ಬೆಂಗಳೂರು: ಕೋಲಾರ, ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಮತ್ತು ಕಳಸ ಬಂಡೂರಿ ಯೋಜನೆಗೆ ಆಗ್ರಹಿಸಿ ಕೆಲ ಕನ್ನಡ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಆದರೆ ಕೆಲ ಸಂಘಟನೆಗಳು ಬಂದ್‍ನಿಂದಾಗಿ ನಷ್ಟ ಉಂಟಾಗುತ್ತದೆ ಎಂದು ಹೇಳಿ ಬೆಂಬಲ ನೀಡದೇ ಇರಲು ನಿರ್ಧರಿಸಿದೆ. ಹೀಗಾಗಿ ಸೋಮವಾರ ಏನು ಇರುತ್ತೆ? ಏನ್ ಇರಲ್ಲ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಬಂದ್ ಹಿನ್ನೆಲೆ ಸೋಮವಾರ ನಡೆಯಬೇಕಿದ್ದ ಬೆಂಗಳೂರು ವಿವಿಯ ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆಯಾಗಿದೆ ಎಂದು ಪಬ್ಲಿಕ್ ಟಿವಿಗೆ ವಿವಿ ಮೌಲ್ಯಮಾಪನ ಕುಲಪತಿ ತಿಳಿಸಿದ್ದಾರೆ.
Advertisement
ಏನೇನು ಇರುತ್ತೆ?
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಯಥಾಸ್ಥಿತಿ ಇರುತ್ತದೆ. ಆಟೋ, ಟ್ಯಾಕ್ಸಿ, ಮೆಟ್ರೋ ಸೇವೆ, ಎಪಿಎಂಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಮೆಡಿಕಲ್ ಸ್ಟೋರ್‍ಗಳು, ಆಸ್ಪತ್ರೆಗಳು ತೆರೆಯಲಿವೆ. ಹೋಟೆಲ್, ಮಾರುಕಟ್ಟೆಗಳು ತೆರೆಯಲಿದ್ದು, ಪೆಟ್ರೋಲ್ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗಲಿದೆ. ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಿಗೆ ರಜೆಯಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ
Advertisement
ಏನೇನು ಇರಲ್ಲ?
ಚಿತ್ರಮಂದಿರಗಳಲ್ಲಿ ಪ್ರದರ್ಶನ ಸ್ಥಗಿತವಾಗಲಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲೂ ಪ್ರದರ್ಶನ ರದ್ದಾಗಲಿದೆ. ಕೆಲವೊಂದು ಖಾಸಗಿ ಶಾಲೆಗಳು ರಜೆ ಸಾಧ್ಯತೆ ನೀಡುವ ಸಾಧ್ಯತೆ ಇದೆ. ಆಟೋ, ಕ್ಯಾಬ್‍ನ ಕೆಲವು ಸಂಘಟನೆ ಬೆಂಬಲ ನೀಡಿದ್ದರಿಂದ ಈ ಸೇವೆಯಲ್ಲೂ ವ್ಯತ್ಯಯವಾಗಲಿದೆ.
Advertisement
ನಾಳೆ ಏನಾಗಬಹುದು?
ಬಂದ್, ಪ್ರತಿಭಟನೆ ವೇಳೆ ಅಹಿತಕರ ಘಟನೆಯಾದರೆ ಬಸ್ ಸಂಚಾರ ಮತ್ತು ಮೆಟ್ರೋ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಕೆಲವೊಂದು ಖಾಸಗಿ ಶಾಲೆಗಳು ರಜೆ ಘೋಷಿಸುವ ಸಾಧ್ಯತೆಯಿದೆ.
Advertisement
ಬಂದ್‍ಗೆ ಯಾರು ಬೆಂಬಲಿಸಿದ್ದಾರೆ?
ಕರ್ನಾಟಕ ವಾಟಾಳ್ ಪಕ್ಷ, ಪ್ರವೀಣ್ ಶೆಟ್ಟಿ ಕರವೇ ಬಣ, ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್‍ಕುಮಾರ್ ಅಭಿಮಾನಿಗಳ ಸಂಘ,ಲಾರಿ ಮಾಲೀಕರ ಸಂಘ, ರೈತ ಸಂಘ, ಶಾಶ್ವತ ನೀರಾವರಿ ಹೋರಾಟ ಸಮಿತಿ
ಬಂದ್‍ಗೆ ಯಾರ ಬೆಂಬಲವಿಲ್ಲ?
ನಾರಾಯಣ ಗೌಡರ ಕರವೇ ಬಣ, ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ, ಆಟೋ ಚಾಲಕರ, ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರ ಸಂಘ ಬೆಂಬಲ ನೀಡಿಲ್ಲ.
ಇದನ್ನೂ ಓದಿ: ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್