Bengaluru CityDistrictsKarnatakaLatestMain Post

ಸಿದ್ದು ಬಜೆಟ್‍ನಲ್ಲಿ ಸ್ಯಾಂಡಲ್‍ವುಡ್ ಮತ್ತು ಚಿತ್ರ ಪ್ರೇಕ್ಷಕರಿಗೆ ಗುಡ್‍ನ್ಯೂಸ್

ಬೆಂಗಳೂರು: ಇಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಸರ್ಕಾರದ ಐದನೇ ಬಜೆಟ್ ಮಂಡನೆಯಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಕ್ಕೆ ಸಿದ್ದರಾಮಯ್ಯ ಸರ್ಕಾರ ಈ ಕೆಳಕಂಡ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಒಟ್ಟು ಅನುದಾನ: 283 ಕೋಟಿ ರೂ.

ವಾರ್ತಾ ಇಲಾಖೆ:

  • 16 ಕೋಟಿ ವೆಚ್ದದಲ್ಲಿ ಜಿಲ್ಲಾ ಮಾಹಿತಿ ಉತ್ಸವ ಆಯೋಜನೆ.
  • 17 ಕೋಟಿ ವೆಚ್ಚದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಎಲ್ಲಾ ತಾಲೂಕುಗಳ ಸಾರ್ವಜನಿಕ ಸ್ಥಳಗಳಲ್ಲಿ ಡಿಜಿಟಲ್ ಪ್ರದರ್ಶನ ಫಲಕ.
  • 150 ವರ್ಷಗಳ ಜನ್ಮ ವರ್ಷಾಚರಣೆ ಪ್ರಯಕ್ತ ರಾಜ್ಯಾದ್ಯಂತ ಮಹಾತ್ಮಾಗಾಂಧಿ ಧ್ವನಿ ಬೆಳಕು ಪ್ರದರ್ಶನಕ್ಕೆ 5 ಕೋಟಿ ರೂ. ಅನುದಾನ.
  • ಅರಸೀಕೆರೆ ಕಸ್ತೂರ್ಬಾ ಆಶ್ರಮ ಅಭಿವೃದ್ಧಿಗೆ 2 ಕೋಟಿ ಅನುದಾನ.
  • ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಉಚಿತ ಬಸ್ ಪಾಸ್.
  • ನಿವೃತ್ತ ಪತ್ರಕರ್ತರ ಮಾಶಾಸನ 8 ಸಾವಿರದಿಂದ 10 ಸಾವಿರಕ್ಕೆ ಏರಿಕೆ.

ಸಾರ್ವಜನಿಕ ಸಂಪರ್ಕ:

  • ಚಲನ ಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಆರೋಗ್ಯ ಸೇವೆಗಾಗಿ ಸ್ಥಾಪಿಸಿರುವ ದತ್ತಿ ನಿಧಿ ಮೊತ್ತ 1 ಕೋಟಿಯಿಂದ 10 ಕೋಟಿ ಹೆಚ್ಚಳ.
  • ಮಲ್ಟಿಫ್ಲೆಕ್ಸ್ ಚಿತ್ರಮಂದಿರದ ಒಂದು ಪರದೆಯಲ್ಲಿ ಮಧ್ಯಾಹ್ನ 1.30ರಿಂದ 7.30ರ ವರೆಗೆ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಲನಚಿತ್ರ ಪ್ರದರ್ಶನ ಕಡ್ಡಾಯ.
  • ಎಲ್ಲಾ ಮಲ್ಟಿಫ್ಲೆಕ್ಸ್‍ಗಳಲ್ಲಿ ಏಕರೂಪ ಪ್ರವೇಶ ದರ ನಿಗದಿ. 200 ರೂಗಳ ಗರಿಷ್ಟ ಪ್ರವೇಶ ದರ ನಿಗದಿ.

Leave a Reply

Your email address will not be published. Required fields are marked *

Back to top button