ಬೆಂಗಳೂರು: ಕರ್ನಾಟಕ, ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಗುಂಪು ಬಿಡುಬಿಟ್ಟಿದ್ದು ಅರಣ್ಯದಂಚಿನ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಡಾನೆಗಳ ಗುಂಪು ಗಡಿಯಲ್ಲಿ ಕಾಣಿಸುತ್ತಿದ್ದಂತೆ ಜನ ನೋಡಲು ಮುಗಿಬಿದ್ದಿದ್ದಾರೆ.
ಬೆಂಗಳೂರು ಹೊರವಲಯ ಅನೇಕಲ್ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಕೆಲಮಂಗಳ ಗ್ರಾಮದಿಂದ ನೆಲಮಂಗಲ ಗ್ರಾಮದ ಅರಣ್ಯದಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳ ಬಿಡುಬಿಟ್ಟಿವೆ ಪ್ರತಿ ವರ್ಷ ಇದೆ ಸಮಯದಲ್ಲಿ ಕಾಡಾನೆಗಳು ತಮಿಳುನಾಡಿನ ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಪ್ರವೇಶ ಮಾಡುತ್ತವೆ ಇದೀಗ ಅನೇಕಲ್ ತಾಲೂಕಿನ ರೈತರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಶಿಕ್ಷಕನ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದ ವಿದ್ಯಾರ್ಥಿಗಳು
ಕಾಡಾನೆಗಳನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದು, ಅವುಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲು ಯುವಕರು ಟವರ್ ಹತ್ತಿ ತಮ್ಮ ಮೊಬೈಲ್ ನಲ್ಲಿ ಕಾಡಾನೆಗಳ ದೃಶ್ಯ ಸೆರೆಹಿಡಿದಿದ್ದಾರೆ. ಜೊತೆಗೆ ಆನೆಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಸೇರಿದ ಜನ ಮನೆಗಳ ಮೇಲೆ ಕಲ್ಲು ಎಸೆದು ಗಲಾಟೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ನಶೆಯಲ್ಲಿ ಪ್ರಿಯಕರನ ದೇಹ ತುಂಡರಿಸಿದಳು- ಛಿದ್ರವಾದ ದೇಹದ ಜೊತೆಗೆ ನಿದ್ರೆಗೆ ಜಾರಿದಳು