ಬೆಂಗಳೂರು: ಹಾಸನದಲ್ಲಿ (Hassana) ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ (Congress) ನಾಯಕರೇ ಸಿದ್ಧರಿಲ್ವಾ? ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ (KPCC) ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ (D.K Shivakumar) ನಡೆ ನೋಡಿದರೆ ಪಕ್ಷಕ್ಕೆ ಬರುವವರನ್ನು ಕರೆಯಲು ಇವರೆ ಧೈರ್ಯ ಮಾಡುತ್ತಿಲ್ಲ ಎನ್ನಲಾಗಿದೆ.
Advertisement
ಜೆಡಿಎಸ್ (JDS) ನಾಯಕರು ಸೆಲ್ಫ್ ಡಿಕ್ಲರೇಷನ್ ಮೇಲೆ ಬರಲಿ ನಾವು ಸೇರಿಸಿಕೊಳ್ಳುತ್ತೇವೆ ಎಂಬ ನಿಲುವಿನಲ್ಲಿ ಕೈ ನಾಯಕರಿದ್ದಾರೆ. ಜೆಡಿಎಸ್ ಶಾಸಕರಾದ ಎ.ಟಿ.ರಾಮಸ್ವಾಮಿ ಹಾಗೂ ಶಿವಲಿಂಗೇಗೌಡರ (Shivalinge Gowda) ಕಾಂಗ್ರೆಸ್ ಎಂಟ್ರಿಗೆ ಸಿದ್ದರಾಮಯ್ಯ, ಡಿಕೆಶಿ ನಡೆ ಅಡ್ಡಿಯಾಗಿದೆ ಎನ್ನಲಾಗಿದೆ. ಇಬ್ಬರು ಪಕ್ಷ ಒಡೆದ ಅಪಖ್ಯಾತಿ ಅಂಟದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ. ಇದು ರಾಜಕೀಯ ಮೀರಿದ ಸ್ನೇಹದ ಎಫೆಕ್ಟಾ? ಅಥವಾ ಬೇರೆಯದೆ ರಾಜಕೀಯ ಲೆಕ್ಕಾಚಾರನಾ? ಜೆಡಿಎಸ್ ಕೆಣಕಿ ಕೆಂಗಣ್ಣಿಗೆ ಗುರಿಯಾಗದಂತೆ ಇಬ್ಬರೂ ಆಡುತ್ತಿರುವ ಸೇಫ್ ಗೇಮಾ? ನೀವು ಘೋಷಣೆ ಮಾಡಿ ನಾವು ಕರೆದುಕೊಳ್ಳುತ್ತೇವೆ ಎಂಬ ಸೇಫ್ ಗೇಮಿನ ಲೆಕ್ಕಾಚಾರದ ದಾಳವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಉರುಳಿಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದ ಆಂತರಿಕ ಸಮೀಕ್ಷಾ ವರದಿ ನೋಡಿ ಸಿದ್ದರಾಮಯ್ಯ ಶಾಕ್
Advertisement
Advertisement
ಕೈ ನಾಯಕರ ನಡೆಗೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದ ದಳ ಶಾಸಕರು ಗಲಿಬಿಲಿಯಾಗಿದ್ದಾರೆ. ಹಾಸನದಲ್ಲಿ ಜೆಡಿಎಸ್‍ನ ಇಬ್ಬರು ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅರಕಲಗೂಡು ಎ.ಟಿ.ರಾಮಸ್ವಾಮಿ ಅರಸಿಕೆರೆಯ ಶಿವಲಿಂಗೇಗೌಡರು ಜೆಡಿಎಸ್‍ನಿಂದ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಆದರೆ ಕೈ ನಾಯಕರೇ ಅವರನ್ನು ಕರೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೆಲ ಬಿಜೆಪಿ ಹಾಲಿ ಶಾಸಕರಿಗೆ ಬಿಗ್ ಶಾಕ್- ಆಪರೇಷನ್ ‘U-G’ ಮಾಡೆಲ್ ಜಾರಿ?
Advertisement
ಆದರೆ ನೀವೇ ಪಕ್ಷ ಬಿಡುವ ಘೋಷಣೆ ಮಾಡಿ ನಾವು ಆನಂತರ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ. ಶಾಸಕರ ಸೆಲ್ಫ್ ಡಿಕ್ಲರೇಷನ್ ಅಸ್ತ್ರ ಬಳಸುತ್ತಿರುವ ಕೈ ನಾಯಕರ ನಡೆಯೇ ಜೆಡಿಎಸ್ ಶಾಸಕರಿಗೆ ಆತಂಕ ಉಂಟು ಮಾಡಿದೆ. ಇತ್ತ ಸಿದ್ದರಾಮಯ್ಯ ಹಾಗೂ ಡಿಕೆಶಿಯ ಈ ನಡೆಯಿಂದ ಕೈ ಸೇರಲು ಕಾತುರದಿಂದಿದ್ದ ಜೆಡಿಎಸ್ ಶಾಸಕರ ನೆಮ್ಮದಿ ಕೆಡಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k