ಬೆಂಗಳೂರು: ಆರ್ಯುವೇದ, ಯುನಾನಿ ಮತ್ತು ಹೋಮಿಯೋಪತಿ ಓದಲು ಆಸಕ್ತಿ ಇರುವ ಹಾಗೂ ಯುಜಿ ನೀಟ್ (UG NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದ ರಾಜ್ಯದ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಅ.13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲು ತೀರ್ಮಾನಿಸಿದೆ.
ಅಂದು ಕೆಇಎ ಕಚೇರಿಯಲ್ಲಿ ಬೆಳಗ್ಗೆ 10ರಿಂದ ದಾಖಲೆಗಳ ಪರಿಶೀಲನೆ ನಡೆಯಲಿದೆ. ಇದು ಕೊನೆಯ ಅವಕಾಶ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಈಗಾಗಲೇ ವೆರಿಫಿಕೇಷನ್ ಸ್ಲಿಪ್ ಪಡೆದಿರುವವರು ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಇದುವರೆಗೂ ದಾಖಲಾತಿಗಳನ್ನು ಪರಿಶೀಲನೆ ಮಾಡಿಸಿಕೊಳ್ಳದಿರುವವರು ಮಾತ್ರ ಹಾಜರಾಗಬೇಕು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಸಣ್ಣ ಮಕ್ಕಳ ಹಾಲಿಗೆ 4, ದೊಡ್ಡ ಮಕ್ಕಳ ಕ್ವಾಟರ್ಗೆ 40 ರೂ. ಜಾಸ್ತಿ – ಸರ್ಕಾರದ ವಿರುದ್ಧ ಅಶೋಕ್ ಕಿಡಿ
Advertisement
ಯುಜಿ ಆಯುಷ್ (UG AYUSH) ಕೊನೆಯ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಅ.16ರಿಂದ ಆರಂಭವಾಗಲಿದೆ. ಅಂದು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ತಮ್ಮ ಇಚ್ಛೆಗಳನ್ನು ದಾಖಲು ಮಾಡುವುದಕ್ಕೂ ಅಂದೇ ಅವಕಾಶ ನೀಡಲಾಗಿದೆ. ಒಟ್ಟಾರೆ ಅ.21ಕ್ಕೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
Advertisement
ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು ಆಪ್ಷನ್ ಎಂಟ್ರಿಗೆ ಅ.15ರವರೆಗೆ ಅವಕಾಶ ನೀಡಲಾಗಿದೆ. ಪ್ರವೇಶ ಪ್ರಕಿಯೆ ಅ.18ರೊಳಗೆ ಮುಗಿಯಲಿದೆ ಎಂದು ಅವರು ವಿವರಿಸಿದ್ದಾರೆ. ವಿವರಗಳಿಗೆ ಕೆಇಎ ವೆಬ್ಸೈಟ್ಗೆ ಭೇಟಿ ನೀಡುವಂತೆ ಅವರು ಕೋರಿದ್ದಾರೆ.
Web Stories