ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡೆಗೆ ಸಿಎಂ ಸಿದ್ದರಾಮಯ್ಯ 288 ಕೋಟಿ ರೂ. ಅನುದಾನ ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ
– ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು 1 ಸಾವಿರ ಪ್ರತಿಭಾನವಿತ ಕ್ರೀಡಾಪಟುಗಳಿಗೆ ತಲಾ 1 ಲಕ್ಷ ನೆರವು, 10 ಕೋಟಿ ಮೀಸಲು
– 1 ಕೋಟಿ ವೆಚ್ಚದಲ್ಲಿ 4 ಕ್ರಿಡಾ ಅಕಾಡೆಮಿ ಸ್ಥಾಪನೆ, ಬೆಂಗಳೂರಿನ ವಿದ್ಯಾನಗರದಲ್ಲಿ ಬ್ಯಾಸ್ಕೇಟ್ ಬಾಲ್, ಉಡುಪಿಯಲ್ಲಿ ಈಜು, ಮೈಸೂಇನಲ್ಲಿ ಟೆನಿಸ್, ಚಿತ್ರದುರ್ಗದಲ್ಲಿ ಆರೋಹಣ ಅಕಾಡೆಮಿ ಸ್ಥಾಪನೆ
– ಖಾಸಗಿ ಸಹಭಾಗ್ವಿತ್ವದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಗಳ ಪ್ರಾರಂಭ
Advertisement
– 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನಕೇಂದ್ರಗಳ ಸ್ಥಾಪನೆ
– ಖಾಸಗಿ ಸಹಭಾಗಿತ್ವದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ವರುಣ ಕೆರೆಯಲ್ಲಿ ಜಲಕ್ರೀಡಾ ಕೇಂದ್ರ ಅಭಿವೃದ್ಧಿ
– 8 ಕೋಟಿ ವೆಚ್ಚದಲ್ಲಿ ನಾಲ್ಕು ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಅತ್ಯಾಧುನಿಕ ವ್ಯಾಯಾಮ ಶಾಲೆ ಆರಂಭ
– ಮಹಿಳಾ ಆಥ್ಲೀಟ್‍ಗಳಿಗಾಗಿ ತಲಾ 1 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೀಡಾ ವಿದ್ಯಾರ್ಥಿ ನಿಲಯ
Advertisement
– ಬೆಳಗಾವಿ, ಮೈಸೂರಿನಲ್ಲಿ ಆಧುನಿಕ ಜಿಮ್ನಾಸ್ಟಿಕ್ ಸೌಲಭ್ಯ- 4 ಕೋಟಿ ಅನುದಾನ
– ವಿಕಲಚೇತನ ಕ್ರೀಡಾ ವಿಭಾಗ- 4 ಕೋಟಿ ಅನುದಾನ
– ಒಲಂಪಿಕ್ಸ್‍ನಲ್ಲಿ ಪದಕ ವಿಜೇತರರಿಗೆ ಬಂಪರ್- ಸ್ವರ್ಣ ಗದ್ದೆರೆ 5 ಕೋಟಿ, ರಜತ-3 ಕೋಟಿ, ಕಂಚು-2 ಕೋಟಿ
– ಒಲಂಪಿಕ್ಸ್ ವಿಜೇತರಿಗೆ ಸರ್ಕಾರ ಇಲಾಖೆಗಳಲ್ಲಿ ಗ್ರೂಪ್ `ಎ, ದರ್ಜೆ ಹುದ್ದೆಗಳು
– ಏಷ್ಯಾನ್, ಕಾಮನ್‍ವೆಲ್ತ್ ಕ್ರೀಡೆಗಳ ವಿಜೇತರಿಗೆ ಗ್ರೂಪ್ ಬಿ ದರ್ಜೆಯ ಹುದ್ದೆಗಳು
– ಪ್ರತಿವರ್ಷ 10 ಜನ ಕ್ರೀಡಾ ಪ್ರವರ್ತಕರಿಗೆ – `ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ’
Advertisement
– 20 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ಕಾಮಗಾರಿಗಳನ್ನ ಪೂರ್ಣ
– ಗ್ರಾಮೀಣ ಯುವಕರಿಗಾಗಿ- ಯುವಚೈತನ್ಯ ಎಂಬ ಹೊಸ ಯೋಜನೆ ಪ್ರಾರಂಭ
– ಪ್ರತಿ ಗ್ರಾ.ಪಂ. 1 ಲಕ್ಷ ರೂ ವೆಚ್ಚದಲ್ಲಿ ಕ್ರೀಡಾ ಸಾಮಾಗ್ರಿಗಳು, ಫಿಟ್‍ನೆಸ್ ಸಲಕರಣೆ ಒದಗಿಸುವುದು- 20 ಕೋಟಿ ಅನುದಾನ
Advertisement
– 5 ಕೋಟಿ ಅನುದಾನದಲ್ಲಿ ಯೂತ್ ಕ್ಲಬ್‍ಗಳೀಗೆ ಆವರ್ಥ ನಿಧಿ
– 1 ಕೋಟಿ ವೆಚ್ಚದಲ್ಲಿ ಕ್ರೀಡಾ ಐಟಿ ಕೋಶ ಸ್ಥಾಪನೆ
– ರಾಜ್ಯ ರಾಷ್ಟ್ರೀಯ ಅಂತಾರಷ್ಟ್ರೀಯ ಮಾಜಿ ಕುಸ್ತಿ ಪೈಲ್ವಾನ್‍ಗಳಿಗೆ ಮಾಸಾಶನ ಹೆಚ್ಚಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೂ ಮುನ್ನ ಸಿದ್ಧರಾಮಯ್ಯ ಕೊನೆ ಕ್ಷಣದ ಸಿದ್ದತೆ ನಡೆಸಿದ ವಿಡಿಯೋ ಇಲ್ಲಿದೆ. #JanaparaBudget @CMofKarnataka pic.twitter.com/kQ5hPMvMEB
— Karnataka Varthe (@KarnatakaVarthe) March 15, 2017