ಸಿಎಂ ಸುದೀರ್ಘ ಬಜೆಟ್ ಓದು ಮುಕ್ತಾಯ
3.14 ಗಂಟೆ ಕಾಲ 181 ಪುಟಗಳ ಬಜೆಟ್ ಪುಸ್ತಕ ಓದಿ ಮುಗಿಸಿದ ಸಿದ್ದರಾಮಯ್ಯ
ಬಜೆಟ್ ಗಾತ್ರ: 3,71,383 ಕೋಟಿ ರೂ.
ಒಟ್ಟು ಸ್ವೀಕೃತಿ: 3,68,674 ಕೋಟಿ
ರಾಜಸ್ವ ಸ್ವೀಕೃತಿ: 2,63,178 ಕೋಟಿ
ಒಟ್ಟು ವೆಚ್ಚ: 3,71,383 ಕೋಟಿ
Advertisement
ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಗೊಂದು ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆ
20 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ
Advertisement
ಐಐಟಿ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ಅಭಿವೃದ್ಧಿ
Advertisement
ತಿರುಮಲ, ಶ್ರೀಶೈಲ, ವಾರಣಾಸಿಯಲ್ಲಿ ವಸತಿ ನಿಲಯ
Advertisement
320 ಕಿಮೀ ಉದ್ದದ ಕರಾವಳಿ ತೀರದ ಅಭಿವೃದ್ಧಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗಕ್ಕೆ ಅಸ್ತು
ನಮ್ಮ ಮೆಟ್ರೋ ಹೆಚ್ಚುವರಿ 44 ಕಿಮೀ ವಿಸ್ತರಣೆ
1,134 ಹೊಸ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ನಿರ್ಧಾರ
ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯುವುದು
ಸಿರಿಧಾನ್ಯ ಉತ್ಪನ್ನ ಪ್ರೋತ್ಸಾಹಕ್ಕೆ ‘ನಮ್ಮ ಮಿಲ್ಲೆಟ್’ ಕಾರ್ಯಕ್ರಮ
ಕನ್ನಡ ಕಸ್ತೂರಿ ಎಂಬ ಯಂತ್ರಾನುವಾದ ತಂತ್ರಾಂಶದ ಅಭಿವೃದ್ಧಿಗೆ ಕ್ರಮ
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್
ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯ.
ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಕ್ರಮ
2024-25 ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ
ಮಂಗಳೂರಿನ ಹಜ್ ಭವನದ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕ್ರೀಡಾಪಟುಗೆ 6 ಕೋಟಿ
ಕಲಬುರಗಿಯಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ
ನಮ್ಮ ಮೆಟ್ರೋ ಹಂತ 3 ಕ್ಕೆ 15611 ಕೋಟಿಗೆ ಅನುಮೋದನೆ
ಬೆಂಗಳೂರು-ಮಂಡ್ಯ-ಮೈಸೂರು ವಾಹನ ಸಂಚಾರ ದಟ್ಟಣೆ ತಡೆಗಟ್ಟಲು ಪ್ಲೈಓವರ್‌ಗಳ ನಿರ್ಮಾಣ
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ
ಬೆಂಗಳೂರಲ್ಲಿ ಮಧ್ಯರಾತ್ರಿ 1 ಗಂಟೆ ವರೆಗೂ ನೈಟ್‌ಲೈಫ್
5 ಸಾವಿರ ST ಯುವಕ-ಯುವತಿಯರಿಗೆ ಡ್ರೋನ್ ತರಬೇತಿ
ವಿವಿ ಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ 100 ವಿದ್ಯಾರ್ಥಿಗಳಿಗೆ 25 ಸಾವಿರ ಶಿಷ್ಯ ವೇತನ.
ಪ್ರವಾದೋದ್ಯಮ ಉತ್ತೇಜನಕ್ಕಾಗಿ 10 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಯೋಜನೆ ಅಥವಾ ರೋಫ್ ವೇ ನಿರ್ಮಾಣ.
2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹದ ಅಂದಾಜು
ಮೋಟಾರು ವಾಹನ- 13,000 ಕೋಟಿ.
ನೋಂದಣಿ-ಮುದ್ರಣ-26,000 ಕೋಟಿ
ಅಬಕಾರಿ- 38525 ಕೋಟಿ.
ವಾಣಿಜ್ಯ ತೆರಿಗೆ- 1,10,000 ಕೋಟಿ.
ಇತರೆ ತೆರಿಗೆ- 2368 ಕೋಟಿ.
ದೇವದಾಸಿಯರ ಮಾಸಾಶನ 2,000 ರೂ.ಗೆ ಹೆಚ್ಚಳ
ಭಾನುವಾರವೂ ಉಪನೋಂದಣಾಧಿಕಾರಿ ಕಚೇರಿ ಓಪನ್
ಅಂಗನವಾಡಿ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಲು ನಿರ್ಧಾರ
ಸೋಲರ್ ಪಂಪ್‌ಸೆಂಟ್ ಹಾಕುವ ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಸಹಾಯಧನ 30% ರಿಂದ 50% ಗೆ ಹೆಚ್ಚಳ
ಮಂಡ್ಯ ಮೈಸೂರು ಶುಗರ್ ಕಾರ್ಖಾನೆ ಜಾಗದಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ನಿರ್ಧಾರ
ರೈತ ಮಹಿಳೆಯರಿಗೆ ಹೈನುಗಾರಿಕೆಗೆ ಪ್ರೋತ್ಸಾಹ
6% ರಷ್ಟು ಬಡ್ಡಿ ದರದಲ್ಲಿ ಪ್ರೋತ್ಸಾಹ
ವಿವಿಧ ಬರ ಪರಿಹಾರ ಕ್ರಮಕ್ಕೆ ಬಜೆಟ್‌ನಲ್ಲಿ 500 ಕೋಟಿ ಘೋಷಣೆ
2024-25ನೇ ಸಾಲಿನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಖರ್ಚು?
ಸಾಲ ತೀರಿಕೆ-18 ಪೈಸೆ
ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ
ಶಿಕ್ಷಣ-11ಪೈಸೆ
ಆರೋಗ್ಯ-4 ಪೈಸೆ
ಇತರೆ ಸಾಮಾಜಿಕ ಸೇವೆಗಳು- 3 ಪೈಸೆ.
ಕೃಷಿ ನೀರಾವರಿ, ಮತ್ತು ಗ್ರಾಮೀಣಾಭಿವೃದ್ಧಿ- 14ಪೈಸೆ
ಇತರೆ ಆರ್ಥಿಕ ಸೇವೆಗಳು- 15ಪೈಸೆ
ಸಮಾಜ ಕಲ್ಯಾಣ-15 ಪೈಸೆ
ಇತರೆ ಸಾಮಾನ್ಯ ಸೇವೆಗಳು- 17 ಪೈಸೆ.
ಪ್ರಮುಖ ನೀರಾವರಿ ಯೋಜನೆಗಳಿಗೆ ಹಣ ಕೊಡದ ಸರ್ಕಾರ
ಮೇಕೆದಾಟು, ಎತ್ತಿನ ಹೊಳೆ, ಕೃಷ್ಣಾ ಮೇಲ್ದಂಡೆ ಹಂತ-3, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಹಣ ಮೀಸಲಿಡದ ಸರ್ಕಾರ
ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳಿಗೆ ಕೇಂದ್ರದಿಂದ ಸಿಗಬೇಕಾದ ಅಗತ್ಯ ಅನುಮತಿಗಳು ಹಾಗೂ ಘೊಷಣೆಯಾಗಿರುವ ಅನುದಾನಕ್ಕಾಗಿ ಎದುರು ನೋಡುವ ಬಗ್ಗೆ ಪ್ರಸ್ತಾಪ
ರೈತರನ್ನ ಸ್ವಾವಲಂಬಿ ಮಾಡಲು 1174 ಕೋಟಿ ವೆಚ್ಚದಲ್ಲಿ 40 ಸಾವಿರ ಜಾಲಮುಕ್ತ ಸೋಲರ್ ಪಂಪ್ ಸೆಟ್ ಯೋಜನೆ
ಬೆಂಗಳೂರಿನ ಬಿಐಇಸಿ ಯಿಂದ ತುಮಕೂರುವರೆಗೆ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಪ್ರಾರಂಭಕ್ಕೆ ನಿರ್ಧಾರ
ರಾಜ್ಯದಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು 20 ಕೋಟಿ ರೂ.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ.
ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ 50 ಕೋಟಿ.
ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 200 ಕೋಟಿ.
ಬೌದ್ದರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನ ಪಾಲಿ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ.
ಸಿಖ್ಖ್ ಲಿಗಾರ್ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ 2 ಕೋಟಿ.
ಬೀದರ್‌ನಲ್ಲಿರೋ ಶ್ರೀ ನಾನನ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗೆ 1 ಕೋಟಿ
ಬಜೆಟ್ ವಿರೋಧಿಸಿ ಸದನದಿಂದ ಹೊರಬಂದ ಬಿಜೆಪಿ ಶಾಸಕರು
ಬಜೆಟ್ ವಿರೋಧಿಸಿ ವಿಪಕ್ಷ ಬಿಜೆಪಿ ಬಹಿಷ್ಕಾರ
ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು
ಏನಿಲ್ಲಾ ಏನಿಲ್ಲಾ.. ಬುರುಡೆ ಬುರುಡೆ ಎಂದು ಕೂಗುತ್ತಾ ಬಿಜೆಪಿ ಶಾಸಕರ ಸಭಾತ್ಯಾಗ
ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಬಜೆಟ್ ವಿರೋಧಿಸಿ ಪ್ರತಿಭಟನೆ ಸಾಧ್ಯತೆ
ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಪೋಸ್ಟರ್ ಅಂಟಿಸಿದ ಬಿಜೆಪಿ ಶಾಸಕರು
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
7ನೇ ವೇತನ ಆಯೋಗ ಜಾರಿ ಮುನ್ಸೂಚನೆ
ಸಮಿತಿ ವರದಿ ಆಧರಿಸಿ ಕ್ರಮ
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್
90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ವಿತರಣೆ
ಸಿಎಂ ಬಜೆಟ್ ಮಂಡನೆ ವೇಳೆ ಬಿಜೆಪಿ ಸದಸ್ಯರ ಗದ್ದಲ
ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ
ತೆರಿಗೆ ಸಂಗ್ರಹ ವಿಚಾರವಾಗಿ ಆರೋಪ
ಜಿಎಸ್‌ಟಿ ಹಣ ಕಡಿಮೆ ಕೊಟ್ಟಿದ್ದಕ್ಕೆ ಬಜೆಟ್‌ನಲ್ಲಿ ಆರೋಪ
ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದ ಹಾಗೆ ಬಿಜೆಪಿ ಕೆಂಡಾಮಂಡಲ.
80 ವರ್ಷ ಮೇಲ್ಪಟ್ಟವರಿಗೆ ‘ಅನ್ನ ಸುವಿಧಾ’ ಯೋಜನೆ
‘ಅನ್ನ ಸುವಿಧಾ’ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲವರಿ ಆಪ್
80 ವರ್ಷ ದಾಟಿದ ಹಿರಿಯ ನಾಗರಿಕರು ಇರುವ ಮನೆಗೆ ಈ ಯೋಜನೆ
ಇಲಾಖಾವಾರು ಅನುದಾನ
ಶಿಕ್ಷಣ – 44,422 ಕೋಟಿ
ಮಹಿಳಾ ಮತ್ತು ಮಕ್ಕಳ ಇಲಾಖೆ – 34,406 ಕೋಟಿ
ಇಂಧನ – 23,159 ಕೋಟಿ
ಗ್ರಾಮೀಣಾಭಿವೃದ್ಧಿ – 21,160 ಕೋಟಿ
ಒಳಾಡಳಿತ/ಸಾರಿಗೆ – 19,777 ಕೋಟಿ
ನೀರಾವರಿ – 19,179 ಕೋಟಿ
ನಗರಾಭಿವೃದ್ಧಿ- 18,155 ಕೋಟಿ
ಕಂದಾಯ – 16,170 ಕೋಟಿ
ಆರೋಗ್ಯ – 15,145 ಕೋಟಿ
ಸಮಾಜಕಲ್ಯಾಣ – 13,334 ಕೋಟಿ
ಲೋಕೋಪಯೋಗಿ – 10,424 ಕೋಟಿ
ಆಹಾರ ಇಲಾಖೆ – 9963 ಕೋಟಿ
ಕೃಷಿ , ತೋಟಗಾರಿಕೆ – 6,688 ಕೋಟಿ
ಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿ
ಇತರೆ – 1,24,593 ಕೋಟಿ
ಬಿಯರ್ ಸ್ಲ್ಯಾಬ್ ದರ ಪರಿಷ್ಕರಣೆ
ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IMl ಬಿಯರ್ ಸ್ಲಾಬ್ ಪರಿಷ್ಕರಣೆ
ಬಜೆಟ್ ಗಾತ್ರ: 3.71 ಲಕ್ಷ ಕೋಟಿ ರೂ.
181 ಪುಟಗಳ ಬಜೆಟ್ ಪುಸ್ತಕ
ತೆರಿಗೆ ಅನ್ಯಾಯದ ಬಗ್ಗೆ ಪ್ರಸ್ತಾಪ
ತಮ್ಮ 15ನೇ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ.
ಬಜೆಟ್ ಮಂಡನೆ ಆರಂಭ
ಬಜೆಟ್ ಅಧಿವೇಶನದಲ್ಲೇ ಶ್ವೇತಪತ್ರ ಮಂಡನೆ
ಈ ಬಜೆಟ್ ಅಧಿವೇಶನದಲ್ಲೇ ರಾಜ್ಯದ ಕಳೆದ 5 ವರ್ಷಗಳ ಹಣಕಾಸು ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಸಚಿವರಿಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ. ಮುಂದಿನ ವಾರ ಶ್ವೇತಪತ್ರ ಹೊರಡಿಸುವ ಸಾಧ್ಯತೆ.
ಗ್ಯಾರಂಟಿ ಬಜೆಟ್
ಜನರ ಗ್ಯಾರಂಟಿ + ಅಭಿವೃದ್ಧಿ ಗ್ಯಾರಂಟಿ ಬಜೆಟ್ ಎಂದು ಕ್ಯಾಬಿನೆಟ್‌ನಲ್ಲಿದ್ದ ಸಚಿವರಿಗೆ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕಾಂಗ್ರೆಸ್ ಶಾಲು ಹಾಕಲು ಕೈ ಶಾಸಕರಿಗೆ ಸೂಚನೆ
ಸಿಎಂ ಸಿದ್ದರಾಮಯ್ಯ ಬಜೆಟ್ ಓದುವ ವೇಳೆ ಕಾಂಗ್ರೆಸ್ ಶಾಲು ಹಾಕಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ಸೂಚನೆ – ವಿಧಾನಸಭೆ ಸಭಾಂಗಣ ಪ್ರವೇಶಿಸುವ ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಶಾಲು ಹಾಕಿ ಕಳುಹಿಸುತ್ತಿರುವ ಮುಖ್ಯಸಚೇತಕ ಅಶೋಕ್ ಪಟ್ಟಣ
ಕ್ಯಾಬಿನೆಟ್ ಮೀಟಿಂಗ್
ಸಂಪುಟ ಸಹೋದ್ಯೋಗಿಗಳ ಜೊತೆ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಮೀಟಿಂಗ್ – ಕ್ಯಾಬಿನೆಟ್‌ನಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯಲಿರುವ ಸಿಎಂ
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಆಗಮನ, ಸಚಿವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಗತ.
ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ ಶುರು ಮಾಡಲಿರುವ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್
ಕರ್ನಾಟಕದ ಇತಿಹಾಸದಲ್ಲಿ 15ನೇ ಬಾರಿ ಬಜೆಟ್ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆ ಬರೆಯಲಿದ್ದಾರೆ.
ಹೊಸ ಜಿಲ್ಲೆ ಘೋಷಣೆಗಳು ಸದ್ಯಕ್ಕಿಲ್ಲ
ಹೊಸ ಜಿಲ್ಲೆ ಘೋಷಣೆಗಳು ಸದ್ಯಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.