ಬೆಂಗಳೂರು: ಕರ್ನಾಟಕ ಬಜೆಟ್‌ನಲ್ಲಿ (Karnattaka Budget) ಸಿಎಂ ಬೊಮ್ಮಾಯಿ (CM Basavaraj Bommai) ಮಕ್ಕಳು, ಯುವ ಜನತೆ, ಮಹಿಳೆಯರಿಗೆ 9 ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.
1. ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ: ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ – 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.
Advertisement
2. ಮಕ್ಕಳ ಬಸ್ ಯೋಜನೆ: 100 ಕೋಟಿ ವೆಚ್ಚದಲ್ಲಿ 1000 ಹೊಸ ಕಾರ್ಯಾಚರಣೆ – ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಕ್ಕಳ ಬಸ್ ಯೋಜನೆ.
Advertisement
3. ಭೂಸಿರಿ ಯೋಜನೆ: ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 10 ಸಾವಿರ ರೂಪಾಯಿ ಹೆಚ್ಚುವರಿ ಸಹಾಯ ಧನ.
Advertisement
Advertisement
4. ಹಳ್ಳಿ ಮುತ್ತು ಯೋಜನೆ: ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದ, ಸಿಇಟಿ ಮೂಲಕ ಆಯ್ಕೆ ಆದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಸಂಪೂರ್ಣ ಶುಲ್ಕ ಸರ್ಕಾರವೇ ಭರಿಸುತ್ತದೆ – ಅತ್ಯುತ್ತಮ 500 ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. ಇದನ್ನೂ ಓದಿ: ಡಿಕೆಶಿ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ
5. ವಾತ್ಸಲ್ಯ ಯೋಜನೆ: ಗ್ರಾಮೀಣ ಪ್ರದೇಶದ 6 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಉಚಿತ ಆರೋಗ್ಯ ತಪಾಸಣೆ.
6. ಗೃಹಿಣಿ ಶಕ್ತಿ ಯೋಜನೆ: ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂ. ವಿತರಣೆ – 1 ಲಕ್ಷ ಗೃಹಿಣಿಯರಿಗೆ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ – ಸಂಘಟಿತ ವಲಯದಲ್ಲಿ ದುಡಿಯ ಮಹಿಳೆಯರಿಗೆ ಉಚಿಯ ಬಸ್ ಪಾಸ್, 1000 ಕೋಟಿ ಅನುದಾನ – ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್.
7. ನಮ್ಮ ನೆಲೆ ಯೋಜನೆ: ಗೃಹಮಂಡಳಿಯಿಂದ ಆರ್ಥಿಕ ದುರ್ಬಲ ವರ್ಗದವರಿಗೆ(EWS)10 ಸಾವಿರ ರೂ. ನಿವೇಶನ.
8. ‘ಕಲಿಕೆ ಜೊತೆಗೆ ಕೌಶಲ್ಯ’ ಯೋಜನೆ: ವಿದ್ಯಾರ್ಥಿಗಳಿಗೆ ಕೈಗಾರಿಕಾ ಆದ್ಯತಾ ಹಾಗೂ ಉದ್ಯಮಶೀಲ ತರಬೇತಿ.
9. ‘ಬದುಕುವ ದಾರಿ’ ಯೋಜನೆ: ಶಿಕ್ಷಣ ಅಪೂರ್ಣ ಆದವರಿಗೆ ಐಟಿಐಗಳಲ್ಲಿ 3 ತಿಂಗಳ ತರಬೇತಿ. ತರಬೇತಿ ವೇಳೆ ವೃತ್ತಿಪರ ಸರ್ಟಿಫಿಕೇಟ್ ಪಡೆಯಲು ಮಾಸಿಕ 1,500 ಸ್ಟೈಫಂಡ್. ತರಬೇತಿ ಬಳಿಕ 3 ತಿಂಗಳು 1500 ಶಿಶಿಕ್ಷು ಭತ್ಯೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k