Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬಿಜೆಪಿ ಅಧ್ಯಕ್ಷ ಕಟೀಲ್‍ಗೆ ಬಿಎಸ್‍ವೈ ಆಪ್ತರ ವಾರ್ನಿಂಗ್

Public TV
Last updated: September 27, 2019 1:34 pm
Public TV
Share
2 Min Read
Nalin Kumar Kateel
SHARE

ಬೆಂಗಳೂರು: ಬಿಜೆಪಿ ಪಕ್ಷದಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಸಹಾಯಕರಾಗಿದ್ದರ ಎಂಬ ಭಾವನೆ ಬಿಎಸ್‍ವೈ ಆಪ್ತರಲ್ಲಿ ಮೂಡುತ್ತಿದ್ದು, ಇದರ ನಡುವೆಯೇ ಪಕ್ಷದ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿ ಬಿಎಸ್‍ವೈ ಆಪ್ತರು ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

ಬಿಜೆಪಿ ಅಧ್ಯಕ್ಷರ ಆಯ್ಕೆ ಸಂದರ್ಭದಿಂದಲೂ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಬಿಎಸ್‍ವೈ ನಡುವಿನ ಮುಸುಕಿನ ಗುದ್ದಾಟ ಕುರಿತು ಸುದ್ದಿಗಳು ಕೇಳಿ ಬರುತಿತ್ತು. ಸದ್ಯ ಈ ಗುದ್ದಾಟ ಬಹಿರಂಗವಾಗಿದ್ದು, ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಅವರು ಪಕ್ಷದ ಅಧ್ಯಕ್ಷರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.

UDP NALIN 11

ಬಿಎಸ್‍ವೈ ಅವರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಬಹಿರಂಗ ಪತ್ರ ಬರೆದಿದ್ದು, ಯಡಿಯೂರಪ್ಪರನ್ನು ಕಡೆಗಣಿಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಕಷ್ಟ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನು ಓದಿ: ಯಡಿಯೂರಪ್ಪಗೆ ಚೆಕ್ ಮೇಲೆ ಚೆಕ್ ಕೊಡ್ತಿದ್ದಾರೆ ಕಟೀಲ್

ಪತ್ರದಲ್ಲಿ ಏನಿದೆ?
ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ ಅವರು, ಅವರನ್ನು ಪಕ್ಷದ ಸಂಘಟನೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ.

BJP BSY Nalin Kumar Kateel copy

ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿದ್ದು, ರೈತ, ಕಾರ್ಮಿಕ, ಬಡವರ, ಸರ್ವ ಸಮುದಾಯದ ಜನರು ಬಿಎಸ್‍ವೈ ಅವರ ಸಾಮಾಜಿಕ ಕಳಕಳಿ ಮೆಚ್ಚಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿಯಾದ ಸಮಯದಿಂದ ಮತ್ತೆ ಅವರ ವಿರುದ್ಧ ಪಿತೂರಿಗಳು ನಡೆಯುತ್ತಿದೆ. ಪಕ್ಷ ಅಧಿಕಾರಕ್ಕೆ ಬರಲು ಬಿಎಸ್‍ವೈ ಬೇಕು. ಅಧಿಕಾರ ಸಿಕ್ಕ ನಂತರ ಬೇಡ ಎನ್ನುವ ಮನಸ್ಥಿತಿ ನಮ್ಮ ಪಕ್ಷದ ಬುದ್ಧಿವಂತರ ರೀತಿ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ. ಇಂತಹ ಕನಿಷ್ಠ ಯೋಚನೆ ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವೂ ಸಹ ಹೊರ ಬರಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

nalin kumar

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಭೀಮಾಶಂಕರ್ ಅವರು, ಪಕ್ಷ ಹಾಗೂ ಬಿಎಸ್‍ವೈ ಅವರ ವಿರುದ್ಧ ನಿರಂತರವಾಗಿ ಪಿತೂರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್‍ವೈ ಅವರನ್ನು ನೋಡಿ ಪಕ್ಷಕ್ಕೆ ಮತ ನೀಡಲಾಗಿದೆ. ಇದು ಪಕ್ಷದಲ್ಲಿ ಪಿತೂರಿ ನಡೆಸುತ್ತಿರುವವರಿಗೂ ತಿಳಿದಿದೆ. ಇದರ ಬಗ್ಗೆ ಹೊಸ ರಾಜ್ಯಾಧ್ಯಕ್ಷರಿಗೆ ತಿಳಿಸಲು ಪತ್ರ ಬರೆಯಲಾಗಿದೆ. ಕೆಲವರಿಗೆ ಇದನ್ನು ನೇರವಾಗಿ ಹೇಳಿದರೆ ಮಾತ್ರ ತಲುಪುತ್ತದೆ. ಆದ್ದರಿಂದಲೇ ಬಹಿರಂಗ ಪತ್ರ ಬರೆದಿದ್ದೇವೆ. ಇದನ್ನು ಎಚ್ಚರಿಕೆ ಅಥವಾ ಸಲಹೆಯಾಗಿ ತಿಳಿದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.

ಬಿಎಸ್‍ವೈಗೆ ನಳೀನ್ ಚೆಕ್: ನಳೀನ್ ಕುಮಾರ್ ಕಟೀಲ್ ಅವರು ಪಕ್ಷದ ಅಧ್ಯಕ್ಷರಾದ ಮೇಲೆ ಬಿಎಸ್‍ವೈ ಅವರಿಗೆ ಚೆಕ್ ಮೇಲೆ ಚೆಕ್ ಕೊಡುತ್ತಿದ್ದಾರೆ. ಬಿಎಸ್‍ವೈ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಲೆದಂಡವಾಗಿದ್ದ ಭಾನುಪ್ರಕಾಶ್ ಅವರನ್ನು ಮತ್ತೆ ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಹಿಂದೆ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಭಾನುಪ್ರಕಾಶ್ ಅವರು ಬಿಎಸ್‍ವೈ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ರಾಯಣ್ಣ ಬ್ರಿಗೇಡ್ ಬೆಂಬಲಿಸಿದ್ದ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಅವರಿಗೂ ಕಟೀಲ್ ಬಿಜೆಪಿ ಉಪಾಧ್ಯಕ್ಷ ಪಟ್ಟವನ್ನು ನೀಡಿದ್ದಾರೆ. ಬಿಎಸ್‍ವೈ ವಿರೋಧಿಗಳಿಗೆ ಕಟೀಲ್ ನಿರಂತರವಾಗಿ ಮಣೆ ಹಾಕುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗುತ್ತಿದೆ. ಇದನ್ನು ಓದಿ: ಆರ್‍ಎಸ್‍ಎಸ್ V/S ಯಡಿಯೂರಪ್ಪ: ಆಕ್ರೋಶಕ್ಕೆ ತಿರುಗಿದ ಬಿಜೆಪಿ ಭಿನ್ನಮತ

TAGGED:bengalurubs yeddyurappaNalin Kumar KateelPublic TVನಳೀನ್ ಕುಮಾರ್ ಕಟೀಲ್ಪಬ್ಲಿಕ್ ಟಿವಿಬಿಎಸ್ ಯಡಿಯೂರಪ್ಪಬೆಂಗಳೂರು
Share This Article
Facebook Whatsapp Whatsapp Telegram

You Might Also Like

IQBAL HUSSAIN 1
Districts

ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

Public TV
By Public TV
6 seconds ago
kiccha sudeep deepshikha nagpal
Cinema

Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿ ಈ ಬ್ಯೂಟಿ

Public TV
By Public TV
7 minutes ago
TB Dam 2 1
Bellary

ಭಾಗಶಃ ಭರ್ತಿಯಾದ ತುಂಗಭದ್ರಾ ಜಲಾಶಯ

Public TV
By Public TV
53 minutes ago
CHALUVARAYASWAMY
Latest

ಸ್ವಾಮೀಜಿಗಳು ಹೇಳಿಕೆ‌ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ – ರಂಭಾಪುರಿ ಶ್ರೀ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ

Public TV
By Public TV
1 hour ago
huge price cut Samsung Galaxy S25 Ultra S24 Ultra S23 Prices Drop Online
Latest

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್‌ ಭಾರೀ ಇಳಿಕೆ

Public TV
By Public TV
1 hour ago
DK Shivakumar 1
Bengaluru City

ಬಿಬಿಎಂಪಿ ವ್ಯಾಪ್ತಿಯೇ ಗ್ರೇಟರ್ ಬೆಂಗಳೂರಿಗೂ ಇರಲಿದೆ – ಡಿಕೆಶಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?