ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಯ್ತು. ಈ ವೇಳೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೋಡಿದರೆ ನಾವು ನಾಯಿಗಳಾಗುವುದು ಉತ್ತಮ ಎನ್ನಿಸುತ್ತದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಮಾರ್ಮಿಕವಾಗಿ ಆಕ್ರೋಶ ಹೊರಹಾಕಿದರು.
Advertisement
ಬೀದಿ ನಾಯಿಗಳ ಹಾವಳಿ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ತಿವಿದು ಕ್ರಮ ವಹಿಸುವಂತೆ ಆಗ್ರಹಿಸಿದ್ರು. ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರಿನ ಬೀದಿನಾಯಿಗಳ ಸಮಸ್ಯೆ ಬಗ್ಗೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಪ್ರಶ್ನೆ ಮಾಡಿದರು. ಬೆಂಗಳೂರು ಹೊರ ವಲಯದಲ್ಲಿ ಜಾಗ ನೀಡಿ ಗೋ ಶಾಲೆಗಳ ಮಾದರಿ ನಾಯಿ ಶಾಲೆ ಮಾಡುವ ಬಗ್ಗೆ ಆದರೂ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಇದೇ ವೇಳೆ ಶಾಸಕ ಸುರೇಶ್‍ಕುಮಾರ್ ಮಾತನಾಡಿ, ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೋಡಿದರೆ ನಾವು ನಾಯಿಗಳಾಗುವುದು ಉತ್ತಮ ಎನ್ನಿಸುತ್ತದೆ ಎಂದು ಮಾರ್ಮಿಕವಾಗಿ ಆಕ್ರೋಶ ಹೊರಹಾಕಿದ್ರು. ಮುಖ್ಯ ಸಚೇತಕ ಸತೀಶ್ ರೆಡ್ಡಿ ಕೂಡ ನಾಯಿಗಳ ಹಾವಳಿಗೆ ಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇದನ್ನೂ ಓದಿ: 36 ಸಾವಿರ ಮತದಿಂದ ಸೋತವರು ಮೋದಿ ಬಗ್ಗೆ ಮಾತಾಡ್ತಾರೆ: ಸಿದ್ದುಗೆ ವಿಶ್ವನಾಥ್ ಟಾಂಗ್
Advertisement
Advertisement
ಗೋ ಶಾಲೆ ರೀತಿ ನಾಯಿ ಶಾಲೆ ಮಾಡುವ ಬಗ್ಗೆ ಸಿಎಂ ಜೊತೆ ಕುಳಿತು ಚರ್ಚೆ ಮಾಡುವುದು ಒಳಿತು ಎಂದು ಮಾಧುಸ್ವಾಮಿ ಹೇಳಿದ್ರು. ಸರ್ಕಾರದ ಪರವಾಗಿ ಉತ್ತರಿಸಿ ನಾಯಿ ಸಂತಾನಹರಣ ಪ್ರಕ್ರಿಯೆ ಬಿಬಿಎಂಪಿಯಿಂದ ನಡೆಯುತ್ತಲೇ ಇದೆ. ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕಿಕೊಳ್ಳುವ ವಿಚಾರದ ಬಗ್ಗೆ ಕೂಡಾ ಚರ್ಚೆ ಮಾಡುತ್ತೇವೆ. ಬೆಂಗಳೂರು ಹೊರವಲಯದಲ್ಲಿ ಜಾಗ ಕೊಟ್ಟು ವ್ಯವಸ್ಥೆ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಜಬ್ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್ ಶಂಕೆ
Advertisement