ರಾಯಚೂರು: ಸ್ವತಂತ್ರ ಸರ್ಕಾರವೇ ನನ್ನ ಗುರಿ. ರಾಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಗುರಿ ಇಟ್ಟುಕೊಂಡು ಹೊರಟಿದ್ದೇನೆ. ಅದಕ್ಕೆ ಅನುಗ್ರಹ ಕಲ್ಪಿಸಲು ರಾಯರ ಬಳಿ ಕೇಳಿಕೊಂಡಿದ್ದೇನೆ ಅಂತಾ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದ್ದಾರೆ.
ಮಂತ್ರಾಲಯದಲ್ಲಿ (Mantralaya) ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ರಾಯರ ದರ್ಶನ ಪಡೆದ ಹೆಚ್‌ಡಿಕೆ, ಹಲವಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕಳೆದ ಐದು ದಿನಗಳಿಂದ ರಾಯಚೂರಿನಲ್ಲಿ (Raichuru) ಪಂಚರತ್ನ ಕಾರ್ಯಕ್ರಮ ನಡೆಯುತ್ತಿದೆ. ರಥಯಾತ್ರೆ ಯಶಸ್ಸಿಗಾಗಿಯೇ ಹಲವಾರು ವರ್ಷಗಳ ಬಳಿಕ ರಾಯರೇ ನನ್ನನ್ನ ಕರೆಸಿಕೊಂಡಿದ್ದಾರೆ. ನಾಡಿನ ಜನತೆಯ ಪ್ರತಿ ಕುಟುಂಬಗಳ ಕಷ್ಟಗಳನ್ನ ಬಗೆಹರಿಸುವಂತೆ, ಎಲ್ಲಾ ಕುಟುಂಬಗಳು ನೆಮ್ಮದಿಯನ್ನ ಕಾಣಬೇಕು ಅನ್ನೋದು ನಮ್ಮ ಅಭಿಲಾಷೆ. ಅನುಗ್ರಹಕ್ಕಾಗಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ
Advertisement
Advertisement
ಅನಿತಾ ಕುಮಾರಸ್ವಾಮಿ ಮಾತನಾಡಿ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ ಅಂತ ರಾಯರನ್ನ ಕೇಳಿಕೊಂಡಿದ್ದೇನೆ. ಏನ್ ಮಾಡಬೇಕು ಅನ್ಕೊಂಡಿದಿಯಾ ಅದನ್ನೇ ಮಾಡು ತಂದೆ. ನಾನೇನು ನಿನ್ನ ಕೇಳಲ್ಲ ಅಂತಾ ರಾಯರಲ್ಲಿ ಪ್ರಾರ್ಥಿಸಿದ್ದೇನೆ. ನಾನು ರಾಯರ ಭಕ್ತೆ, ಜೀವನದಲ್ಲಿ ನನಗೆ ಒಳ್ಳೆಯದಾಗಿದ್ದರೇ ಅದು ರಾಯರ ಇಚ್ಛೆ ಎಂದು ತಿಳಿಸಿದ್ದಾರೆ.
Advertisement
Advertisement
ಹಾಸನ ಟಿಕೆಟ್ ವಿಚಾರ ಹಿನ್ನೆಲೆ ಕುಟುಂಬದಲ್ಲಿ ಗೊಂದಲ ಸೃಷ್ಟಿಯಾಗಿರುವ ಹೊತ್ತಲ್ಲಿ ಹೆಚ್.ಡಿ.ಕುಮಾರಸ್ವಾಮಿ ದಂಪತಿ ಸಂಕಷ್ಟ ಪರಿಹಾರಕ್ಕೆ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ. ರಾಯರ ಮೂಲವೃಂದಾವನಕ್ಕೆ ವಿಶೇಷ ಪೂಜೆಯನ್ನ ಸಲ್ಲಿಸಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: RSS ನಾಯಕರ ಜೊತೆ ಅಮಿತ್ ಶಾ ರಹಸ್ಯ ಸಭೆ – ಏನಿದರ ಗುಟ್ಟು..!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k