶಾಕ್ ನೀಡಿದ್ದಾರೆ.
ಮದ್ಯದ (Liquor) ಮೇಲೆ ವಿಧಿಸುವ ತೆರಿಗೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ರಾಜ್ಯದ ರಾಜಸ್ವ ಸಂಗ್ರಹವನ್ನು ದ್ವಿಗುಣಗೊಳಿಸುವ ನಿರ್ಧಾರ ಮಾಡಿದ್ದಾರೆ. ಮದ್ಯದಲ್ಲಿರುವ ಆಲ್ಕೋಹಾಲ್ ಅಂಶ ಆಧರಿಸಿ ತೆರಿಗೆ ಹಾಕಲಿದ್ದು, 2026-27ನೇ ಸಾಲಿಗೆ 45,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್ ಎಫೆಕ್ಟ್ – ಯುನೈಟೆಡ್ ಬ್ರಿವರೀಸ್, ಯುನೈಟೆಡ್ ಸ್ಪಿರಿಟ್ಸ್ ಷೇರು ದಿಢೀರ್ ಭಾರೀ ಏರಿಕೆ
ಏಪ್ರಿಲ್ 2026 ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡು ಅಬಕಾರಿ ಸುಂಕ (Excise Ttax) ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಅಬಕಾರಿ ಸುಂಕ ಏಕರೂಪವಾಗಿರಲಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್‌ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಟ್ಯಾಕ್ಸ್ ಹಾಕಲಿದ್ದಾರೆ. ಇದನ್ನೂ ಓದಿ: 4.48 ಲಕ್ಷ ಕೋಟಿ ಬಜೆಟ್‌ನಲ್ಲಿ ಗ್ಯಾರಂಟಿಗೆ ಹೋಗುತ್ತೆ 50,686 ಕೋಟಿ! ಯಾವ ಇಲಾಖೆಗೆ ಎಷ್ಟು?

