ಮಂಡ್ಯ: ಪಂಚರತ್ನ ರಥಯಾತ್ರೆಯಲ್ಲಿ (Pancharatna Yatra) ಜನತೆಯ ಅಲೆಯನ್ನ ನೋಡಿ, ಕೊರೊನಾ ಭೂತ ಬಿಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸಂಶಯ ವ್ಯಕ್ತಪಡಿಸಿದ್ದಾರೆ.
ರಾತ್ರಿ 12.30 ಗಂಟೆಯಲ್ಲಿ ಮಳವಳ್ಳಿ ಕ್ಷೇತ್ರದ ಇಟ್ಟನಹಳ್ಳಿ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ!!#ಪಂಚರತ್ನ_ರಥಯಾತ್ರೆ #ಮಳವಳ್ಳಿ #ಮಂಡ್ಯ pic.twitter.com/J2qJ2juJjp
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 20, 2022
Advertisement
ಮಂಡ್ಯದ (Mandya) ಗೆಜ್ಜಲಗೆರೆಯಲ್ಲಿಂದು ಕೊರೊನಾ ರೂಪಾಂತರಿ ತಳಿ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಅವರು, ಕೊರೊನಾದಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಕೊರೊನಾ (Corona Virus) ವಿಚಾರವಾಗಿ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು. ಹಾಗೇ ಈಗ ಚೀನಾದಲ್ಲಿ (China) ಕೊರೊನಾ ಹರಡುತ್ತಿರುವ ವಿಚಾರವನ್ನ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ನನ್ನ ಸಹಕಾರ ಇದೆ ಎಂದಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ
Advertisement
Advertisement
ಆದರೆ ನನಗೊಂದು ಮಾಹಿತಿ ಇದೆ. ಈ ಭೂತ ಬಿಡುತ್ತಿರುವುದು ಪಂಚರತ್ನ ರಥಯಾತ್ರೆಯಲ್ಲಿ (Pancharatna Yatra) ಜನತೆಯ ಅಲೆಯನ್ನ ನೋಡಿ. ಈ ಬಗ್ಗೆ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಪ್ರಧಾನಮಂತ್ರಿಗಳ (Prime Minister) ಗಮನಕ್ಕೆ ತಂದು, ಪಂಚರತ್ನ ಯಾತ್ರೆಗೆ ನಿರ್ಬಂಧ ಹೇರಲು ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ
Advertisement
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Belagavi Session) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೂರು ದಿನಗಳಿಂದ ಅಧಿವೇಶನದಲ್ಲಿ ಏನಾಗ್ತಿದೆ ಎಂಬುದು ಗೊತ್ತು. ನಾಡಿನ ಸಮಸ್ಯೆ ಬಗ್ಗೆ ಸಕಾರಾತ್ಮಕವಾಗಿ ಚರ್ಚೆಯಾಗಿಲ್ಲ. ನನಗೆ ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆಯೇ ಮುಖ್ಯ. ನಾಡಿನಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ಯಾತ್ರೆ ಮಾಡ್ತಿದ್ದೇನೆ. ರಾಜ್ಯ, ದೇಶದಲ್ಲಿ ಆಗುತ್ತಿರುವ ಅನಾಹುತಗಳಿಗೆ ನ್ಯಾಯ ಒದಗಿಸಲು ಈ ಪಂಚರತ್ನ ಯೋಜನೆ ಜಾರಿಗೆ ತರಲು ಹೊರಟಿದ್ದೇನೆ. ವಿಧಾನಸಭೆಯಲ್ಲಿ ಕೂತು ಅರ್ಧಗಂಟೆ ಮಾತಾಡಿದ್ರೆ ಸರ್ಕಾರ ಸಮಸ್ಯೆ ಬಗೆಹರಿಸುತ್ತಾ? ಇಷ್ಟು ವರ್ಷ ಮಾತನಾಡಿರುವುದನ್ನ ಸರ್ಕಾರ ಎಷ್ಟು ಜಾರಿಗೆ ತಂದಿದೆ. ಮಾಧ್ಯಮಗಳ ಮುಂದೆ ಸರ್ಕಾರ ಮಾತನಾಡುವುದು ಬೇರೆ, ಇರುವುದೇ ಬೇರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ಕ್ಷೇತ್ರದ ಭಾರತೀನಗರ (ಕೆ.ಎಂ.ದೊಡ್ಡಿ) ದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ನೆರೆದಿದ್ದ ಅಪಾರ ಜನಸ್ತೋಮ.#ಪಂಚರತ್ನ_ರಥಯಾತ್ರೆ #ಮದ್ದೂರು #ಮಳವಳ್ಳಿ pic.twitter.com/19SMj8wAgW
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 21, 2022
ಇನ್ನೂ ಮೀಸಲಾತಿ (Reservation) ವಿಚಾರದಲ್ಲಿ ಸರ್ಕಾರದಿಂದ ಮೂಗಿಗೆ ತುಪ್ಪ ಸವರುವ ಕೆಲಸವಾಗ್ತಿದೆ. ವೈಜ್ಞಾನಿಕವಾಗಿ, ಕಾನೂನಾತ್ಮಕವಾಗಿ ಆಯಾಯ ಸಮಾಜಗಳ ಬೇಡಿಕೆಗಳಿಗೆ ಸ್ಪಂದಿಸುವುದು ಸರ್ಕಾರದ (Government) ಕರ್ತವ್ಯ. ಅದನ್ನು ಬಿಟ್ಟು ಜನರನ್ನ ದಾರಿ ತಪ್ಪಿಸಿ ತಾತ್ಕಲಿಕ ಪರಿಹಾರ ಮಾಡಿದ್ರೆ ಭೂಮಿ ಒಂದಲ್ಲ ಒಂದು ದಿನ ರಣರಂಗವಾಗುತ್ತೆ. ವಾಸ್ತವ ಅಂಶವನ್ನ ಇಟ್ಟುಕೊಂಡು ಆಯಾಯ ಸಮಾಜಗಳಿಗೆ ನ್ಯಾಯವನ್ನ ಒದಗಿಸಬೇಕು. ಪಂಚಮಸಾಲಿ ಸಮಾಜ ಕೃಷಿಯನ್ನ ನಂಬಿಕೊಂಡಿರುವ ಸಮಾಜ. ಆ ಸಮಾಜದಲ್ಲಿಯೂ ಬಡವರು ಇದ್ದಾರೆ. ರೈತರ ಸಮಸ್ಯೆ ಏನಿದೆ ಅಂತ ಎಲ್ಲರಿಗೂ ಗೊತ್ತು. ಪಂಚಮಸಾಲಿ ಜನಾಂಗದ ಬೇಡಿಕೆಯನ್ನ ಯಾರು ತಪ್ಪು ಎನ್ನಲು ಆಗಲ್ಲ. ಹೋರಾಟ ಯಶಸ್ಸು ಕಾಣಬೇಕಾದ್ರೆ ವಾಸ್ತವ ಅಂಶವನ್ನ ಇಟ್ಟುಕೊಂಡು ಸರ್ಕಾರ ಜಾರಿಗೆ ತರಬೇಕು ಎಂದ ಸಲಹೆ ನೀಡಿದ್ದಾರೆ.