ತುಮಕೂರು: ಎಲ್ಲಾ ಕಾಲಕ್ಕೂ ಎಲ್ಲಾ ಸಮೀಕ್ಷೆಗಳು ನಿಜವಾಗಲ್ಲ, ಕೆಲವೊಮ್ಮೆ ನಿಜವಾಗಿದೆ. ಕೆಲವೊಮ್ಮೆ ಸುಳ್ಳಾಗಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ (G Parameshwara) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್‌ಲ್ಲಿ ಕಾಂಗ್ರೆಸ್ (Congress) ಮುಂದಿದೆ. ಕಾಂಗ್ರೆಸ್ ಪರ ಅಲೆ ಇರೋದು ಸಾಬೀತಾಗಿದೆ. ಇನ್ನು ಏನಿದ್ದರೂ ಸಂಖ್ಯೆಯ ದೃಢೀಕರಣ ಅಷ್ಟೇ ಬಾಕಿ. ನಾವು 130 ಸ್ಥಾನ ಪಡೆಯುತ್ತೇವೆ. ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಹೇಳಿದರು.
Advertisement
Advertisement
ಸಿದ್ದರಾಮಯ್ಯ (Siddaramaiah) ಕೂಡ ವರುಣಾದಲ್ಲಿ (Varuna) ಯಾವುದೇ ತೊಂದರೆ ಇಲ್ಲದೇ ಗೆಲ್ಲುತ್ತಾರೆ. ನಾನು ಕೂಡ ಕೊರಟಗೆರೆಯಲ್ಲಿ ಹಿಂದಿಗಿಂತ ಹೆಚ್ಚಿನ ಬಹುಮತದಲ್ಲಿ ಗೆಲ್ಲುತ್ತೇನೆ. 2013ರಲ್ಲಿ ನಾನು 120 ಸೀಟ್ ಬರುವ ಮುನ್ಸೂಚನೆ ಕೊಟ್ಟಿದ್ದೆ. ಆದರೆ 122 ಸ್ಥಾನ ಬಂದಿತ್ತು. ಈಗ ನಾನು 130 ಸ್ಥಾನ ಎಂದು ಹೇಳಿದ್ದೇನೆ. ನನ್ನ ಲೆಕ್ಕಾಚಾರ ಸರಿ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ 1 ಲಕ್ಷ 20 ಸಾವಿರ ಮತಗಳು ಬರುವ ನಿರೀಕ್ಷೆ ಇದೆ: ಲಕ್ಷ್ಮಣ್ ಸವದಿ
Advertisement
Advertisement
ಸಿಎಂ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಆಯ್ಕೆಯು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಸಿಎಲ್‍ಪಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರು ಒಳ್ಳೆ ಆಡಳಿತ ಕೊಡುತ್ತಾರೋ ಅಂತವರನ್ನು ಹೈಕಮಾಂಡ್ ಸಿಎಂ ಮಾಡಬಹುದು. ಹೈಕಮಾಂಡ್ ನನಗೆ ಸಿಎಂ ಕೊಡುತ್ತೇನೆ ಅಂದರೆ ಬೇಡ ಅನ್ನುತ್ತೇನಾ, ನಾನು ಸಿಎಂ ಆಗಬೇಕು ಎಂದು ಜಿಲ್ಲೆಯ ಅಭಿಮಾನಿಗಳ ಅಪೇಕ್ಷೆ ಇದೆ ಎಂದ ತಕ್ಷಣ ಅದು ಸಾಧ್ಯ ಆಗೋದಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಲ್ಲಿ ತಗ್ಗಿದ ಮತದಾನ ಪ್ರಮಾಣ – ನಗರ ಜನತೆ ನಿರುತ್ಸಾಹ; ಕಾರಣ ಏನು?