ಬೆಂಗಳೂರು: ವಿಧಾನಸಭೆಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಜಟಾಪಟಿ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಯಿಂದ ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ ಎಂದು ವಾಗ್ದಾಳಿ ನಡೆಸಿದರು.
Advertisement
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಡತನ ನಿರ್ಮೂಲನೆ ಎಲ್ಲಿ ಆಗಿದೆ? ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಇದು ಎಂದು ಕಿಡಿಕಾರಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಸವರಾಜ ಬೊಮ್ಮಾಯಿ, ಗರೀಬಿ ಹಠಾವೋ ಘೋಷಣೆ ಮಾಡಿ ಎಷ್ಟು ವರ್ಷ ಆಯ್ತು, ಗರೀಬಿ ಹಠಾವೋ ಕಹಾ ಹೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು: ರಾಜುಗೌಡ ಆಕ್ರೋಶ
Advertisement
ವಾಜಪೇಯಿ ಕಂಟ್ರಿ ಶೈನಿಂಗ್ ಅಂದ್ರು, ಎಲ್ಲಿ ಶೈನಿಂಗ್ ಆಯ್ತು? ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದಾಗ ಚತುಷ್ಪಥ ರಸ್ತೆಗಳಲ್ಲಿ ನೀವು ಓಡಾಡ್ತಿಲ್ಲವಾ? ಅದೇ ಶೈನಿಂಗ್ ಎಂದು ಬೊಮ್ಮಾಯಿ ಉತ್ತರಿಸಿದರು. ರಸ್ತೆ ಶೈನಿಂಗ್ ಆಗಿ, ಬಡತನ ಇರೋದು ಶೈನಿಂಗಾ?. ಅಣೆಕಟ್ಟುಗಳನ್ನು ಕಟ್ಟಿದವರು ಯಾರು? ಮೋದಿ ಕಟ್ಟಿದ್ರಾ? ವಾಜಪೇಯಿ ಕಟ್ಟಿದ್ರಾ? ನಮ್ಮ ಕಾಲದಲ್ಲಿ ಆಗಿದ್ದು ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
Advertisement
Advertisement
ಎಲ್ಲವನ್ನೂ ಮಾರಾಟ ಮಾಡಿದವರು ನೀವು ಬಿಜೆಪಿಯವರು, ದೇಶ ಸರ್ವನಾಶ ಮಾಡ್ತಿರೋದು ನೀವು. ಲೂಟಿ ಮಾಡಿದ್ದು ನಿಮ್ಮ ಸಾಧನೆ, ಎಲ್ಲ ಖಾಸಗೀಕರಣ ಮಾಡಿ ಸರ್ವನಾಶ ಮಾಡ್ತಿದ್ದೀರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್
ಸಾಲ ಆಗುವುದಕ್ಕೆ ಕಾಂಗ್ರೆಸ್ ಕಾರಣ. ಎಲ್ಲವೂ ನಿಮ್ಮ ಕಾಲದಲ್ಲಿಯೇ ಆಗ್ತಿರುವುದು ನಾವು ಏನನ್ನೂ ಮಾರಾಟ ಮಾಡಿಲ್ಲ, ಎಲ್ಲ ಮಾಡಿದ್ದು ನೀವು ಎಂದು ಬಸವರಾಜ ಬೊಮ್ಮಾಯಿ ಗುಡುಗಿದರು. ಈ ಸಂದರ್ಭ ಕಳೆದ ಎರಡು ವರ್ಷಗಳಲ್ಲಿ ನಾಲ್ಕೂವರೆ ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಡಬ್ಲೂಎಚ್‍ಓ ಒಪ್ಪಂದ ಮಾಡಿದ್ದು ಯಾರು? ಎಂದು ಸಿದ್ದರಾಮಯ್ಯ, ಬೊಮ್ಮಾಯಿಗೆ ಮತ್ತೆ ಪ್ರಶ್ನೆ ಮಾಡಿದರು.