ಬೆಂಗಳೂರು: ಮಂಡ್ಯದಿಂದ (Mandya) ನಾನು ಸ್ಪರ್ಧೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ನಾನು ಸ್ಪರ್ಧೆ ಮಾಡಲ್ಲ. ಮಂಡ್ಯದಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕರ್ತರ ಒತ್ತಡ ಇರುವುದು ನಿಜ. ಆದರೆ ಮಂಡ್ಯದಿಂದ ನಾನು ಸ್ಪರ್ಧೆ ಮಾಡುವುದಕ್ಕೆ ಆಗಲ್ಲ. ನಾನು ಚನ್ನಪಟ್ಟಣದಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದೇನೆ. ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ನಾನು ಹೋಗಲ್ಲ. ಮಂಡ್ಯದಲ್ಲಿ ಅಭ್ಯರ್ಥಿಗಳು ಇದ್ದಾರೆ. ಈ ಬಗ್ಗೆ ಕೂತು ತೀರ್ಮಾನ ಮಾಡುತ್ತೇವೆ. ನಾಳೆ ಮೂರನೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?
ಸಿವಿ.ಚಂದ್ರಶೇಖರ್ ಜೆಡಿಎಸ್‍ಗೆ (JDS) ಸೇರ್ಪಡೆ ವಿಚಾರವಾಗಿ ಮಾತನಾಡಿ, ಕೊಪ್ಪಳ (Koppala) ವಿಧಾನಸಭಾ ಕ್ಷೇತ್ರದಲ್ಲಿ ಚಂದ್ರಶೇಖರ್ ಅವರು ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಸಂಘಟನೆ ಮಾಡಿದ್ದಾರೆ. ಎರಡ್ಮೂರು ಬಾರಿ ಅವರಿಗೆ ಟಿಕೆಟ್ ಮಿಸ್ ಆಗಿದೆ. ಭೂಮರೆಡ್ಡಿ ಅವರೂ ಕೂಡ ಅಲ್ಲಿ ಬಿಜೆಪಿಗೆ (BJP) ಕೆಲಸ ಮಾಡಿದ್ದವರು. 2013ರಿಂದ ಭೂಮರೆಡ್ಡಿ ಅವರಿಗೂ ನನಗೂ ಸಂಪರ್ಕ ಇದೆ. ಚಂದ್ರಶೇಖರ್ ಅವರಿಗೆ ಹಲವಾರು ಬಾರಿ ಹೇಳಿದ್ದೆ. ಅಲ್ಲಿ ನಿಮಗೆ ಭವಿಷ್ಯ ಇಲ್ಲ ತೀರ್ಮಾನ ಮಾಡಿ ಅಂದಿದ್ದೆ. ಅಲ್ಲಿ ಈ ಬಾರಿಯೂ ಟಿಕೆಟ್ ಮಿಸ್ ಆಗಿದೆ. ಇದರಿಂದ ಮನನೊಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಕೊಪ್ಪಳದಿಂದ ನಮ್ಮ ಪಕ್ಷದಿಂದ ಸಿವಿ.ಚಂದ್ರಶೇಖರ್ ಸ್ಪರ್ಧೆ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಪ್ಪ JDS, ಮಗ BJPಗೆ ಬೆಂಬಲ – ಮತದಾರ, ಕಾರ್ಯಕರ್ತರಲ್ಲಿ ಗೊಂದಲ