‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್: ಬಂದ ಪುಟ್ಟ, ಹೋದ ಪುಟ್ಟ ಕಥೆ

Public TV
1 Min Read
kareena kapoor

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಯಶ್ ಈ ಸಿನಿಮಾದ ನಾಯಕ, ಗೀತಾ ಮೋಹನ್ ದಾಸ್ ನಿರ್ದೇಶಕಿ, ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ನಿರ್ಮಾಪಕರು ಎನ್ನುವ ವಿಷಯದ ಹೊರತಾಗಿ  ಮತ್ತೊಂದು ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿರಲಿಲ್ಲ. ಆದರೂ, ಹಲವು ವಿಷಯಗಳು ಹರಿದಾಡುತ್ತಲೇ ಇದ್ದವು.

ಬಾಲಿವುಡ್ ನ ಬಹುಬೇಡಿಕೆ ನಟಿ ಈ ಸಿನಿಮಾದ ನಾಯಕಿಯಾಗಲಿದ್ದಾರೆ ಎನ್ನುವುದರ ಜೊತೆಗೆ ಕರೀನಾ ಕಪೂರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಂಡಿತ್ತು. ಇದ್ಯಾವುದೋ ಅಧಿಕೃತ ಮಾಹಿತಿ ಆಗಿರಲಿಲ್ಲ. ಆದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಗಿತ್ತು. ಈಗ ಕರೀನಾ ಸಿನಿಮಾದಲ್ಲಿ ಇರಲ್ಲ ಎನ್ನುವ ಮತ್ತೊಂದು ಸುದ್ದಿ ಇದೆ.

Toxic 2

ಯಶ್ ಅವರ ಸಹೋದರಿಯಾಗಿ ಈ ಸಿನಿಮಾದಲ್ಲಿ ಕರೀನಾ ನಟಿಸಬೇಕಿತ್ತು. ಆದರೆ, ಡೇಟ್ ಹೊಂದಾಣಿಕೆಯ ಕಾರಣದಿಂದಾಗಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಡಹುಟ್ಟಿದವರ ಕಥೆಯನ್ನು ಇದು ಒಳಗೊಂಡಿದ್ದರಿಂದ ಯಶ್ ಅವರ ಸರಿಸಮಾನಾಗಿ ಡೇಟ್ ಬೇಕಿತ್ತಂತೆ. ಆದರೆ, ಅಷ್ಟೊಂದು ಸಮಯ ಕರೀನಾ ಬಳಿ ಇಲ್ಲವಂತೆ.

 

ಹಾಗಂತ ಈ ವಿಷಯವಾದರೂ ನಿಜವಾ? ಗೊತ್ತಿಲ್ಲ. ಹಾಗಂತ ಬಾಲಿವುಡ್ ಚಿತ್ರರಂಗ ಹೇಳುತ್ತಿದೆ. ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ, ಚಿತ್ರತಂಡ ಹೇಳುವ ತನಕ ಎಲ್ಲವೂ ಹೋದ ಪುಟ್ಟ, ಬಂದ ಪುಟ್ಟ ಕಥೆಗಳಾಗಿಯೇ ಉಳಿಯುತ್ತವೆ.

Share This Article