ಮೇ ಮೊದಲ ವಾರ ರಾಜ್ಯದಲ್ಲಿ ಚುನಾವಣೆ- ಸರ್ಕಾರಕ್ಕೆ ಸುಳಿವು ನೀಡಿದ ಇಸಿ

Public TV
1 Min Read
ELECTION

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೆಚ್ಚು ಕಡಿಮೆ ಮುಹೂರ್ತ ಫಿಕ್ಸ್ ಆದಂತಾಗಿದೆ. ಕಳೆದ ಬಾರಿಗಿಂತ ಮೂರು ದಿನ ಮೊದಲೇ ಚುನಾವಣಾ ನಡೆಸಲು ಆಯೋಗ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಮೇ 2, 2018ರಂದು ಚುನಾವಣೆ ನಡೆಯುವ ಸಾಧ್ಯತೆಯಿದೆ.

ಏಪ್ರಿಲ್ ಅಂತ್ಯದೊಳಗೆ ನಿಮ್ಮೆಲ್ಲಾ ಯೋಜನೆಗಳು ಪೂರ್ಣವಾಗುವ ಹಾಗೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಆಯೋಗ ಸೂಚನೆ ಕೊಟ್ಟಿದೆ. 2018, ಮೇ 28ಕ್ಕೆ ರಾಜ್ಯ ಸರ್ಕಾರದ ಆಡಳಿತ ಅವಧಿ ಅಂತ್ಯವಾಗಲಿದ್ದು, ಅದಕ್ಕೂ ಮೊದಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ದತೆ ನಡೆಸಿದೆ.

ಸೋಮವಾರ ಶಿಕ್ಷಣ ಇಲಾಖೆಯೂ ಸಭೆ ನಡೆಸಿ ಚುನಾವಣೆ ವೇಳೆ ಪರೀಕ್ಷೆಗಳು ಎದುರಾಗದಂತೆ ಕ್ರಮವಹಿಸಲು ಚರ್ಚೆ ನಡೆಸಿದೆ. ಶಿಕ್ಷಕರು ಚುನಾವಣಾ ಕೆಲಸದಲ್ಲಿ ಭಾಗಿಯಾಗುವುದರಿಂದ ಪರೀಕ್ಷೆಗೆ ತೊಂದರೆಯಾಗದಂತೆ ಚುನಾವಣಾ ದಿನಾಂಕ ಪ್ರಕಟಿಸುವಂತೆ ಚುನಾವಣಾ ಆಯೋಗ ಕೋರಲು ಇದೇ ವೇಳೆ ನಿರ್ಧಾರ ಮಾಡಲಾಗಿದೆ.

ಕಳೆದ ಬಾರಿ 2013ರ ಮೇ 5 ರಂದು ಚುನಾವಣೆ ನಡೆದಿತ್ತು. ಈ ಬಾರಿ ಮೂರು ದಿನ ಮೊದಲೇ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಾಗಿದೆ..ಈ ನಡುವೆ ಇಂದು ಗುಜರಾಜ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ಸಾಧ್ಯತೆಗಳಿವೆ.

vlcsnap 2017 10 24 10h01m19s166

vlcsnap 2017 10 24 10h01m27s31

vlcsnap 2017 10 24 10h01m40s145

vlcsnap 2017 10 24 10h01m46s208

vlcsnap 2017 10 24 10h01m55s49

vlcsnap 2017 10 24 10h02m01s93

vlcsnap 2017 10 24 10h02m24s88

voting 759

Share This Article
Leave a Comment

Leave a Reply

Your email address will not be published. Required fields are marked *