ಬೆಂಗಳೂರು: ಕರ್ನಾಟಕ ಬಂದ್‍ನ ಎಫೆಕ್ಟ್ ನಮ್ಮ ಮೆಟ್ರೋಗೆ ತಟ್ಟಿಲ್ಲ. ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಗಿದೆ. ಜನ ಕೂಡ ಸಹಜವಾಗಿ ತಮ್ಮ ತಮ್ಮ ಕೆಲಸಗಳಿಗೆ ಮೆಟ್ರೋ ಮೂಲಕ ಹೋಗುತ್ತಿದ್ದಾರೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬೇರೆ ಬೇರೆ ಭಾಗಗಳಿಗೆ ಹೋಗುವ ಪ್ರಯಾಣಿಕರು ಸಹಜವಾಗಿಯೇ ಮೆಟ್ರೋ ಮೂಲಕ ಸಂಚರಿಸುತ್ತಿದ್ದಾರೆ. ಬಂದ್ ಮೂಲಕ ಯಾವುದೇ ಪ್ರಯೋಜನವಿಲ್ಲ. ಬಂದ್ ಅನ್ನೋದು ಸಾಮಾನ್ಯವಾಗಿದೆ. ಬಂದ್‍ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ ಎಂದು ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಬಂದ್ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮುಂಜಾಗೃತ ಕ್ರಮವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಕೂಡ ಹೆಚ್ಚಿದೆ.
Advertisement
Advertisement
ರೈಲ್ವೇ ಸ್ಟೇಷನ್ ಖಾಲಿ ಖಾಲಿ:
ಸರೋಜಿನಿ ಮಹಿಷಿ ವರದಿ ಅನುಷ್ಠಾನ ಮಾಡಬೇಕು, ಕನ್ನಡಿಗರಿಗೆ ಉದ್ಯೋಗ ನೀಡಬೇಕು ಅನ್ನೋ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆಕೊಟ್ಟಿವೆ. ಬಂದ್ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ಖಾಲಿ ಖಾಲಿಯಾಗಿ ಬಣಗುಡುತ್ತಿದೆ. ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀರಾ ಇಳಿಮುಖವಾಗಿದ್ದು, ಕಾಲಿಡಲು ಜಾಗವಿಲ್ಲದಂತ ರೈಲ್ವೇ ಸ್ಟೇಷನ್‍ನಲ್ಲಿ ಇವತ್ತು ಪ್ರಯಾಣಿಕರೇ ಇಲ್ಲ.
Advertisement
Advertisement
ಬಂದ್‍ನಿಂದ ಕೆಲಸ ಕಾರ್ಯಗಳ ಮೇಲೆ ಏರುಪೇರಾಗಬಹುದು ಅಂತ ನಿರೀಕ್ಷೆಯಲ್ಲಿ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಓಲಾ ಉಬರ್, ಪ್ರೀ ಪೈಯ್ಡ್, ಟ್ಯಾಕ್ಸಿ ಆಟೋಗಳು ಸಹ ರೈಲ್ವೇ ನಿಲ್ದಾಣದ ಮುಂದೆ ಕ್ಯೂ ನಿಲ್ಲುತ್ತಿತ್ತು. ಇವತ್ತು ಅವೂ ಸಹ ಖಾಲಿ ಖಾಲಿಯಾಗಿವೆ. ಬಂದ್ ಬಿಸಿ ರೈಲ್ವೇ ಇಲಾಖೆಗೆ ತಟ್ಟಿದೆ ಅಂತ ಹೇಳಬಹುದು.