ಬೆಂಗಳೂರು: ಕರ್ನಾಟಕ ಬಜೆಟ್‌ನಲ್ಲಿ ʼಯುವ ಸ್ನೇಹಿʼ ಮತ್ತು ʼಬದುಕಿನ ದಾರಿʼ ಹೆಸರಿನಲ್ಲಿ ಹೊಸ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಯುವ ಸ್ನೇಹಿ: ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು ‘ಯುವಸ್ನೇಹಿ ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲಾಗುವುದು.
Advertisement
Advertisement
ಬದುಕಿನ ದಾರಿ: ಹೊಸ ಯೋಜನೆಯಡಿ ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಇರುವ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ಅವಧಿಯ ವೃತ್ತಿಪರ ಸರ್ಟಿಫಿಕೇಟ್ ತರಬೇತಿ ಪಡೆಯಲು ಮಾಸಿಕ 1,500 ರೂ. ಗಳ ಶಿಷ್ಯವೇತನವನ್ನು ನೀಡಲಾಗುವುದು. ತರಬೇತಿಯನ್ನು ಪೂರ್ಣಗೊಳಿಸಿರುವವರಿಗೆ Apprenticeship ಕಾರ್ಯಕ್ರಮದಡಿಯಲ್ಲಿ 3 ತಿಂಗಳಿಗೆ ಮಾಸಿಕ 1,500 ರೂ. ಗಳ ಶಿಶಿಕ್ಷು ಭತ್ಯೆಯನ್ನು ನೀಡಲಾಗುವುದು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k