ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇಂದು ಮಂಡನೆಯಾಗಿದೆ. ಬಜಟ್‍ನಲ್ಲಿ ಸಿದ್ದರಾಮಯ್ಯ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಘೋಷಿಸಿದ ಹಲವು ಯೋಜನೆಗಳು ಈ ಕೆಳಕಂಡಂತಿವೆ.
ಒಟ್ಟು ಅನುದಾನ – 1732 ಕೋಟಿ ರೂ.
Advertisement
> ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ.
> ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀಲಗಿರಿ ಬದಲು 6 ಲಕ್ಷ ಶ್ರೀಗಂಧ ಸಸಿ ಬೆಳೆಸುವುದು. 700 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ನೆಡುತೋಪುಗಳ ಅಭಿವೃದ್ಧಿ.
> ವನಮಹೋತ್ಸವಕ್ಕಾಗಿ 6 ಕೋಟಿ ಸಸಿಗಳನ್ನು ಬೆಳೆಸುವುದು.
> ಕೃಷಿ, ಅರಣ್ಯ ಪ್ರೋತ್ಸಾಹ ಯೋಜನೆಯಡಿ ಬದುಕಿ ಉಳಿದ ಪ್ರತಿ ಸಸಿಗೆ ಪ್ರೋತ್ಸಾಹ ಧನ 45 ರೂ. ನಿಂದ 100 ರೂ.ಗೆ ಹೆಚ್ಚಳ.
> ಉದ್ಯೋಗಖಾತ್ರಿ ಯೋಜನೆಯಡಿ 4,720 ಕಿಮೀ ರಸ್ತೆಯ ಬದಿ ನೆಡುತೋಪು ನಿರ್ಮಾಣ.
Advertisement
> 5 ಕೋಟಿ ರೂ. ವೆಚ್ಚದಲ್ಲಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸ್ಥಾಪಿಸಲು 5 ಕೋಟಿ ರೂ.
> ಚಿಕ್ಕಮಣ್ಣುಗುಡ್ಡ ಸಂಶೋಧನೆ ಕೇಂದ್ರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅರಣ್ಯ ಮಾಹಿತಿ ಕೇಂದ್ರ ಅಭಿವೃದ್ಧಿ.
> ಎಲ್ಲಾ ನರ್ಸರಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ನರ್ಸರಿ ಅಭಿವೃದ್ಧಿ ಏಜನ್ಸಿ ರಚನೆ.
> ಜನವಸತಿ ಪ್ರದೇಶಗಳಿಗೆ ಮಘಗಗಳ ವಲಸೆ ತಡೆಗಟ್ಟಲು 10 ಕೋಟಿ ರು. ವೆಚ್ಚದಲ್ಲಿ ಸ್ವಯಂಚಾಲಿತ ಸೋಲಾರ್ ವಿದ್ಯುತ್ ಪಂಪ್‍ಗಳ ಸಹಾಯದೊಂದಿಗೆ ದಟ್ಟಾರಣ್ಯದಲ್ಲಿರುವ 100 ಜಲಕಾಯಗಳನ್ನು ತುಂಬುವುದು.