ಬೆಂಗಳೂರು: ದೇಗುಲ ತೆರವು ಮಾಡಿ ಹಿಂದೂ ಸಂಘಟನೆ ಮತ್ತು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಸರ್ಕಾರ ಈಗ ಎಚ್ಚೆತ್ತಿದೆ. ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಮಾಡದಿರಲು ತೀರ್ಮಾನಿಸಿದೆ.
ಸುಪ್ರೀಂಕೋರ್ಟ್ ಆದೇಶ ಪಾಲನೆಯಿಂದ ಬಚಾವ್ ಆಗಲು ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಮಸೂದೆ -2021 ಮಂಡಿಸಿದೆ.
Advertisement
Advertisement
ಕಾನೂನು ತೊಡಕು ಹಿನ್ನೆಲೆಯಲ್ಲಿ ಹುಚ್ಚಗಣಿ ಮಹಾದೇವಮ್ಮ ದೇಗುಲದ ಮರು ನಿರ್ಮಾಣದ ಹೊಣೆಯನ್ನು ಸರ್ಕಾರದ ಬದಲು ಪಕ್ಷದ ಹೆಗಲಿಗೆ ವಹಿಸಲು ಸಂಪುಟ ಸಭೆಯಲ್ಲಿ ಸಿಎಂ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ: ಬೆಲ್ಲದ್
Advertisement
ಇದೇ ವೇಳೆ, ಮುದ್ರಾಂಕ ಶುಲ್ಕ ಕಡಿತಕ್ಕೆ ತಿದ್ದುಪಡಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡಿಸಿದೆ. ಮುದ್ರಾಂಕ ಶುಲ್ಕವನ್ನು ಶೇ.5ರಿಂದ ಶೇ.3ಕ್ಕೆ ಇಳಿಸಲು ಸರ್ಕಾರ ಉದ್ದೇಶಿಸಿದೆ.
Advertisement
45 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಮನೆಗಳಿಗೆ ಇನ್ನು ಮುಂದೆ ಶೇ.3ರಷ್ಟು ಮುದ್ರಾಂಕ ಶುಲ್ಕ ಅನ್ವಯವಾಗಲಿದೆ. ಆದ್ರೆ, ಸೈಟ್‍ಗಳಿಗೂ ರಿಯಾಯ್ತಿ ನೀಡಿ ಅಂತ ಕಾಂಗ್ರೆಸ್ ಒತ್ತಾಯಿಸಿದೆ. ಇದನ್ನೂ ಓದಿ: ನಾನು ಒಬ್ಬ ಜನಪ್ರತಿನಿಧಿ – ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು
ಮಸೂದೆಯಲ್ಲಿ ಏನಿದೆ?
– ಈ ಅಧಿನಿಯಮ ಜಾರಿಯಾದ ದಿನದಂದು ಅಸ್ತಿತ್ವದಲ್ಲಿರುವ ಎಲ್ಲಾ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ
– ಯಾವುದೇ ತೀರ್ಪು, ಆದೇಶ ಇದ್ರೂ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಧಾರ್ಮಿಕ ಕೇಂದ್ರಗಳ ಸಂರಕ್ಷಣೆ
– ಸಾರ್ವಜನಿಕ ಸ್ಥಳಗಳಲ್ಲಿ ಇನ್ಮುಂದೆ ಯಾವುದೇ ಧಾರ್ಮಿಕ ಕಟ್ಟಡ ಕಟ್ಟಲು ಅವಕಾಶ ನೀಡಬಾರದು
– ಸಂರಕ್ಷಿತ ಕಟ್ಟಡಗಳಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಲು ಅವಕಾಶ ನೀಡುವುದು
– ಸದ್ಬಾವನೆಯಿಂದ ಹೋರಾಟ ನಡೆಸಿದವರ ವಿರುದ್ಧ ಯಾವುದೇ ದಾವೆ ಹೂಡುವಂತಿಲ್ಲ (ಧಾರ್ಮಿಕ ಕೇಂದ್ರದ ವ್ಯಾಪ್ತಿಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ, ಬೌದ್ಧ ವಿಹಾರ, ಮಜರ್ ಗಳು ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳು)