ಬೆಂಗಳೂರು: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ (Karnataka Election 2023) ಮತದಾನ ಬುಧವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಗ್ರಾಮೀಣ ಭಾಗಗಳಲ್ಲಿ ಜನರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ನಗರ ಭಾಗದ ಜನರು ಮತದಾನ ಮಾಡಲು ನಿರುತ್ಸಾಹ ತೋರಿದ್ದಾರೆ ಎಂಬುದು ಮತದಾನ ಪ್ರಮಾಣ ಅಂಕಿಅಂಶದಿಂದ ತಿಳಿದುಬಂದಿದೆ. ಬೆಂಗಳೂರಿನಲ್ಲಿ (Bengaluru) ಕಳೆದ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣ ಕೊಂಚ ತಗ್ಗಿದೆ.
ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಅಭಿಯಾನಗಳು ನಡೆಸಿದರೂ ಪ್ರಯೋಜನವಾಗಿಲ್ಲ. ಈ ಬಾರಿಯೂ ಈ ಹಿಂದಿನಷ್ಟೇ ಮತ ಚಲಾವಣೆಯಾಗಿದೆ. ಈ ಬಾರಿ ಬಿಬಿಎಂಪಿ ಶೇ. 73 ರಷ್ಟು ಮತದಾನದ ಪ್ರಮಾಣ ಗುರಿ ಹೊಂದಿತ್ತು. ಆದರೆ ಆಗಿದ್ದು ಬರಿ ಶೇ. 53 ರಷ್ಟು ಮಾತ್ರ. ನಗರದ 28 ಕ್ಷೇತ್ರಗಳಲ್ಲಿ 97.13 ಲಕ್ಷ ಮತದಾರರಿದ್ದಾರೆ. 1.43 ಲಕ್ಷ ಯುವ ಮತದಾರರು ಇದೇ ವರ್ಷ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಮುಗಿಯಿತು ಮತ ಸಮರ, ಶುರುವಾಯ್ತು ಲೆಕ್ಕಾಚಾರ – ಮತಗಟ್ಟೆ ಸಮೀಕ್ಷೆಗಳಲ್ಲಿ `ಕೈ’ ಮುನ್ನಡೆ
Advertisement
Advertisement
ಬೆಂಗಳೂರಿನಲ್ಲಿ ಯಾವ ವರ್ಷ ಎಷ್ಟು ಶೇಕಡ ಮತದಾನ?
2023 – 53.4
2018 – 54.72
2013 – 52.83
2008 -47.3
Advertisement
Advertisement
ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಲು ಕಾರಣವೇನು?
* ಕೊರೊನಾದಿಂದ ಮೃತಪಟ್ಟ 17 ಸಾವಿರ ಮಂದಿಯ ಮರಣ ಪ್ರಮಾಣ ಪತ್ರವನ್ನು ಪಡೆದು, ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಆಗಿಲ್ಲ.
* ಎರಡೆರೆಡು ಕಡೆ ಇರುವ ಮತದಾರರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆ ಆಗಿಲ್ಲ.
* ನಗರದಲ್ಲಿ ವೋಟರ್ ಐಡಿ ಇದ್ದರೂ, ವರ್ಕ್ ಫ್ರಂ ಹೋಂ ಮೇಲೆ ತಮ್ಮ ತಮ್ಮ ಊರಿಗಳಲ್ಲಿ ಉದ್ಯೋಗಿಗಳು ಉಳಿದುಕೊಂಡಿರುವುದು.
* ಮತದಾರರ ಪಟ್ಟಿಯಿಂದ ಬಹುತೇಕ ಜನರ ಹೆಸರುಗಳು ಡಿಲೀಟ್ ಆಗಿರುವುದು.
* ಬಹುತೇಕ ಮತಗಟ್ಟೆಗಳಲ್ಲಿ ಸಂಜೆ 6 ಘಂಟೆ ನಂತರ ಮತಗಟ್ಟೆಗಳಿಗೆ ಬಂದು ಮತದಾನದಿಂದ ವಂಚಿತರಾಗಿರೋದು. ಇದನ್ನೂ ಓದಿ: ಇಂತಹ ಎಕ್ಸಿಟ್ ಪೋಲ್‍ಗಳ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇಲ್ಲ: ಭಗವಂತ್ ಖೂಬಾ