ಗೂಗಲ್ ಗರ್ಲ್ ಸನ್ನಿ ಜೀವನ ಚರಿತ್ರೆಯ ಟೀಸರ್ ರಿಲೀಸ್!

Public TV
1 Min Read
Sunny N

ಮುಂಬೈ: ಗೂಗಲ್ ಗರ್ಲ್, ಪಡ್ಡೆ ಹುಡುಗರ ರಾಣಿ ಸನ್ನಿ ಲಿಯೋನ್ ಜೀವನಾಧರಿತ ವೆಬ್ ಸಿರೀಸ್ ಕರೆನ್ಜಿತ್ ಕೌರ್ ಟೀಸರ್ ಬಿಡುಗಡೆ ಆಗಿದೆ.

ವೆಬ್ ಸಿರೀಸ್ ಟೀಸರ್‍ನ್ನು ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ತಾನೇಕೆ ಪೋರ್ನ್ ಸ್ಟಾರ್ ಆದೆ ಎಂಬುವುದನ್ನು ಆತ್ಮಕಥೆಯಲ್ಲಿ ಹೇಳುತ್ತೇನೆ. ಹಲವು ರಹಸ್ಯ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದು ಸನ್ನಿ ಲಿಯೋನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸನ್ನಿಯ ಜೀವನ ಕಥೆಯ ಕುರಿತು ಬಾಲಿವುಡ್‍ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದನ್ನೂ ಓದಿ: ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್

sunny new

ಇಂದು ಟೀಸರ್ ಬಿಡುಗಡೆಗೊಂಡಿದ್ದು, 40 ಸೆಕೆಂಡ್ ಅವಧಿಯ ಈ ವಿಡಿಯೋ ಬಯೋಪಿಕ್ ಸುಳಿವು ನೀಡುತ್ತಿದೆ. ಟೀಸರ್‍ನಲ್ಲಿ ಮೊದಲಿಗೆ ಸನ್ನಿಯ ಬಾಲ್ಯದ ಫೋಟೋ ಬರುತ್ತದೆ. ನಂತರ ಜೀವನದ ಒಂದೊಂದೆ ಮಜಲುಗಳು ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳ ತುಣುಕುಗಳನ್ನು ನೋಡಬಹುದು. ಕರೆನ್ಜಿತ್ ಕೌರ್ ನಿಂದ ಸನ್ನಿಯಾಗಿ ಬದಲಾದ ನನ್ನ ಜೀವನ ಇದೇ ಜುಲೈ 16ರಿಂದ ಎಲ್ಲರ ಮುಂದೆ ಬರಲಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಪತಿಯ ಫೋಟೋ ಶೇರ್ ಮಾಡಿಕೊಂಡ ಸನ್ನಿ

ವೆಬ್ ಸಿರೀಸ್‍ನಲ್ಲಿ ತಮ್ಮ ಪಾತ್ರವನ್ನು ಸನ್ನಿ ಲಿಯೋನ್ ನಿರ್ವಹಿಸುತ್ತಿದ್ದಾರೆ. ಸನ್ನಿ ಜೀವನದ ಪ್ರಮುಖ ವ್ಯಕ್ತಿ ಪತಿ ಡೇನಿಯಲ್ ವೆಬರ್ ಪಾತ್ರವನ್ನು ದಕ್ಷಿಣ ಆಫ್ರಿಕಾದ ನಟ ಮಾರ್ಕ್ ಬಕನರ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಸನ್ನಿ ಖಾಸಗಿ ಚಾನೆಲ್‍ನ ರಿಯಾಲಿಟಿ ಶೋನ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ‘ವೀರ ಮಹಾದೇವಿ’ ಎಂಬ ಐತಿಹಾಸಿಕ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *