ಬೆಂಗಳೂರು: ಏಪ್ರಿಲ್ 12 ರಂದು ಕರೆ ನೀಡಲಾಗಿದ್ದ `ಕರ್ನಾಟಕ ಬಂದ್’ ನಿರ್ಧಾರದಿಂದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಿಂದೆ ಸರಿದಿದ್ದಾರೆ. ಬಂದ್ ಮಾಡುವುದರ ಬದಲಿಗೆ ಅಂದು ರಾಜಭವನ ಮುತ್ತಿಗೆ ಹಾಕಿ, ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ನಾವು ಎಂದು ಕಾವೇರಿ ನಿರ್ವಹಣಾ ಮಂಡಳಿಯನ್ನು ಒಪ್ಪುವುದಿಲ್ಲ. ಸುಪ್ರೀ ಕೋರ್ಟ್ ನಿರ್ವಹಣಾ ಮಂಡಳಿಯನ್ನು ರಚನೆಯನ್ನು ಪ್ರಸ್ತಾಪ ಮಾಡಿಲ್ಲ. ನಟರದ ರಜನಿಕಾಂತ್, ಕಮಲ್‍ಹಾಸನ್ ಅವರು ರಾಜಕೀಯಕ್ಕಾಗಿ ಕಾವೇರಿ ವಿಷಯವನ್ನ ಕೆದಕಬಾರದು ಎಂದು ಹೇಳಿದ್ದಾರೆ.
Advertisement
ನೀತಿ ಸಂಹಿತೆ ಉಲ್ಲಂಘಟನೆ ಆರೋಪ: ವಾಟಾಳ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಲಾಗಿದ್ದು, ಚುನಾವಣಾ ಆಯೋಗಕ್ಕೆ ಆರ್ ಟಿಐ ಕಾರ್ಯಕರ್ತ ಉಮೇಶ್ ಎಂಬವರು ದೂರು ನೀಡಿದ್ದಾರೆ. ವಾಟಾಳ್ ನಾಗರಾಜ್ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದರ ನಡುವೆಯೇ ಬಂದ್ ಗೆ ಕರೆ ನೀಡಿದ್ದಾರೆ. ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.