ಬೆಂಗಳೂರು: ಹಣಕಾಸು ಸಚಿವರಾದ ಸಿಎಂ ಯಡಿಯೂರಪ್ಪನವರು ಬಜೆಟ್ ಮಂಡಿಸುತ್ತಿದ್ದು, ಬಜೆಟ್ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗುತ್ತಿದೆ.
ಮುಖ್ಯಾಂಶಗಳು:
– ಕೇಂದ್ರದಿಂದ 1800 ಕೋಟಿ ರೂ. ಪರಿಹಾರ ಸಿಕ್ಕಿದೆ
– ಜಿಎಸ್‍ಟಿ ನಿರಿಕ್ಷಿಸಿದಷ್ಟು ಸಂಗ್ರಹವಾಗಿಲ್ಲ
– ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಎಸ್‍ಟಿ ಸಂಗ್ರಹ ಹೆಚ್ಚಳ
Advertisement
#Budget2020 #KarnatakaBudget #BudgetSpeech2020 #agriculture #Horticulture pic.twitter.com/E4WiO8SknH
— CM of Karnataka (@CMofKarnataka) March 5, 2020
Advertisement
– ಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ನೀಡುವ ಸೈಕಲ್ ಯೋಜನೆ ಸೇರಿದಂತೆ ಪ್ರಮುಖ ಯೋಜನೆ ಮುಂದುವರಿಕೆ
– ಹೊಸ ಕೃಷಿ ನೀತಿ ಜಾರಿಗೆ ಚಿಂತನೆ
– ಅತಿ ಸಣ್ಣ ರೈತರಿಗೆ ವರ್ಷಕ್ಕೆ 10 ಸಾವಿರ ರೂ ಯೋಜನೆ ಮುಂದುವರಿಕೆ
Advertisement
– ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಶೇ.3 ರಷ್ಟು ಹೆಚ್ಚಳ
– ಬೆಂಗಳೂರು ಕೆರೆ ಅಭಿವೃದ್ಧಿಗೆ 100 ಕೋಟಿ ರೂ.
Advertisement
– ಪ್ರತಿ ಇಲಾಖೆಗೆ ಬಜೆಟ್ ಇಲ್ಲ. ಎಲ್ಲಾ ಇಲಾಖೆ ಸೇರಿ 6 ವಲಯಗಳನ್ನ ವಿಂಗಡಿಸಿ ಬಜೆಟ್ ತಯಾರಿ.
– ರಾಜ್ಯದ ವಿವಿಧ ಏತ ನೀರಾವರಿಗಳಿಗೆ – 5000 ಕೋಟಿ ರೂ ಅನುದಾನ
– ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ನವಲೆ ಬಳಿ ಪರ್ಯಾಯ ಸಮತೋಲನ ಜಲಾಶಯ ನಿರ್ಮಾಣಕ್ಕೆ 20 ಕೋಟಿ ರೂ.ನಲ್ಲಿ ಯೋಜನಾ ವರದಿ
#Budget2020 #KarnatakaBudget #BudgetSpeech2020 #Mahadayi pic.twitter.com/yW9zQyGGH0
— CM of Karnataka (@CMofKarnataka) March 5, 2020
– ಕ್ರೈಸ್ತಸಮಯದಾಯದ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ
– ಸಾವಯವ ಕೃಷಿ ಪ್ರೋತ್ಸಾಹಿಸುವುದಕ್ಕೆ 200ಕೋಟಿ
– 1 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ
– 276 ಪಬ್ಲಿಕ್ ಶಾಲೆಗಳ ಆರಂಭಕ್ಕೆ ೧00 ಕೋಟಿ ಅನುದಾನ
– ಶಿಕ್ಷಕ ಮಿತ್ರ ಅಭಿವೃದ್ಧಿ ಮೊಬೈಲ್ ಆ್ಯಪ್ ಅಭಿವೃದ್ಧಿ, ಮನೆ ಮನೆಗೆ ಗಂಗೆ 10 ಲಕ್ಷ ಮನೆಗಳಿಗೆ ನೀರಿನಸಂಪರ್ಕ
-110 ಕಿತ್ತೂರು ರಾಣಿ ಚೆನ್ನಮ್ಮಶಿಶುಪಾಲನ ಕೇಂದ್ರ ಆರಂಭ,ಕಟ್ಟಡ ಕಾರ್ಮಿಕರಿಗೆ ೧೦ ಮೊಬೈಲ್ ಕ್ಲಿನಿಕ್
– ಮಹದಾಯಿ ಯೋಜನೆಗೆ 500 ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಧನ್ಯವಾದ
#Budget2020 #KarnatakaBudget #BudgetSpeech2020 #agriculture pic.twitter.com/kBFxA3EMe6
— CM of Karnataka (@CMofKarnataka) March 5, 2020
– ಬೆಂಗಳೂರು ಕೆರೆಗಳ ಅಭಿವೃದ್ಧಿಯ ಕ್ರಿಯಾಯೋಜನೆಗೆ 100 ಕೋಟಿ ರೂಗೆ ಅನುಮೋದನೆ
– ಕೆರೆಗಳ ಅಭಿವೃದ್ಧಿಗೆ 317 ಕೋಟಿ ರೂ ಮೀಸಲು
– ರಾಜಾ ಕಾಲುವೆಗಳ ಅಭಿವೃದ್ಧಿಗೆ – 200 ಕೋಟಿ ನಿಗದಿ
– ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು 200 ಕೋಟಿ ರೂ ನಿಗದಿ
– 110 ಹಳ್ಳಿಗಳಿಗೆ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿಗೆ 1000 ಕೋಟಿ ರೂ ಮೀಸಲು. ಈಸಾಲಿನಲ್ಲಿ 500 ಕೋಟಿ ರೂ ಅನುದಾನ
– ಬೆಂಗಳೂರಿಗೆ ಹೊಸ 4 ವಿದ್ಯುತ್ ಚಿತಾಗಾರ
#Budget2020 #Budgetkarnataka pic.twitter.com/gCUmJtYmhZ
— CM of Karnataka (@CMofKarnataka) March 5, 2020
– ಮಂತ್ರಾಲಯ , ಪಾಂಡರಪುರ ,ವಾರಾಣಾಸಿ ಶ್ರೀ ಶೈಲ ,ಉಜ್ಜೈನಿ ಪ್ರವಾಸಿ ಮಂದಿರಗಳಲ್ಲಿ ನಿರ್ಮಾಣಕ್ಕೆ 25 ಕೋಟಿ
– ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಪ್ರವಾಸಕ್ಕೆ 20 ಕೋಟಿ ಮೀಸಲು
– ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ ತಡೆಗೆ ಕ್ರಮ. ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರ ಹಾಗೂ ಹೆಬ್ಬಾಳ ಮುಖಾಂತರ ಅಂತರಾಷ್ಟ್ರೀಯ ಏರ್ ಪೋರ್ಟ್ ವರೆಗೆ 56 ಕಿಮೀ ಉದ್ದದ ಹೊರ ವರ್ತುಲ ರಸ್ತೆ ಮತ್ತು ಏರ್ ಪೋರ್ಟ್ ಮೆಟ್ರೋ ನಿರ್ಮಾಣಕ್ಕಾಗಿ 14,500 ಕೋಟಿ ರೂ. ಮೀಸಲು.
– ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ 1.5 ಕೋಟಿ, ಬೆಂಗಳೂರಿನ ಫಿಲ್ಮ್ ಸಿಟಿಗೆ 500 ಕೋಟಿ
– ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 100 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ 66 ಕೋಟಿ ನಿಗದಿ
– ಉತ್ತರ ಕನ್ನಡದಲ್ಲಿ ರಾಜ್ಯದ ಮೊದಲ ಕಡಲದಾಮ.
– ಬಿಎಂಟಿಸಿಗೆ ಪ್ರತಿ ವರ್ಷ 100 ಕೋಟಿ ರೂ ಸಹಾಯಧನ. ಒಟ್ಟು ಏಳು ವರ್ಷದವರೆಗೆ ಬಿಎಂಟಿಸಿಗೆ ಕೋಟಿ ರೂ ಸಹಾಯಧನ.
– 600 ಕೋಟಿ ರೂಗಳಲ್ಲಿ 1,500 ಡೀಸೆಲ್ ಬಸ್ ಗಳ ಖರೀದಿ
– 500 ಸಾಮಾನ್ಯ ಎಲೆಕ್ಟ್ರಿಕ್ ಬಸ್ ಗಳ ಖರೀದಿ.
#BUDGET2020-21 pic.twitter.com/loQTdNaS20
— CM of Karnataka (@CMofKarnataka) March 5, 2020
– 90 ಮೆಟ್ರೋ ಫೀಡರ್ ಎಲೆಕ್ಟ್ರಿಕ್ ಬಸ್‌ಗಳ ಖರೀದಿ
– ಬೆಂಗಳೂರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪರ್ಕಕ್ಕೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ
– 12 ಕಾರಿಡಾರ್ ಗಳಲ್ಲಿ ಎರಡನೇ ಹಂತದ ಬಸ್ ಆದ್ಯತಾ ಪಥ
– ರಾಮನಗರದಲ್ಲಿ ಸಾರ್ವಜನಿಕ- ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣ ಘಟಕ ಸ್ಥಾಪನೆ.
– ಹಂದಿ ಸಾಕಾಣಿಕೆ ಹೆಚ್ಚಳ ಮಾಡಲು “ಸಮಗ್ರ ವರಹಾ ಅಭಿವೃದ್ಧಿ ಯೋಜನೆ”ಪ್ರಾರಂಭ.
– ಕಾವೇರಿ ನೀರು ಸರಬರಾಜು ಐದನೇ ಹಂತದ ಕಾಮಗಾರಿಗೆ 5,550 ಕೋಟಿ ರೂ ನಿಗದಿ.
– ಬೆಂಗಳೂರು ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ರೂ
– ಖಾಸಗಿ ಸಹಭಾಗಿತ್ವದಲ್ಲಿ ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ
– ಬೆಂಗಳೂರಿನಲ್ಲಿ ಅತೀ ವೇಗದ ಇಂಟರ್ ನೆಟ್ ಸಂಪರ್ಕ. ಇದಕ್ಕಾಗಿ ಆಪ್ಟಿಕಲ್ ಫೈಬರ್ ಕೇಬಲ್ ಗಳ ಅಳವಡಿಕೆ
– ಬಸವ ಕಲ್ಯಾಣದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ, ಬಜೆಟ್ ನಲ್ಲಿ 100 ಕೋಟಿ ಮೀಸಲು
– ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ನೆರವು
– ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಕಲಾಕ್ಷೇತ್ರಗಳ ನಿರ್ಮಾಣ
– ಕಲಾಕ್ಷೇತ್ರಗಳ ನಿರ್ಮಾಣಕ್ಕೆ 60 ಕೋಟಿ ಅನುದಾನ
– ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಬರಲಿದೆ ಅವಳಿ ಗೋಪುರಗಳು
– 400 ಕೋಟಿ ರೂ. ವೆಚ್ಚದಲ್ಲಿ 25 ಅಂತಸ್ತಿನ ಅವಳಿ ಗೋಪುರಗಳು
– ಎಲ್ಲ ಸರ್ಕಾರಿ ಕಚೇರಿಗಳು ಈ ಅವಳಿ ಗೋಪುರಗಳಲ್ಲಿ ಕಾರ್ಯನಿರ್ವಹಣೆಗೆ ವ್ಯವಸ್ಥೆ ಪ್ಲಾನ್
– ಸಹಕಾರ ಕ್ಷೇತ್ರದ ಪ್ರಾಥಮಿಕ ಸಹಾಕರ ಕೃಷಿ ಬ್ಯಾಂಕ್, DCC ಬ್ಯಾಂಕ್ PACS ಬ್ಯಾಂಕ್, ಕೃಷಿ ಸುಸ್ತಿ ಸಾಲಗಳ ಬಡ್ಡಿ ಮನ್ನ.
– ಟ್ರಾಕ್ಟರ್, ಟಿಲ್ಲರ್ ಇತ್ಯಾದಿಗಳ ಖರೀದಿಗೆ ಮಾಡಿದ್ದ ಮಧ್ಯಮಾವಧಿ ,ದೀರ್ಘಾವಧಿ ಮೇಲಿನ ಕೃಷಿ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನ.
– ಇದಕ್ಕಾಗಿ 466 ಕೋಟಿ ಮೀಸಲು 92 ಸಾವಿರ ರೈತರಿಗೆ ಅನುಕೂಲ
ಮಠಗಳನ್ನ ಕೈ ಬಿಟ್ಟು ಜಾತಿಗೆ ಆದ್ಯತೆ!
– ಉಪ್ಪಾರ ನಿಗಮಕ್ಕೆ ೧೦ ಕೋಟಿ
– ವಿಶ್ವಕರ್ಮನಿಗಮಕ್ಕೆ ೨೫ ಕೋಟಿ
– ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ೫೦ ಕೋಟಿ
– ಆರ್ಯ ವೈಶ್ಯ ಅಭಿವೃಧ್ಧಿ ನಿಗಮ ೧೦ ಕೋಟಿ
– ಕುಂಬಾರ ಸಮುದಾಯಕ್ಕೆ ೨೦ ಕೋಟಿ
– ಗೊಲ್ಲ ಸಮುದಾಯಕ್ಕೆ ೧೦ ಕೋಟಿ
– ಡಿ ದೇವರಾಜ್ ಅರಸು ನಿಗಮದಿಂದ 1 ಸಾವಿರ ಯುವಕರಿಗೆ ಬೈಕ್ ನೀಡುವ ಯೋಜನೆ.
– ಇ ವಾಣಿಜ್ಯ ಸಂಸ್ಥೆಗಳ ಉತ್ಪನ್ನ ಸರಬರಾಜು ಮಾಡೋ ಯುವಕರಿಗೆ ಬೈಕ್ ವಿತರಣೆ.
– ಬೆಂಗಳೂರಿನಲ್ಲಿ ಯುವ ಕೇಂದ್ರ ಸ್ಥಾಪನೆ, 2 ಕೋಟಿ ರೂ ಅನುದಾನ
– ರಾಜ್ಯದ ಕ್ರೀಡಾಪಟುಗಳ ಉತ್ತೇಜನಕ್ಕೆ 5 ಕೋಟಿ ರೂ ಅನುದಾನ
– ಏಷ್ಯಾ ಖಂಡದ ದೇಶಗಳ ಶಿಕ್ಷಣ ಸಚಿವರ ಸಮಾವೇಶ ಬೆಂಗಳೂರಿನಲ್ಲಿ ಆಯೋಜನೆ
– ಹೊರ ರಾಜ್ಯಗಳಿಗೆ ಹೋಗುವ ರಾಜ್ಯದ ಯಾತ್ರಿಗಳಿಗೆ ಅತಿಥಿ ಗೃಹ ನಿರ್ಮಾಣ, ಇದಕ್ಕೆ 25 ಕೋಟಿ ರೂ ಅನುದಾನ
– ಮಂತ್ರಾಲಯ, ತುಳಜಾಪುರ, ಪಂಡರಾಪಯರ, ವಾರಣಾಸಿ, ಉಜ್ಜೈನಿ, ಶ್ರೀಶೈಲಗಳಲ್ಲಿ ಅತಿಥಿ ಗೃಹಗಳ ನಿರ್ಮಾಣ
– ಕಿಡ್ನಿ ವೈಫಲ್ಯಗೊಂಡ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಡಯಾಲಿಸೀಸ್ ಯೋಜನೆ.
– ರಾಜ್ಯದ 5 ಜಿಲ್ಲೆಯಲ್ಲಿ 5 ಕೋಟಿ ವೆಚ್ಚದಲ್ಲಿ ಡಯಾಲಿಸೀಸ್ ಕೇಂದ್ರ ಸ್ಥಾಪನೆ.
– ಕೆಸಿ ಜನರಲ್ ಆಸ್ಪತ್ರೆ ಮತ್ತು ಸಿವಿ ರಾಮನ್ ಆಸ್ಪತ್ರೆಗಳಲ್ಲಿ ಹೃದಯ ಚಿಕಿತ್ಸೆಗಾಗಿ ಕ್ಯಾತ್ ಲ್ಯಾಬ್ ಸ್ಥಾಪನೆ
– ಬೆಂಗಳೂರಿನ ಕೆಸಿ ಜನರಲ್ ಮತ್ತು 5 ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ಬಿಡುಗಡೆ
ಇತಿಹಾಸದಲ್ಲಿ ಮೊದಲ ಬಾರಿಗೆ ಮಕ್ಕಳ ಆಯವ್ಯಯ ಮಂಡನೆ
18 ವರ್ಷ ಒಳಗಿನ ಮಕ್ಕಳ ಅಭಿವೃದ್ಧಿಗೆ ಯೋಜನೆ.ಇದಕ್ಕಾಗಿ 36340 ಕೋಟಿ ಬಜೆಟ್.
279 ಕಾರ್ಯಕ್ರಮಗಳು ಮಕ್ಕಳಿಗಾಗಿ ಅನುಷ್ಟಾನ.
– ಕೇಂದ್ರದ ಸಹಕಾರದಿಂದ ರಾಜ್ಯದಲ್ಲಿ 7 ಬಾಲ ಮಂದಿರ ನಿರ್ಮಾಣ.
– ಬಾಲಮಂದಿರದಿಂದ 21 ವರ್ಷದ ನಂತರ ಬಿಡುಗಡೆಯಾದವರಿಗೆ ಉದ್ಯೋಗ ಪ್ರಾರಂಭಿಸಲು, ಜೀವನ ರೂಪಿಸಿಕೊಳ್ಳಲು ಆರ್ಥಿಕ – ಸಹಾಯ. ಸರ್ಕಾರದಿಂದ ಉಪಕಾರ ಯೋಜನೆ ಪ್ರಾರಂಭ
– ಪ್ರತಿ ತಿಂಗಳು 5 ಸಾವಿರ ಆರ್ಥಿಕ ನೆರವು. ಗರಿಷ್ಠ ಮೂರು ವರ್ಷ ಆರ್ಥಿಕ ನೆರವು. ಇದಕ್ಕಾಗಿ 1 ಕೋಟಿ ಅನುದಾನ