ಹುಬ್ಬಳ್ಳಿ: ಒತ್ತಾಯಪೂರ್ವಕವಾಗಿ ಕರ್ನಾಟಕ ಬಂದ್ ಮಾಡುವವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡಿಸೆಂಬರ್ 30ಕ್ಕೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂದ್ ಮಾಡುವ ಪರಸ್ಥತಿ ರಾಜ್ಯದಲ್ಲಿಲ್ಲ. ರಾಜ್ಯ ಸರ್ಕಾರ ಈಗಾಗಲೇ ದಿಟ್ಟ ಕ್ರಮ ಕೈಗೊಂಡಿದೆ. ಈಗಾಗಲೇ ಕೊರೊನಾದಿಂದ ಬೀದಿ ಬದಿ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಮಾಡಬಾರದು. ಕನ್ನಡಪರ ಚಳುವಳಿಗಾರರು ಎನಿಸಿಕೊಂಡವರು ಹತ್ತತ್ತು ಬಾರಿ ಯೋಚನೆ ಮಾಡಲಿ. ಒತ್ತಾಯ ಮಾಡಿ ಬಂದ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರು, ಪತ್ರಕರ್ತರ ಸಂಘದ ಕೊಡುಗೆ ಅನನ್ಯ: ವೇದವ್ಯಾಸ ಕಾಮತ್
ಕಾನೂನು ಇದೆ, ಆ ಕಾನೂನು ಕ್ರಮ ಕೈಗೊಳ್ಳುತ್ತದೆ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಬ್ಯಾನ್ ಅನ್ನೋದಕ್ಕಿಂತ ನಮ್ಮವರು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಬ್ಯಾನ್ ಮಾಡಿ ತೋರಿಸಿದ್ದಾರೆ. ಯಾರೋ ಪುಂಡರು ಮಾಡಿದ ಕೆಲಸ ಅದು. ಈಗಲೇ ಮಾಡಿ, ಇವತ್ತೇ ಮಾಡಿ ಅಂತಾ ಡೆಡ್ ಲೈನ್ ಕೊಟ್ಟರೆ ಹೇಗೆ? ಈಗಾಗಲೇ ಮಹಾರಾಷ್ಟ್ರದ ಜೊತೆಗೂ ಮಾತನಾಡಿದ್ದೇವೆ. ಬಂದ್ ಕುರಿತು ಚರ್ಚೆ ಮಾಡಲು ಕನ್ನಡ ಪರ ಹೋರಾಟಗಾರರು ಬಂದರೆ ಸಿಎಂ ಅವರ ಜೊತೆ ಮಾತನಾಡೋಕೆ ಸಿದ್ಧ ಇದ್ದಾರೆ ಎಂದು ನಾಳೆ ಕರ್ನಾಟಕ ಬಂದ್ ಕೈ ಬಿಡಲು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‍ನದ್ದು ದೇಶದಲ್ಲಿ ಹಾರದ ಬಾವುಟ: ಆರ್. ಅಶೋಕ್ ವ್ಯಂಗ್ಯ