ಬೆಂಗಳೂರು: ಮಹದಾಯಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಿಗೂ ಬಂದ್ ಬಿಸಿ ತಟ್ಟಿದೆ.
ದಿನ ನಿತ್ಯಕ್ಕಿಂತ ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿದ್ದು, ರೈಲ್ವೇ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮಹದಾಯಿ ಹೋರಾಟವನ್ನು ಬೆಂಬಲಿಸಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಬಣದಿಂದ ಮುತ್ತಿಗೆ ಹಾಕಿದ್ದಾರೆ.
Advertisement
ರೈಲ್ವೇ ಸ್ಟೇಷನ್ ಗೆ ಕರವೇ ಮುತ್ತಿಗೆ ಹಿನ್ನೆಲೆಯಲ್ಲಿ ಸ್ಟೇಷನ್ ಫ್ರಂಟ್ ಮತ್ತು ಬ್ಯಾಕ್ ಗೇಟಲ್ಲಿ ಪೊಲೀಸ್ ಫುಲ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರೈಲ್ವೇ ಸ್ಟೇಷನ್ ಮುಂಭಾಗ ಬ್ಯಾರಿಕೇಡ್ ಗಳನ್ನ ಹಾಕಿ ಬಂದೋಬಸ್ತ್ ಮಾಡಿದ್ದಾರೆ. 150ಕ್ಕೂ ಹೆಚ್ಚು ಪೊಲೀಸರನ್ನು ಆಯೋಜಿಸಲಾಗಿದೆ.
Advertisement
Advertisement
ರೈಲ್ವೇ ಸ್ಟೇಷನ್‍ಗೆ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಮುತ್ತಿಗೆ ನಡೆದಿದ್ದು, ಪೊಲೀಸರು ಕರವೇ ಕಾರ್ಯಕರ್ತರನ್ನ ತಡೆಯುತ್ತಿದ್ದಾರೆ. ಮಹದಾಯಿ ನಮ್ಮದು, ಮಹದಾಯಿ ನಮ್ಮದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕರವೇ ಕಾರ್ಯಕರ್ತರ ಘೋಷಣೆ ಕೂಗುತ್ತಿದ್ದಾರೆ.
Advertisement
ಕೇಂದ್ರ ಸರ್ಕಾರದ ಗಮನ ಸೆಳೆಯಲು ರೈಲ್ವೆ ನಿಲ್ದಾಣಕ್ಕೆ ಹೋಗಿ ರಾಜ್ಯದ ಎಲ್ಲಾ ರೈಲ್ವೇ ನಿಲ್ದಾಣಗಳಿಗೂ ಮುತ್ತಿಗೆ ಹಾಕಲಾಗಿದೆ. ಕುಡಿಯೋ ನೀರಿಗಾಗಿ ಇಂದು ಹೋರಾಟ ಮಾಡಲಾಗ್ತಿದೆ, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ರೈಲ್ವೇ ಸ್ಟೇಷನ್‍ಗೆ ಕರವೇ ಮುತ್ತಿಗೆ ಹಾಕಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡನನ್ನು ಬಂಧಿಸಿದ್ದಾರೆ. ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಅಧ್ಯಕ್ಷ ನಾರಾಯಣಗೌಡನನ್ನು ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಕರ್ತರು ರಸ್ತೆಗಳಲ್ಲೇ ಮಲಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.