ಬೆಂಗಳೂರು: ಸಾರಿಗೆ ಇಲಾಖೆಯ 4 ನಿಗಮಗಳ ವಿವಿಧ ಆಸ್ತಿಯನ್ನು ಒಟ್ಟು 540 ಕೋಟಿ ರೂ.ಗೆ ಅಡವಿಟ್ಟಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಪರಿಷತ್‌ನಲ್ಲಿ ಉತ್ತರಿಸಿದ್ದಾರೆ.
Advertisement
ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್‍ನ ಯು.ಬಿ ವೆಂಕಟೇಶ್ ಸಾರಿಗೆ ಇಲಾಖೆಯ ಸಾಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಸಾರಿಗೆ ಇಲಾಖೆ 4 ನಿಗಮಗಳ ವಿವಿಧ ಆಸ್ತಿಗಳನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿದೆ. ಬಿಎಂಟಿಸಿ – 390 ಕೋಟಿ ರೂ., ವಾಯುವ್ಯ ಸಾರಿಗೆ – 100 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ – 50 ಕೋಟಿ ರೂ. ಒಟ್ಟು 540 ಕೋಟಿ ರೂ. ಸಾಲ ಮಾಡಲಾಗಿದೆ ಎಂದರು. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಮುಗಿಯಿತು – ಪೆಟ್ರೋಲ್, ಡಿಸೇಲ್ ದರ ಏರಿಕೆಗೆ ಸಜ್ಜಾಗಿ
Advertisement
Advertisement
ಕೊರೊನಾ ಸಮಯದಲ್ಲಿ ನೌಕರರಿಗೆ ನಮಗೆ ಸಂಬಳ ಕೊಡಲು ಹಣ ಇರಲಿಲ್ಲ ಈ ವೇಳೆ ಸಾಲ ಮಾಡಿದ್ದೇವೆ. ಅಲ್ಲದೇ ನೌಕರರ ಭವಿಷ್ಯ ನಿಧಿ ಬಳಕೆಗೆ ಕೂಡ ಸಾಲ ಮಾಡಿದ್ದೇವೆ. ಕೊರೊನಾ ಸಮಯದಲ್ಲಿ ಸರ್ಕಾರ ಸಾರಿಗೆ ಇಲಾಖೆಗೆ 2,958 ಕೋಟಿ ರೂ. ನೀಡಿ ನೌಕರರಿಗೆ ಸಂಬಳ ನೀಡಲು ಮುಂದಾಗಿತ್ತು. ಸದ್ಯ ಕೋವಿಡ್‍ನಲ್ಲಿ ಮೃತರಾದ ಸಿಬ್ಬಂದಿಗಳ ಮಾಹಿತಿ ಪಡೆಯಲಾಗುತ್ತಿದ್ದು, ಮಾಹಿತಿ ಬಂದ ಹಾಗೆ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆದಷ್ಟು ಶೀಘ್ರ ಲಾಭಕ್ಕೆ ತರಲು ಸಮಿತಿ ರಚನೆ ಮಾಡಲಾಗಿದೆ. ಆದಷ್ಟು ಬೇಗ ಸಂಸ್ಥೆಯನ್ನು ಲಾಭದತ್ತ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?
Advertisement