ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಇಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ 2018-19ರ ಬಜೆಟ್ ಮಂಡಿಸಿದ್ದಾರೆ. ಇಂದಿನ ಕುಮಾರಸ್ವಾಮಿ ಬಜೆಟ್ ನಲ್ಲಿ ಮದ್ಯದ ಮೇಲಿನ ಸುಂಕವನ್ನು ಅಧಿಕ ಮಾಡಿ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ.
ಅಬಕಾರಿ ಇಲಾಖೆಗೆ 2018-19 ನೇ ಸಾಲಿಗೆ 18,750 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿತ್ತು. ಜೂನ್ -2018 ರ ಅಂತ್ತಕ್ಕೆ 4,674 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿರುತ್ತದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
Advertisement
Advertisement
ಮದ್ಯ ಎಲ್ಲಾ 18 ಫೋಷಿತ ಬೆಲೆ ಸ್ಲಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ-ಅದರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇಕಡ 4ರಷು ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ ಎಂದರು.
Advertisement
ಇದರೊಂದಿಗೆ ಮತ್ತು ಪರಿಣಾಮಕಾರಿಯಾದ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ ಇಲಾಖೆಯು 2018-19ನೇ ಆರ್ಥಿಕ ವರ್ಷಕ್ಕೆ 19,750 ಕೋಟಿ ರೂ. ಪರಿಷ್ಕೃತ ರಾಜಸ್ವ ಸಂಗ್ರಹಣೆ ಗುರಿಯನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ.
Advertisement
95 ಪುಟಗಳ ಬಜೆಟ್ ಆಗಿದ್ದು, ಇಂದಿನ ಬಜೆಟ್ ಗಾತ್ರ 2 ಲಕ್ಷ 18 ಸಾವಿರ 488 ಕೋಟಿ ರೂ. ಆಗಿದೆ.