ಬೆಂಗಳೂರು: ಟ್ರಾಫಿಕ್ ನಿಯಮ ಮತ್ತು ಟೋಯಿಂಗ್‍ಗೆ ವಿಶೇಷ ನಿಯಮ ಪೊಲೀಸ್ ಇಲಾಖೆ ಶೀಘ್ರವೇ ಜಾರಿಗೆ ತರಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
Advertisement
ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಜನಸ್ನೇಹ ನಿಯಮ ರಾಜ್ಯದಲ್ಲಿ ಜಾರಿ ಮಾಡಲಾಗುತ್ತದೆ ಅಂತ ಭರವಸೆ ಕೊಟ್ಟರು. ಇದನ್ನೂ ಓದಿ: ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಉಕ್ರೇನ್ ನಿಂದ ಬಂದ ಕನ್ನಡಿಗ ವೈದ್ಯವಿದ್ಯಾರ್ಥಿಗಳಿಗೆ ಪ್ರವೇಶ
Advertisement
ರಾಜ್ಯದಲ್ಲಿ 1,05,864 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿರುವ ಜನಸಂಖ್ಯೆಗೆ ಅನುಪಾತವೂ 577 ಇದೆ. ಅಂದರೆ 577 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ ಅಂತ ಸಚಿವರು ಮಾಹಿತಿ ನೀಡಿದರು. ಕಳೆದ 5 ವರ್ಷಗಳಲ್ಲಿ 35 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. ಬಾಕಿ ಇರುವ ಸಬ್ ಇನ್ಸ್‌ಪೆಕ್ಟರ್ ನೇಮಕ ಆಗಿದೆ. ಅವ್ರಿಗೆ ಟ್ರೈನಿಂಗ್ ಆಗುತ್ತಿದೆ. ಅವರು ಬಂದ್ರೆ ಸಬ್ ಇನ್ಸ್‌ಪೆಕ್ಟರ್. ಎಲ್ಲಾ ಹುದ್ದೆ ಭರ್ತಿ ಆಗುತ್ತದೆ. ಪೇದೆಗಳ ನೇಮಕಾತಿಯೂ ಆಗಿದೆ. ಪ್ರತಿ ವರ್ಷ 4 ಸಾವಿರ ಪೊಲೀಸರ ನೇಮಕ ಆಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಮೊದಲು ರಾಜ್ಯದಲ್ಲಿ 6 FSL ಲ್ಯಾಬ್‍ಗಳು ಇತ್ತು. ಈಗ ಇದನ್ನು ಹೆಚ್ಚಳ ಮಾಡಿ ಬಲಪಡಿಸಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲೂ FSL ಪ್ರಾರಂಭ ಮಾಡಲಾಗಿದೆ. ಮೊದಲು ನಮಗೆ DNA ಸ್ಯಾಂಪಲ್ ವರದಿ ತಡ ಆಗುತ್ತಿತ್ತು. ಎರಡು ವರ್ಷ ತಡ ಆಗ್ತಿತ್ತು. ಈಗ ಹುಬ್ಬಳ್ಳಿಯಲ್ಲಿ DNA ಲ್ಯಾಬ್ ಪ್ರಾರಂಭ ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೋಯ್ಡಾದಲ್ಲಿ ರಾಜ್‍ನಾಥ್ ಸಿಂಗ್ ಮಗ ಪಂಕಜ್ ಸಿಂಗ್‍ಗೆ ದಾಖಲೆಯ ಜಯ
ಪೊಲೀಸರಿಗೆ ಹೊಸ, ಹೊಸ ವೆಹಿಕಲ್ ಕೊಡಿಸಿದ್ದೇವೆ. ತಂತ್ರಜ್ಞಾನ ಅಳವಡಿಕೆಯನ್ನು ಇಲಾಖೆಯಲ್ಲಿ ಮಾಡಲಾಗಿದೆ. ಟೋಯಿಂಗ್ ಮಾಡೋದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಈಗಾಗಲೇ ಸಿಎಂ ಜೊತೆ ಈ ಬಗ್ಗೆ ಚರ್ಚೆ ಆಗಿದೆ. ಹೊಸ ಟೋಯಿಂಗ್ ವ್ಯವಸ್ಥೆ ಶೀಘ್ರವಾಗಿ ಜಾರಿ ಮಾಡುತ್ತೇವೆ. ಅಲ್ಲದೆ ಟ್ರಾಫಿಕ್ ಇಲಾಖೆ ವ್ಯವಸ್ಥೆಯಲ್ಲೂ ವಿಶೇಷ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರುತ್ತಿದ್ದೇವೆ. ಶೀಘ್ರವೇ ಎರಡೂ ನೂತನ ವ್ಯವಸ್ಥೆ ಜಾರಿಗೆ ಬರುತ್ತೆ ಎಂದರು.
ಇಂಟೆಲಿಜೆನ್ಸ್ ವಿಭಾಗಕ್ಕೆ ಪ್ರತ್ಯೇಕ ತಂಡ ಮಾಡುವ ಚಿಂತನೆ ಇದೆ. ಈಗ ಇಲಾಖೆಯಲ್ಲಿ ಇರೋರನ್ನೆ ಇಂಟಲಿಜೆನ್ಸ್‌ಗೆ ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ನೇಮಕಾತಿ ಮಾಡಿಕೊಂಡು, ಅವರಿಗೆ ವಿಶೇಷ ತರಬೇತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ ಅಂತ ತಿಳಿಸಿದರು.