ಬೆಂಗಳೂರು: ಇಂದು ಸಿದ್ದರಾಮಯ್ಯ ಸಿಎಂ ಆಗಿ 5ನೇ ಬಜೆಟ್ ಹಾಗೂ ಹಣಕಾಸು ಸಚಿವರಾಗಿ ತಮ್ಮ 12ನೇ ಬಜೆಟ್ ಮಂಡನೆ ಮಾಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಲವು ಘೋಷಣೆಗಳನ್ನ ಮಾಡಿದ್ದು, ಅದರ ವಿವರ ಇಲ್ಲಿದೆ.
ಒಟ್ಟು ಅನುದಾನ: 2,250 ಕೋಟಿ ರೂ.
Advertisement
* ತುಮಕೂರು ಕೈಗಾರಿಕಾ ಘಟಕಕ್ಕಾಗಿ ಕೆಐಎಡಿಬಿಯಿಂದ ಭೂ ಸ್ವಾಧೀನಕ್ಕಾಗಿ 400 ಕೋಟಿ ರೂ.
* ತುಮಕೂರು ಜಿಲ್ಲೆ ವಸಂತ ನರಸಾಪುರದಲ್ಲಿ 542 ಎಕರೆ ಜಮೀನಿನಲ್ಲಿ ಮೆಷಿಲ್ ಟೋಲ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿ.
* ಕೇಂದ್ರ ತಯಾರಿಕಾ ತಂತ್ರಜ್ಞಾನ ಸಂಸ್ಥೆಯ ಆವರಣದಲ್ಲಿ ನಿಖರ ಮಾಪನ ಪ್ರಯೋಗಾಲಯ ಸ್ಥಾಪನೆ(ಶೇ.50ರಷ್ಟು ಕೇಂದ್ರ)
* ಬೆಂಗಳೂರನ್ನ ದೇಶದ ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡಲು ಕ್ರಮ.
* ತೆಂಗು ನಾರು ಕುಶಲಕರ್ಮಿಗಳಿಗೆ ಅನುರೂಪ ವೇತನ ಪ್ರೋತ್ಸಾಹಕಗಳ ಸಂದಾಯ.
Advertisement
* ಸಕ್ಕರೆ ಕಾರ್ಖಾನೆಗಳ ಸುತ್ತಮುತ್ತ ಇರುವ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ.
* ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಉತ್ತೇಜನ ನೀಡಲು ಸಾರ್ವಜನಿಕ ಸೇವಾ ಕೇಂದ್ರ – 4 ಕೋಟಿ ರೂ.
* ಕೇಂದ್ರದ ನೆರವಿನೊಂದಿಗೆ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಖಾದಿ ಫ್ಲಾಜಾ ಸ್ಥಾಪನೆ.
* ಎಸ್‍ಸಿ/ಎಸ್‍ಟಿ ಉದ್ಯಮಿಗಳು ಸ್ಥಾಪಿಸುವ ಸಣ್ಣ ಹಾಗೂ ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಮೊದಲು 5 ವರ್ಷ ಯೂನಿಟ್‍ಗೆ 2 ರೂ. ನಷ್ಟು ವಿದ್ಯುತ್ ಸಹಾಯ ಧನ.
* ಮೊದಲ ಬಾರಿ ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳನ್ನ ಸ್ಥಾಪಿಸುವ ಎಸ್‍ಸಿ/ಎಸ್‍ಟಿ ಉದ್ಯಮಿಗಳಿಗೆ ಸಾಲ ಪಡೆಯುವ ವೇಳೆ ವಿವಿಧ ಶುಲ್ಕವನ್ನ ಭರಿಸಲಿರುವ ಸರ್ಕಾರ.
Advertisement
* 2010-11 ರಿಂದ 31-03-2017 ಎಸ್‍ಸಿ/ಎಸ್‍ಟಿ ಉದ್ಯಮಿಗಳು ಬೀಜ ಧನ ಬಂಡವಾಳ ಯೋಜನೆಯಲ್ಲಿ ಪಡೆದಿರುವ 46 ಕೋಟಿ ರೂ. ಸಾಲ ಮನ್ನಾ.
* ದಾಬಸ್‍ಪೇಟೆಯಲ್ಲಿ ಸೆಂಟರ್ ಆಫ್ ಎಕ್ಸ್ ಲೆನ್ಸ್ ಸ್ಥಾಪಿಸಲು ಬೆಂಗಳೂರಿನ ಕಾಸಿಯಾ ಸಂಸ್ಥೆಗೆ 5 ಕೋಟಿ ರೂ. ವಿಶೇಷ ಅನುದಾನ.
* ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ ಸಂಸ್ಥೆಗಳಿಂದ ಮಂಜೂರು ಆಗುವ ನಿವೇಶನಗಳಿಗೆ ಶೇ.25 ರಿಯಾಯಿತಿ
* ಮಹಿಳಾ ಉದ್ಯಮಿಗಳನ್ನ ಉದ್ದೇಶಿಸಲು ಶೇ.4ರ ದರದಲ್ಲಿ ನೀಡುತ್ತಿರುವ ಸಾಲದ ಮಿತಿ 50 ಲಕ್ಷ ದಿಂದ 2 ಕೋಟಿ ರೂ.ಗೆ ಏರಿಕೆ.
* ಮಹಿಳಾ ಉದ್ಯಮಿಗಳಿಗಾಗಿ ಬ್ಯುಸಿನೆಸ್ ಇನ್ಕ್ಯೂಬೇಟರ್ ಸ್ಥಾಪನೆ.
Advertisement
* ಕೈ ಮಗ್ಗಗಳಿಗೆ ಎಲೆಕ್ಟ್ರಾನಿಕ್ ಜಕಾರ್ಡ್, ನ್ಯೂ ಮ್ಯಾಟಿಕ್ ಸೌಲಭ್ಯ.
* ಲೋ ಟೆನ್ಷನ್ ವಿದ್ಯುತ್ ಪಡೆಯುತ್ತಿರುವ ರೇಪಿಯರ್ ಮಗ್ಗಗಳಿಗೆ ಶೇ.50ರಷ್ಟು ವಿದ್ಯುತ್ ಸಹಾಯ ಧನ.
* ಕೇಂದ್ರದ ಸಹಾಯದೊಂದಿಗೆ ಮೈಸೂರಿನಲ್ಲಿ ಸಿಲ್ಕ್ ಮೆಘಾ ಕ್ಲಸ್ಟರ್ ಸ್ಥಾಪನೆ.
* ಹಾವೇರಿ, ಹೊಸದುರ್ಗ, ಭನಹಟ್ಟಿ, ಗೌರಿಬಿದನೂರಿನಲ್ಲಿ ವಿದ್ಯುತ್ ಮಗ್ಗಗಳ ಸಂಕೀರ್ಣ ನಿರ್ಮಾಣ.
* ಬೆಳಗಾವಿ ಜಿಲ್ಲೆಯ ಪಂತಬಾಳೇಕುಂದ್ರಿಯಲ್ಲಿ ಗೋದಾಮು ಮತ್ತು ನಾಗರೀಕ ಸೌಲಭ್ಯ ಕೇಂದ್ರ.
* ಸಹಕಾರಿ ನೂಲಿನ ಗಿರಣಿಗಳಿಗೆ ಪ್ರತಿ ಯೂನಿಟ್‍ಗೆ 2 ರೂ.ನಂತೆ ಸಹಾಯಧನ.
* ಮಧ್ಯಮ, ಸಣ್ಣ, ಅತೀಸಣ್ಣ ಉದ್ಯಮಿಗಳಿಗೆ ಹೊಸ ನಿರ್ದೇಶನಾಲಯ ಸ್ಥಾಪನೆ.