ಬೆಂಗಳೂರು: ಕರ್ನಾಟಕ ಚುನಾವಣೆ (Karnataka Election) ಗೆ ಇನ್ನೆರಡೂವರೆ ಮೂರು ತಿಂಗಳಷ್ಟೇ ಬಾಕಿ. ಬಿಜೆಪಿ ಟಿಕೆಟ್ (BJP Ticket) ಲಿಸ್ಟ್ ನಲ್ಲಿ ನಾವ್ ಇರ್ತೀವಿ ಎಂಬ ಲೆಕ್ಕಾಚಾರ ಶುರುವಾಗಿದೆ. ಕೊಕ್ ಕೊಡುವ ಬಗ್ಗೆ ಕುತೂಹಲ ಹೆಚ್ಚಾಗಿದ್ದು, 15 ಹಾಲಿ ಬಿಜೆಪಿ ಶಾಸಕರ ಹಿಟ್ ಲಿಸ್ಟ್. 5 ಬಿಜೆಪಿ ಶಾಸಕರ ಶಾರ್ಟ್ ಲಿಸ್ಟ್ ರೆಡಿಯಾಗಿದ್ದು, ಟಾರ್ಗೆಟ್ ಫಿಕ್ಸ್ ಆಗ್ತಿದೆ ಎನ್ನಲಾಗಿದೆ.
Advertisement
ಅಂದಹಾಗೆ 2023ರ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವ ಹೈಕಮಾಂಡ್ ಲೆಕ್ಕಚಾರ ಖಡಕ್ ಆಗಿರುತ್ತಂತೆ. ಎಷ್ಟೇ ದೊಡ್ಡವರಿದ್ದರೂ ಬ್ಯಾಕ್ ಸೀಟ್ ನಲ್ಲಿ ಕೂರಬೇಕು ಎಂಬ ಸಂದೇಶ ರವಾನೆ ಆಗಿದೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ರೆಡಿ ಆಗಿರುವ 20 ಹಾಲಿ ಶಾಸಕರಿಗೆ ಕೊಕ್ ಕೊಡುವ ಲಿಸ್ಟ್ ಫೆಬ್ರವರಿ ಕಡೇ ವಾರದ ಬಳಿಕ ಅಂತಿಮವಾಗುವ ಸಾಧ್ಯತೆ ಇದ್ದು, ಶಾಸಕರಿಗೆ ಕೊಕ್ ಕೊಡುವ ಸಂಖ್ಯೆ ಹೆಚ್ಚಾದ್ರೂ ಆಗಬಹುದು. ಅಥವಾ ಕಡಿಮೆಯಾದ್ರೂ ಆಗಬಹುದಂತೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ `ನಯಾ ಫೇಸ್’ ಗೇಮ್- BJP ಹೈಕಮಾಂಡ್ ನಡೆ ಏನು?
Advertisement
Advertisement
ಈ ನಡುವೆ ಬಿಜೆಪಿ ಎಲ್ಲ ಸಿಟ್ಟಿಂಗ್ ಎಂಎಲ್‍ಎ (MLA) ಗಳಿಗೆ ಟಿಕೆಟ್ ಕೊಡಬೇಕು ಎಂಬ ರೂಲ್ಸ್ ಇಲ್ಲ ಎಂದು ಬಿಜೆಪಿ ಹೈಕಮಾಂಡ್‍ನಿಂದ ಕರ್ನಾಟಕ ಬಿಜೆಪಿ ಶಾಸಕರಿಗೆ ಪರೋಕ್ಷ ಸಂದೇಶ ರವಾನೆ ಆಗಿದೆ. ವಯಸ್ಸು+ಆರೋಗ್ಯ, ವಿರೋಧಿ ಅಲೆ, ಕ್ಷೇತ್ರದಲ್ಲಿನ ಲೆಕ್ಕಚಾರವೇ ಟಿಕೆಟ್‍ಗೆ ಮಾನದಂಡಗಳಾಗಿವೆ. ಮೂರು ಹಂತಗಳಲ್ಲಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ.
Advertisement
ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಐದಾರು ಹಾಲಿ ಶಾಸಕರಿಗೆ ಕೊಕ್ ಸಾಧ್ಯತೆ ಇದ್ದರೆ, ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವ ಮೂರ್ನಾಲ್ಕು ಹಾಲಿ ಶಾಸಕರಿಗೆ ಕೊಕ್ ಕೊಡಬಹುದು. ಇನ್ನು ಪದೇ ಪದೇ ಗೆದ್ದು ಪಕ್ಷ ಸಂಘಟನೆಗೆ ಉಪಯೋಗ ಇಲ್ಲದ ನಾಲ್ಕೈದು ಹಾಲಿ ಶಾಸಕರಿಗೆ ಕೊಕ್ ಕೊಡಬಹುದು ಎಂಬ ಚರ್ಚೆ ಬಿಜೆಪಿಯೊಳಗೆ ಜೋರಾಗಿ ನಡೆಯುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಏಳು ಬಾರಿ ಪಕ್ಷ ಬದಲಿಸಿದ ದೊಡ್ಡ ಪಕ್ಷಾಂತರಿ: ಪ್ರಮೋದ್ ಮಧ್ವರಾಜ್ ವಾಗ್ದಾಳಿ
ಈಗಾಗಲೇ ಎರಡು ಲಿಸ್ಟ್ ರೆಡಿಯಾಗಿದ್ದು, ಅದರಲ್ಲಿ 15 ಹಾಲಿ ಶಾಸಕರು ಹಿಟ್ ಲಿಸ್ಟ್ ನಲ್ಲಿದ್ದಾರಂತೆ. ಉಳಿದ 5ಕ್ಕೂ ಹೆಚ್ಚು ಶಾಸಕರು ಶಾರ್ಟ್ ಲಿಸ್ಟ್ ನಲ್ಲಿದ್ದಾರೆ. ಫೆಬ್ರವರಿ ಸರ್ವೇ ಬಳಿಕ ಬಿಜೆಪಿ ಹೈಕಮಾಂಡ್ ಎಲ್ಲವನ್ನೂ ಫೈನಲ್ ಮಾಡುತ್ತೆ ಎಂದು ಮೂಲಗಳು ತಿಳಿಸಿವೆ. ಹಾಗಾದ್ರೆ ಬಿಜೆಪಿ ಹೈಕಮಾಂಡ್ (BJP HighCommand) ನ ಹಿಟ್ ಲಿಸ್ಟ್‍ನಲ್ಲಿ ಇರುವ ಆ ಹಿರಿಯರು, ಅನ್‍ಲಕ್ಕಿ ಶಾಸಕರು ಯಾರ್ಯಾರು? ಎಲ್ಲರ ಹಣೆಬರಹವನ್ನ ಮೋದಿ, ಶಾ ಯಾವ ಮಾನದಂಡದಲ್ಲಿ ಯಾರಿಗೆ ಶಾಕ್ ಕೊಡ್ತಾರೋ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k