ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮಂಡಿಸುತ್ತಿದ್ದಾರೆ. ಇಲ್ಲಿ ಪ್ರಮುಖ ಅಂಶಗಳನ್ನು ನೀಡಲಾಗಿದೆ.
* ಕಾಯಕ ಯೋಜನೆ ಜಾರಿ ಮೂಲಕ ಸ್ವಸಹಾಯ ಸಂಘಕ್ಕೆ ಬಂಪರ್ ಸಾಲ ಕೊಡುಗೆ. 10 ಲಕ್ಷದವರೆಗೆ ಸಾಲ, ಮೊದಲ 5 ಲಕ್ಷ ಶೂನ್ಯ ಬಡ್ಡಿ ಸಾಲ. ಮತ್ತೆ 5 ಲಕ್ಷಕ್ಕೆ ಶೇ.4 ರಷ್ಟು ಬಡ್ಡಿಯಲ್ಲಿ ಸಾಲ ನೀಡಿಕೆ.
Advertisement
* ಪ್ರಸ್ತುತ ಜಾರಿಯಲ್ಲಿರುವ 108 ಮತ್ತು 104 ತುರ್ತು ಸೇವೆಯ ಸಹಾಯವಾಣಿ ಯೋಜನೆ ವಿಸ್ತರಣೆ
Advertisement
* ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲು 40 ಕೋಟಿ ವೆಚ್ಚದಲ್ಲಿ ಯೋಜನೆ
Advertisement
* ಹೃದಯ, ಮೂತ್ರಪಿಂಡ ಯಕೃತ್ ಸೇರಿದಂತೆ ಅಂಗಾಂಗ ಕಸಿಗಾಗಿ ಪ್ರತ್ಯೇಕ 30 ಕೋಟಿರೂ. ನಿಗದಿ
Advertisement
* ವಿಜಯಪುರದಲ್ಲಿ ಕಾರ್ಡಿಯಾಲಜಿ ಮತ್ತು ಅಂಕಾಲಜಿ ಘಟಕ
* ಬೆಂಗಳೂರಿನ ಹೊರವಲಯದಲ್ಲಿ 1, 950 ಕೋಟಿ ವೆಚ್ಚದಲ್ಲಿ 65 ಕಿ.ಮೀ ಉದ್ದದ ಫೆರಿಫರಲ್ ರಿಂಗ್ ರಸ್ತೆ. ಕೆಂಪೇಗೌಡ ಬಡಾವಣೆಯಲ್ಲಿ 3 ಸಾವಿರ ಹೊಸ ನಿವೇಶನ ಹಂಚಿಕೆ.
* ಪೀಣ್ಯದಲ್ಲಿ 10 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ.
* ಬಾರ್ ಕೌನ್ಸಿಲ್ 5 ಕೋಟಿರೂ. ಅನುದಾನ
* ಡಾ.ರಾಜ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗಾ ಕೇಂದ್ರ.
* ಬೆಂಗಳೂರಿನಲ್ಲಿ ಸಾರಿಗೆ ಸಂಪರ್ಕ ಕಲ್ಪಿಸಲು ಎಲಿವೇಟೆಡ್ ಕಾರಿಡಾರ್. ಈ ಮೂಲಕ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ. ನಗರದ 6 ಕಡೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕಾಗಿ 15,825 ಕೋಟಿ ರೂ. ಮೀಸಲು. ಪ್ರಸಕ್ತ ವರ್ಷದಲ್ಲಿ ಸಾವಿರ ಕೋಟಿ ರೂ. ಅನುದಾನ.
* ಹಿಂದುಳಿದ ಮಠಗಳಿಗೆ ಅನುದಾನ. ಹಿರಿಯರ ಮಾಸಾಶನ 600ರಿಂದ 1 ಸಾವಿರ ರೂ. ಗೆ ಹೆಚ್ಚಳ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂ. ಮೀಸಲು.
* ಹಿಂದುಳಿದ ಮಠಗಳಿಗೆ 25 ಕೋಟಿ ರೂ. ಅನುದಾನ. ಕಾಗಿನೆಲೆ ಕನಕಗುರು ಪೀಠ, ಭಗೀರಥ ಪೀಠ, ಮಧುರೈ ಮಾದಾರ ಚೆನ್ನಯ್ಯ ಗುರುಪೀಠ, ಸಿದ್ದರಾಮೇಶ್ವರ ಪೀಠ, ವಾಲ್ಮೀಕಿ ಗುರುಪೀಠ, ಯಾದವ ,ಮಹಾ ಸಂಸ್ಥಾನ, ಮಡಿವಾಳ ಗುರುಪೀಠಕ್ಕೆ ಅನುದಾನ.
* 3 ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಖಾಸಗಿ ಕಂಪನಿಗೆ 3 ಕೋಟಿ ಷೇರು ಬಂಡವಾಳ
* ಅಮ್ಯೂಸ್ ಪಾರ್ಕ್, ಜಲಕ್ರೀಡೆ ಸೌಲಭ್ಯ ಅಭಿವೃದ್ಧಿ
* ಹಾಸನ ಜಿಲ್ಲೆಯಲ್ಲಿ PWD ಇಲಾಖಾ ಅನುದಾನದಲ್ಲಿ ಹೊಸ ವರ್ತುಲ ರಸ್ತೆ ನಿರ್ಮಾಣಕ್ಕೆ 30 ಕೋಟಿ ರೂ.
* ಶಿಕ್ಷಣಕ್ಕಾಗಿ 150 ಕೋಟಿ ಮೀಸಲು. ಕನ್ನಡ ಮಾಧ್ಯಮದ ಜೊತೆಗೆ 1000 ಇಂಗ್ಲಿಷ್ ಮಾಧ್ಯಮ ಶಾಲೆ. ಅನುದಾನಿತ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳ ವಿಲೀನ.
* ಅಂಗನವಾಡಿ ಕೇಂದ್ರಗಳನ್ನು ಬಾಲಸ್ನೇಹ ಕೇಂದ್ರಗಳನ್ನಾಗಿ ಪರಿವರ್ತನೆ. 4100 ಅಂಗನವಾಡಿ ಕೇಂದ್ರಗಳು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರ. ಹಂತ ಹಂತವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭ.
* ಸರ್ಕಾರಿ ಕಾಲೇಜುಗಳ ದುರಸ್ಥಿಗೆ 250 ಕೋಟಿ ರೂ. ಮೀಸಲು. ಇನ್ನು ತುಮಕೂರಿನಲ್ಲಿ ಕ್ರೀಡೆ ಹಾಗೂ ಅಂಗಸಾಧನೆ ವಿವಿ ಸ್ಥಾಪನೆ.
* ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿವಿ ಸ್ಥಾಪನೆ. ಇಲ್ಲಿ ಭದ್ರತಾ ಸಿಬ್ಬಂದಿಗೆ ಉತ್ತಮ ತರಬೇತಿ.
* ತಾಂಡಾಗಳು, ಎಸ್ ಸಿ- ಎಸ್ ಟಿ ಅಭಿವೃದ್ಧಿಗಾಗಿ ಪ್ರಗತಿ ಕಾಲೋನಿ ಯೋಜನೆ ಜಾರಿ . ಕನಿಷ್ಠ 1 ಕೋಟಿಯಿಂದ ಗರಿಷ್ಠ 5 ಕೋಟಿವರೆಗೆ ಅನುದಾನ
* ಎಸ್ ಸಿ-ಎಸ್ ಟಿ ಯುವಕರಿಗೆ ಉದ್ಯೋಗ ತರಬೇತಿ ನೀಡಲು 15 ಕೋಟಿ ಮೀಸಲು
* ವಿಕಲಚೇತನರಿಗೆ ಕೂಡ ಬಂಫರ್ ಆಫರ್ ನೀಡಲಾಗಿದ್ದು, ಆಧಾರ್ ಸ್ವಯಂ ಉದ್ಯೋಗ ಯೋಜನೆಯಡಿಯ ಸಾಲದ ಮೊತ್ತ ಹೆಚ್ಚಳ. 35 ಸಾವಿರದಿಂದ 1 ಲಕ್ಷಕ್ಕೆ ಏರಿಕೆ, ಶೇ. 50ರಷ್ಟು ಸಬ್ಸಿಡಿ. ಪ್ರತಿ ಜಿಲ್ಲೆಗೆ ಒಂದು ವೃದ್ಧಾಶ್ರಮ, ವಿಕಲಚೇತನರ ಸಮೀಕ್ಷೆ. ಇನ್ನು ವಿಕಲಚೇತನರಿಗೆ ನೀಡಿರುವ ಸಾಲಮನ್ನಾ. 2014ರಿಂದ ಸುಸ್ತಿಯಾಗಿರುವ ಬಡ್ಡಿ ಕೂಡ ಮನ್ನಾ. ವಿಕಲಚೇತನರಿಗೆ 20 ಎಕರೆಯಲ್ಲಿ ಕ್ಯಾಂಪಸ್
* ಗರ್ಭಿಣಿಯರಿಗೆ ಬಂಪರ್ ಆಫರ್ . ಪ್ರತೀ ತಿಂಗಳು 1000 ಭತ್ಯೆ, 350 ಕೋಟಿ ರೂ. ಮೀಸಲು. ನವೆಂಬರ್ 2018ರಿಂದ ಯೋಜನೆ ಜಾರಿ
* ಅನ್ನಭಾಗ್ಯ ಯೋಜನೆಗೆ ಕತ್ತರಿ. 2 ಕೆ.ಜಿ ಅಕ್ಕಿ ಬದಲು 1 ಕೆ.ಜಿ ಪಾಮ್ ಎಣ್ಣೆ, 1 ಕೆ.ಜಿ ಉಪ್ಪಿ, 1 ಕೆ,ಜಿ ಸಕ್ಕರೆ, ಅರ್ಧ ಕೆ.ಜಿ ತೊಗರಿ ಬೇಳೆ
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ಅನುದಾನ
* ಪ್ರಾಥಮಿಕ ಶಿಕ್ಷಣಕ್ಕೆ 26 ಸಾವಿರದ 581 ಕೋಟಿ ರೂ.
* ಆರೋಗ್ಯ ಇಲಾಖೆಗೆ 9 ಸಾವಿರದ 317 ಕೋಟಿ ರೂ. ಅನುದಾನ. 2 ಸಾವಿರದ 672 ಕೋಟಿ ರೂ. ಹೆಚ್ಚಳ
* ಕೃಷಿ ಇಲಾಖೆಗೆ 1, 471 ಕೋಟಿ ರೂಪಾಯಿ ಹೆಚ್ಚಳ
* ಜಲಸಂಪನ್ಮೂಲ ಇಲಾಖೆಗೆ 18 ಸಾವಿರದ 142 ಕೋಟಿ ರೂ. ಅನುದಾನ
* ಸಂಧ್ಯಾಸುರಕ್ಷೆ ಯೋಜನೆ 1, 000ರೂ. ಗೆ ಏರಿಕೆ
* ಒಂದೇ ಹಂತದಲ್ಲಿ ಸುಸ್ತಿ ಬೆಳೆ ಸಾಲಮನ್ನಾ. ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರಗಳ ಅಧಿಕಾರಿಗಳ ಕುಟುಂಬಗಳ ಸಾಲಮನ್ನಾ ಇಲ್ಲ. 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ಹಾಗೂ ಇತರೆ ಅನರ್ಹ ಕೃಷಿ ಸಾಲಗಾರರ ಸಾಲಮನ್ನಾ ಇಲ್ಲ. ಹೊಸ ಸಾಲ ನೀಡಲು 6 ಸಾವಿರ ಕೋಟಿ ರೂ. ನಿಗದಿ.
* ನಮ್ಮ ಮೆಟ್ರೋ 3 ನೇ ಹಂತ ಅಭಿವೃದ್ಧಿ. ಜೆ.ಪಿ ನಗರದಿಂದ ಕೆ. ಆರ್ ಪುರಂ ವರೆಗೆ- 42.75 ಕಿ.ಮೀ. ಟೋಲ್ ಗೇಟ್ ನಿಮದ ಕಡಬಗೆರೆವರೆಗೆ- 12.5ಕಿ.ಮೀ., ಗೊತ್ತಿಗೆರೆಯಿಂದ ಬಸವಪುರವರೆಗೆ- 3.7 ಕಿ.ಮೀ., ಆರ್ ಕೆ ಹೆಗ್ಡೆ ನಗರದದಿಂದ ಏರೋಸ್ಪೇಸ್ ಪಾರ್ಕ್ ವರೆಗೆ- 18.95 ಕಿ.ಮೀ, ಕೋಗಿಲು ಕ್ರಾಸ್ ನಿಂದ ರಾಜಾನುಕುಂಟೆವರೆಗೆ- 10.6 ಕಿ.ಮೀ.
* ಶಿಕ್ಷಣಕ್ಕಾಗಿ 150 ಕೋಟಿ ರೂ. ಮೀಸಲು, ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ
* 7 ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿ ಒದಗಿಸಲು 500 ಕೋಟಿ
* ಮೋಟಾರು ವಾಹನ ದುಬಾರಿ
* ಹಾಸನ ಹಾಲು ಒಕ್ಕೂಟಕ್ಕೆ, ಮೆಘಾ ಡೈರಿ ನಿರ್ಮಾಣಕ್ಕೆ 50 ಕೋಟಿ ರೂ. ಬೆಂಗಳೂರಿನ ತಲಘಟ್ಟಪುರದಲ್ಲಿ ರೇಷ್ಮೇ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ. 3 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ರೇಷ್ಮೇ ಮಾರುಕಟ್ಟೆ. ಚನ್ನಪಟ್ಟಣ ರೇಷ್ಮೆ, ಕೈಗಾರಿಕಾ ನಿಗಮದ ಪುನಶ್ಚೇತನಕ್ಕೆ 5 ಕೋಟಿ.
* 2 ಲಕ್ಷ ರೂ. ವರೆಗಿನ ಎಲ್ಲಾ ಸಾಲ ಮನ್ನಾ. ಇಸ್ರೇಲ್ ಮಾದರಿ ಕೃಷಿ ಪದ್ಧತಿಗೆ 150 ಕೋಟಿ. ರಾಜ್ಯಾದ್ಯಂತ 1.9 ಲಕ್ಷ ಕೃಷಿ ಹೊಂಡಗಳ ನಿರ್ಮಾಣ. ಕಾರವಾರ, ಯಾದಗಿರಿ, ತುಮಕೂರು, ಹಾವೇರಿಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ. ಅತ್ಯುತ್ತಮ ಗುಣಮಟ್ಟದ ಬೀಜ ದೃಢೀಕರಣ ಕೇಂದ್ರ ಸ್ಥಾಪನೆಗೆ ಸರ್ಕಾರ ನಿರ್ಧಾರ. ಕರ್ನಾಟಕ ರೈತರ ಸಲಹಾ ಸಮಿತಿ ರಚನೆ. ಪ್ರತೀ 2 ತಿಂಗಳಿಗೊಮ್ಮೆ ಸಭೆ. 5 ಸಾವಿರ ಹೆಕ್ಟೇರ್ ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ.
* ವಿದ್ಯುತ್ ದರ ಪ್ರತಿ ಯೂನಿಟ್ ಗೆ 20ಪೈಸೆ ಹೆಚ್ಚಳ
* ರಾಮನಗರದ ಕನಕಪುರದಲ್ಲಿ ವೈದ್ಯಕೀಯ ಕಾಲೇಜು, ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 40 ಕೋಟಿ ರೂ. ಇನ್ನು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪನೆಗೆ 12 ಕೋಟಿ ಮೀಸಲು.
#Bengaluru: It is a new experience for me as a finance minister. I have taken up this as a challenge to give a surplus budget: Karnataka CM HD Kumaraswamy before presenting the government's first budget pic.twitter.com/X1IpRqQiaG
— ANI (@ANI) July 5, 2018
* ಮಂಡ್ಯದಲ್ಲಿ ಮೇಲ್ದರ್ಜೆಯ 800 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ರಾಜ್ಯದ ಎಲ್ಲಾ ತಾಲೂಕುಗಳಲ್ಲಿ 247 ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆ, 211 ಕೋಟಿ ಮೀಸಲು
* ಸ್ವಸಹಾಯ ಸಂಘಕ್ಕೆ ಬಂಪರ್ ಸಾಲ ಕೊಡುಗೆ. ಸ್ವಸಹಾಯ ಸಂಘಗಳ ಆದಾಯ ಹೆಚ್ಚಿಸಲು ಕಾಯಕ ಹೊಸ ಯೋಜನೆ
* ತೆರಿಗೆದಾರರ ಸಾಲಮನ್ನಾ ಇಲ್ಲ. ಸಾಲ ಕಟ್ಟಿರುವ ರೈತರಿಗೆ ಹಣ ಪಾವತಿ
* ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್
* ರಾಜ್ಯದಲ್ಲಿ ಮದ್ಯ ದುಬಾರಿ
* ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಶೇ. 30ರಿಂದ 32ಕ್ಕೆ ಏರಿಕೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ 1ರೂ. 14 ಪೈಸೆ ಹೆಚ್ಚಳ. ಡೀಸೆಲ್ ಮೇಲಿನ ಸೆಸ್ ಶೇ. 19ರಿಂದ 21ಕ್ಕೆ ಏರಿಕೆ
* ದೋಸ್ತಿ ಸರ್ಕಾರದ ಮೊದಲ ಬಜೆಟ್ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ
* ಕೆಲ ಷರತ್ತುಗಳೊಂದಿಗೆ ಸಾಲಮನ್ನಾ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಎಲ್ಲಾ ಯೋಜನೆ ಮುಂದುವರಿಯುವ ಸಾಧ್ಯತೆಗಳಿವೆ.
* ಬಜೆಟ್ ಗಾತ್ರ 2 ಲಕ್ಷ 18 ಸಾವಿರ ಕೋಟಿಯಾಗಿದ್ದು, ಕಳೆದ ಬಾರಿಗಿಂತ 9 ಸಾವಿರ ಕೋಟಿ ಹೆಚ್ಚಳ. ಮೊದಲ ಹಂತದಲ್ಲಿ ಒಂದೂವರೆ ಲಕ್ಷದ ವರೆಗಿನ ಎಲ್ಲಾ ಸಾಲಮನ್ನಾ ಸಾಧ್ಯತೆ.