ಬೆಂಗಳೂರು: ಜೀವನದಿ ಕಾವೇರಿಗಾಗಿ (Cauvery River) ಶುಕ್ರವಾರ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಬಂದ್‌ಗೆ 1,600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ-ಜೆಡಿಎಸ್ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಜೀವಜಲಕ್ಕಾಗಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಲಿವೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್ ನಡೆಯಲಿದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್ (National Highway) ಆಗುವ ಸಾಧ್ಯತೆಗಳಿವೆ. ರಾಜಧಾನಿಯಲ್ಲಿ ಕನ್ನಡ ಒಕ್ಕೂಟ ಬೃಹತ್ ಮೆರವಣಿಗೆಗೆ ಪ್ಲಾನ್ ಮಾಡಿದೆ. ಬಂದ್‌ಗೆ ಬೆಂಬಲ ನೀಡುವಂತೆ ಕನ್ನಡ ಹೋರಾಟಗಾರರು ಬೆಂಗಳೂರು ಜನತೆಯಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: Karnataka Bandh : ಶಾಲಾ, ಕಾಲೇಜುಗಳಿಗೆ ರಜೆ ನೀಡೋ ಅಧಿಕಾರ ಡಿಸಿಗಳಿಗೆ ಬಿಟ್ಟ ಶಿಕ್ಷಣ ಇಲಾಖೆ
Advertisement
ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿದೆ. ಫ್ರೀಡಂ ಪಾರ್ಕ್ ಬಿಟ್ಟು ಬೇರೆಡೆ ಯಾವುದೇ ಪ್ರತಿಭಟನೆ, ರ‍್ಯಾಲಿಗಳಿಗೆ ಅವಕಾಶ ಇರುವುದಿಲ್ಲ. ಬಂದ್ ವೇಳೆ ಸಾವು ನೋವು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾದರೆ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳೇ ಹೊಣೆ ಆಗುತ್ತವೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
Advertisement
ಬಲವಂತವಾಗಿ ವಾಹನ ತಡೆ, ಅಂಗಡಿ ಮುಂಗಟ್ಟು ಮುಚ್ಚಿಸುವಂತಿಲ್ಲ. ಒಂದೊಮ್ಮೆ ಬಲವಂತದ ಕ್ರಮಗಳಿಗೆ ಮುಂದಾದ್ರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ತೀವಿ ಎಂದು ತಾಕೀತು ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಬಂದ್‌ಗೆ ಅವಕಾಶ ಇಲ್ಲವೆಂದು ಹೇಳಿದ್ದಾರೆ. ಆದ್ರೆ ಕನ್ನಡ ಒಕ್ಕೂಟಗಳು ಮಾತ್ರ ಇದಕ್ಕೆ ಡೋಂಟ್‌ಕೇರ್ ಎಂದಿವೆ. ಇದನ್ನೂ ಓದಿ: ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ – ಹಸುಗೂಸಿನೊಂದಿಗೆ ಬೀದಿಗೆ ಬಿದ್ದ ದಂಪತಿ
Advertisement
Advertisement
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಧಾರವಾಡ, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರದ 2 ತಾಲೂಕಲ್ಲಿ ಮಾತ್ರ ಬಂದ್) ಜಿಲ್ಲೆಗಳು ಸಂಪೂರ್ಣ ಸ್ಥಬ್ಧವಾಗುವ ಸಾಧ್ಯತೆಗಳಿವೆ. ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಯಾದಗಿರಿ, ಕೊಡಗು, ಗದಗ, ಕಲಬುರಗಿ, ರಾಯಚೂರು, ಶಿವಮೊಗ್ಗ, ಕೊಪ್ಪಳ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಬಂದ್‌ಗೆ ಕರೆ ನೀಡದಿರುವುದರಿಂದ ಎಂದಿನಂತೆ ಈ ಜಿಲ್ಲೆಗಳಲ್ಲಿ ಕೆಲ ನಡೆಯಲಿದೆ.
ಏನೆಲ್ಲಾ ಸೇವೆ ಬಂದ್?
ಓಲಾ ಊಬರ್, ಆಟೋ, ಗೂಡ್ಸ್ ವಾಹನ, ಹೋಟೆಲ್, ಚಿತ್ರಮಂದಿರ, ಜಿಮ್, ಹೋಟೆಲ್, ಮಾಲ್, ಬೀದಿ ಬದಿ ವ್ಯಾಪಾರ, ಕೆ.ಆರ್ ಮಾರ್ಕೆಟ್, ಶಾಲಾ ವಾಹನಗಳು, ಸಿನಿಮಾ ಶೂಟಿಂಗ್, ಆಭರಣ ಮಳಿಗೆಗಳು ಬಂದ್ ಆಗಿರಲಿವೆ.
ಏನಿರುತ್ತೆ?
ಆಸ್ಪತ್ರೆ, ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ನಮ್ಮ ಮೆಟ್ರೋ, ರೈಲು, ವಿಮಾನ, ಹಾಲು, ತರಕಾರಿ, ಬ್ಯಾಂಕ್, ಪೋಸ್ಟ್ ಆಫೀಸ್ ಸೇವೆ ಇರಲಿವೆ.
ಇರುತ್ತಾ? ಇರಲ್ವಾ?
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಇರುತ್ತೆ ಎಂದು ಹೇಳಲಾಗಿದೆ. ಆದ್ರೆ, ನೌಕರರು ಕರ್ತವ್ಯಕ್ಕೆ ಹಾಜರಾಗ್ತಾರಾ ಅನ್ನುವ ಬಗ್ಗೆ ಸ್ಪಷ್ಟವಾಗಿಲ್ಲ.
ಎಲ್ಲೆಲ್ಲೆ ಶಾಲಾ ಕಾಲೇಜುಗಳು ರಜೆ?
ಬೆಂಗಳೂರು, ಕೋಲಾರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಬೇರೆಡೆಗೆ ರಜೆ ಘೋಷಿಸುವ ನಿರ್ಧಾರವನ್ನು ಬಿಇಓಗಳ ವಿವೇಚನೆಗೆ ಬಿಡಲಾಗಿದೆ.
Web Stories