– ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ಕರವೇ ಪ್ರತಿಭಟನೆ
ಬೆಂಗಳೂರು: ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡಬಾರದು ಅಂತ ಮೇಯರ್ ಗೌತಮ್ ಕುಮಾರ್ ಆದೇಶ ಹೊರಡಿಸಿದ್ರು. ಕೌನ್ಸಿಲ್ ನಲ್ಲಿ ಚರ್ಚೆ ಮಾಡಿ ಇದರ ಬಗ್ಗೆ ನಿರ್ಣಯ ಕೂಡ ಆಗಿತ್ತು. ಈಗ ಮೇಯರ್ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆದಿದ್ದು, ಮೇಯರ್ ಆದೇಶವನ್ನು ವಾಪಸ್ ಪಡೆದು ಪ್ರತಿಭಟನೆ ಅವಕಾಶ ಕೊಡಬೇಕು ಅಂತಾ ಒತ್ತಾಯಿಸಿದ್ರು.
Advertisement
ಈ ಬಗ್ಗೆ ನಾರಾಯಣಗೌಡ ಮಾತನಾಡಿ, ಟೌನ್ ಹಾಲ್ ಬಳಿ ಪ್ರತಿಭಟನೆ ಉದ್ದೇಶವೇ ಸಾರ್ವಜನಿಕರಿಗೆ ಗೊತ್ತಾಗಲಿ ಅಂತ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದ್ರೆ ಆಗಿಲ್ಲ. ಟೌನ್ ಹಾಲ್‍ಗೂ ಪ್ರತಿಭಟನೆಗೂ ಒಂದು ಇತಿಹಾಸ ಇದೆ. ಸಾಹಿತಿ, ಪ್ರಗತಿಪರ ಚಿಂತಕರೆಲ್ಲ ಅಲ್ಲಿ ಹೋರಾಟ ಮಾಡಿದ್ದಾರೆ. ಪ್ರತಿಭಟನೆಯಿಂದ ಯಾರಿಗೂ ತೊಂದ್ರೆ ಆಗಲ್ಲ. ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ಮಾಡಿದ ಉದಾಹರಣೆಗಳಿಲ್ಲ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ಇದ್ದಾಗ ಅದಕ್ಕೆ ಅವಕಾಶ ಕೊಡ್ಬೇಡಿ. ಆದರೆ ಕಾರ್ಯಕ್ರಮ ಇಲ್ಲದಿದ್ದಾಗ ಪ್ರತಿಭಟನೆಗೆ ಅವಕಾಶ ಕೊಡಿ ಕಾರ್ಯಕ್ರಮಗಳ ನಡೆಯುವ ವೇಳೆ ನಾವು ಅದಕ್ಕೆ ಅಡ್ಡಿಪಡಿಸೊಲ್ಲ ಈ ಸಂಬಂಧ ತಕ್ಷಣವೇ ಆದೇಶವನ್ನ ಹಿಂಪಡೆಯಬೇಕು. ಕೌನ್ಸಿಲ್ ನಲ್ಲಿ ಏನೇ ತೀರ್ಮಾನ ಆಗಿದ್ರೂ ಅದನ್ನ ವಾಪಸ್ ಪಡೆಯಬೇಕು. ಆದೇಶ ವಾಪಸ್ ಪಡೆಯದಿದ್ರೆ ನಮ್ಮ ಹೋರಾಟ ಮುಂದುವರಿಯುತ್ತೆ ಅಂತ ಎಚ್ಚರಿಸಿದ್ರು.
Advertisement
Advertisement
ಮೇಯರ್ ಗೌತಮ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ್ರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ಕೌನ್ಸಿಲ್ ನಲ್ಲಿ ನಿರ್ಣಯ ಆಗಿದೆ, ಬಿಬಿಎಂಪಿ ಆಯುಕ್ತರ ಹತ್ತಿರ ಚರ್ಚೆ ಮಾಡಬೇಕು. ಪೊಲೀಸ್ ಆಯುಕ್ತರ ಹತ್ತಿರನೂ ಚರ್ಚೆ ಮಾಡಿದ ಬಳಿಕ ನಿರ್ಣಯ ಹೇಳುತ್ತೇನೆ. ಈ ಆದೇಶ ಏನು ಸರ್ಕಾರಕ್ಕೆ ಹೋಗಿಲ್ಲ ಹೋಗೋದಿಲ್ಲ. ಸಂಘ ಸಂಸ್ಥೆಗಳು ಅವರ ಭಾವನೆ ತಿಳಿಸಿದ್ದಾರೆ. ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು. ನಾನು ಈ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳೋದಕ್ಕೆ ಆಗಲ್ಲ. ಚರ್ಚೆ ಮಾಡಿ ನಂತರ ನಿರ್ಧಾರ ಏನು ಅಂತ ಹೇಳುವುದಾಗಿ ತಿಳಿಸಿದರು.