ಬೆಂಗಳೂರು: ಶನಿವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ (Karnataka Bandh) ವಿದ್ಯಾರ್ಥಿಗಳು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬಂದ್ ದಿನವೇ ಸರ್ಕಾರಿ, ಖಾಸಗಿ, ಅನುದಾನಿತ ಎಲ್ಲಾ ಶಾಲೆಗಳಲ್ಲೂ ಜಲವು ತರಗತಿಗಳಿಗೆ ಪರೀಕ್ಷೆ (Exam) ನಡೆಯಲಿದೆ. ಬಂದ್ ಘೋಷಿಸಿದ್ದರೂ ಶಿಕ್ಷಣ ಇಲಾಖೆ (Education Department) ಇನ್ನೂ ನಿರ್ಧಾರ ಕೈಗೊಳ್ಳದ ಕಾರಣ ಬಂದ್ ದಿನ ಪರೀಕ್ಷೆ ಇದ್ಯಾ? ಇಲ್ವೋ ಎಂಬ ಗೊಂದಲದಲ್ಲಿ ಪೋಷಕರಿದ್ದಾರೆ.
1 ರಿಂದ 3ನೇ ತರಗತಿಗೆ ನಲಿ-ಕಲಿ ಮೌಲ್ಯಮಾಪನ, 4-5ನೇ ತರಗತಿಗೆ ಗಣಿತ ವಿಷಯಗಳ ಪರೀಕ್ಷೆ, 6 ರಿಂದ 8ನೇ ತರಗತಿಗೆ ಗಣಿತ ವಿಷಯಗಳ ಪರೀಕ್ಷೆ ನಡೆಯಲಿದೆ. ಖಾಸಗಿ ಶಾಲೆಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಬೇರೆ ವಿಷಯಗಳ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡಲು ಬಿಬಿಎಂಪಿಗೆ ಅಧಿಕಾರ: ವಿಧೇಯಕ ಅಂಗೀಕಾರ
ಬಂದ್ ದಿನ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಜವಾಬ್ದಾರಿ ಹೊರುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೆಚ್ಚಾಗಿದೆ.
ಈಗಾಗಲೇ ಶನಿವಾರ ಬಂದ್ ಬೇಡ ಎಂದು ಪೋಷಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಪರೀಕ್ಷೆ ಸಮಯದಲ್ಲಿ ಬಂದ್ ಬೇಡ ಎಂದಿದ್ದಾರೆ. ಪರೀಕ್ಷಾ ದಿನಾಂಕಗಳು ಈ ಹಿಂದೆಯೇ ನಿರ್ಧಾರ ಆಗಿದೆ. ನಾಡು-ನುಡಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಬಂದ್‌ನಲ್ಲಿ ಭಾಗಿಯಾಗಲು ಆಗುವುದಿಲ್ಲ. ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ.