– ಹಾಸನ ಟಿಕೆಟ್ ದಂಗಲ್ ಬಗ್ಗೆ ತೀವ್ರ ಚರ್ಚೆ
ಹಾಸನ: ವಿಧಾನಸಭಾ ಕ್ಷೇತ್ರದ (Assembly Election) ಟಿಕೆಟ್‍ಗಾಗಿ ಜೆಡಿಎಸ್‍ನಲ್ಲಿ (JDS) ನಡೆಯುತ್ತಿರುವ ಫೈಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ. ಹಾಸನದ ಮುಂದಿನ ಎಂಎಲ್‍ಎ ಭವಾನಿ ರೇವಣ್ಣ (Bhavani Revanna) ಇದು ಮಹಿಳೆಯರ ಕೋರಿಕೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಭವಾನಿ ರೇವಣ್ಣ ಪರ ಬ್ಯಾಟ್ ಬೀಸಿದ್ದಾರೆ.
ಪಕ್ಷ ಅಧಿಕಾರಕ್ಕೆ ತಂದು ಗೌಡರ ಕನಸಿನ ಪಕ್ಷ ಉಳಿಸಲು ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೋರಾಡುತ್ತಿದ್ದಾರೆ. ತಮ್ಮ ಆರೋಗ್ಯ ಲೆಕ್ಕಿಸದೆ ಕುಮಾರಸ್ವಾಮಿ ಹೋರಾಡುತ್ತಿದ್ದರೆ ಇಲ್ಲಿ ಒಂದು ಸ್ಥಾನಕ್ಕಾಗಿ ಅವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗೂ ದೇವೇಗೌಡರು ಎನ್ನುವ ಶಕ್ತಿಯ ಹಿಂದೆ, ನಮ್ಮ ಗುರಿ ಕುಮಾರಸ್ವಾಮಿ ಸಿಎಂ ಮಾಡೋದು, ಜೆಡಿಎಸ್‍ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣ ಮಕ್ಕಳಲ್ಲ. ತಮ್ಮ ಮಾತಿನ ಮೂಲಕ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ರೇವಣ್ಣ (H.D Revanna) ಪುತ್ರರ ವಿರುದ್ಧ ಕೆಲ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ
ಈ ಎಲ್ಲಾ ಬೆಳವಣಿಗೆ ನೋಡಿದ್ರೆ ಜೆಡಿಎಸ್ ಸರ್ವನಾಶಕ್ಕೆ ಹಾಸನದವರು ಮುನ್ನುಡಿ ಬರೆಯುತ್ತಿದ್ದಾರೆ. ಕುಮಾರಸ್ವಾಮಿ ಅವರ ಮಾತಿನಂತೆ ಎಲ್ಲರೂ ನಡೆಯಲಿ ಎಂದು ಹಾಸನ ಟಿಕೆಟ್ ದಂಗಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಬೆಂಬಲಿಗರು ಪೋಸ್ಟ್ ಮಾಡಿದ್ದಾರೆ. ಇತ್ತ ಹಾಸನಕ್ಕೆ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಭವಾನಿ ಪರ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಕರ್ನಾಟಕದ ಅಮ್ಮ ಭವಾನಿ ರೇವಣ್ಣ ಎಂದು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ಸ್ವತಂತ್ರ ಸರ್ಕಾರವೇ ನನ್ನ ಗುರಿ; ಅನುಗ್ರಹಕ್ಕೆ ರಾಯರ ಬಳಿ ಪ್ರಾರ್ಥಿಸಿದ್ದೇನೆ – ಹೆಚ್‌ಡಿಕೆ
ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ. ಹಾಸನದ ಮುಂದಿನ ಎಂಎಲ್‍ಎ ಭವಾನಿ ರೇವಣ್ಣ ಇದು ಮಹಿಳೆಯರ ಕೋರಿಕೆ ಎಂದು ಹಕ್ಕೊತ್ತಾಯದ ಪೋಸ್ಟ್‌ಗಳು ವೈರಲ್ ಆಗಿವೆ. ದಿನೇ ದಿನೇ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಭವಾನಿ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಮತ್ತು ಪ್ರಜ್ವಲ್, ಸೂರಜ್ ಅಭಿಮಾನಿಗಳ ನಡುವೆ ಮಾತಿನ ಸಮರ ಜೋರಾಗಿದೆ. ಸೂರಜ್, ಪ್ರಜ್ವಲ್ ಚೈಲ್ಡ್ ರೀತಿ ಮಾತನಾಡುತ್ತಾರೆ ಎಂದು ನಿಖಿಲ್ ಅಭಿಮಾನಿಗಳು ಕಿಡಿ ಕಾರಿದರೆ, ಜೆಡಿಎಸ್‍ಗೆ ಮುಖ್ಯ ಪವರ್ ಅಂದ್ರೆ ನಮ್ ಸೂರಜ್ ಬಾಸ್, ಹಾಸನದಲ್ಲಿ ಭವಾನಿ ಅಕ್ಕ ಬಿಟ್ಟು ಬೇರೆ ಯಾರು ಬಂದರು ಸೋಲು ಖಚಿತ ಎಂದು ತಿರುಗೇಟು ನೀಡಿದ್ದಾರೆ. ಭವಾನಿ ಅವರು ಹಾಸನ ಬಿಟ್ಟು ಉತ್ತರ ಕರ್ನಾಟಕದಲ್ಲಿ ನಿಲ್ಲಲಿ ಎನ್ನೋರು ನಿಖಿಲ್‍ಗೂ ರಾಮನಗರ ಬಿಟ್ಟು ಉತ್ತರ ಕರ್ನಾಟಕದಲ್ಲಿ ನಿಲ್ಲೋಕೆ ಹೇಳಿ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ನಾಯಕರ ಟಿಕೆಟ್ ಫೈಟ್‍ನಿಂದ ಕಾರ್ಯಕರ್ತರ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ತಮ್ಮ ತಮ್ಮ ನಾಯಕರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k