ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನವೇ ಅತೃಪ್ತ ಶಾಸಕರು ಸದನಕ್ಕೆ ಬರುವುದು ಅನುಮಾನ ಎನ್ನುವ ಸುದ್ದಿಗೆ ಪೂರಕ ಎಂಬಂತೆ 12 ಮಂದಿ ಶಾಸಕರು ಗೈರು ಹಾಜರಿ ಹಾಕಿದ್ದಾರೆ.
ಶಾಸಕರಾದ ರಮೇಶ್ ಜಾರಕಿಹೊಳಿ(ಗೋಕಾಕ್), ಗಣೇಶ್(ಕಂಪ್ಲಿ), ನಾಗೇಂದ್ರ(ಬಳ್ಳಾರಿ), ಉಮೇಶ್ ಜಾಧವ್(ಚಿಂಚೋಳಿ), ಮಹೇಶ್ ಕುಮಟಳ್ಳಿ(ಅಥಣಿ), ಬಿ.ಸಿ. ಪಾಟೀಲ್(ಹಿರೇಕೆರೂರು), ಡಾ. ಸುಧಾಕರ್(ಚಿಕ್ಕಬಳ್ಳಾಪುರ), ನಾರಾಯಣಗೌಡ(ಕೆ.ಆರ್. ಪೇಟೆ), ರಾಮಲಿಂಗಾ ರೆಡ್ಡಿ(ಬಿಟಿಎಂ ಲೇಔಟ್), ಸೌಮ್ಯಾ ರೆಡ್ಡಿ(ಜಯನಗರ) ಶಂಕರ್(ರಾಣೇಬೆನ್ನೂರು) ನಾಗೇಶ್(ಮುಳಬಾಗಿಲು) ಸದನಕ್ಕೆ ಗೈರು ಹಾಜರಿ ಹಾಕಿದ್ದಾರೆ.
Advertisement
Advertisement
ಬಿಜೆಪಿ 104 ಶಾಸಕರಲ್ಲಿ ಐವರು ಗೈರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಮಾಯಕೊಂಡ ಶಾಸಕ ಲಿಂಗಣ್ಣ ಗೈರಾಗಿದ್ದಾರೆ. ಕರುಣಾಕರ ರೆಡ್ಡಿ, ಅಶ್ವತ್ಥ್ ನಾರಾಯಣ, ಅರವಿಂದ ಲಿಂಬಾವಳಿ ಸಹ ಸದನಕ್ಕೆ ಗೈರು ಹಾಜರಿ ಹಾಕಿದ್ದಾರೆ.
Advertisement
ರಾಜ್ಯಪಾಲರ ಭಾಷಣಕ್ಕೆ ಮುನ್ನ ವಿಧಾನಸೌಧದಲ್ಲಿ ಆರ್ ಅಶೋಕ್ ಮಾತನಾಡಿ, ನಾನು ಈಗಲೂ ಸಿಎಂ ಬಜೆಟ್ ಮಂಡಿಸೋದು ಅನುಮಾನ ಎಂದೇ ಹೇಳುತ್ತೇನೆ. ಇಂದೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
Advertisement
ಇವತ್ತು ರಾಜ್ಯಪಾಲರ ಬಜೆಟ್ ವೇಳೆ ತುಂಬಾ ಶಾಸಕರು ಗೈರಾಗುತ್ತಾರೆ. ಎಷ್ಟು ಶಾಸಕರು ಗೈರಾಗುತ್ತಾರೆ ಎನ್ನುವುದರ ಮೇಲೆ ನಾವು ಏನು ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇವೆ. ನಮ್ಮ ಪ್ರತಿಭಟನೆ ಇದ್ದೆ ಇರುತ್ತದೆ ಎಂದು ಶ್ರೀರಾಮುಲು ಹೇಳಿದರು.