ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಕಿಕ್ ಕೊಡೋದಕ್ಕೆ `ಸನ್ನಿ ನೈಟ್ಸ್’ ಕಾರ್ಯಕ್ರಮ ಆಯೋಜನೆಯಾಗಿದೆ. ಆದ್ರೆ ಇದಕ್ಕೆ ಕರವೇ ಯುವ ಸೇನೆ ವಿರೋಧ ವ್ಯಕ್ತಪಡಿಸಿದ್ದು, ಸನ್ನಿಗೆ ಕರ್ನಾಟಕಕ್ಕೆ ನೋ ಎಂಟ್ರಿ ಬೋರ್ಡ್ ಹಾಕಲು ಸಜ್ಜಾಗಿದೆ.
ಟೈಮ್ಸ್ ಕ್ರಿಯೇಷನ್‍ನಿಂದ `ಸನ್ನಿ ನೈಟ್ಸ್’ ಹೊಸ ವರ್ಷದ ಕಿಕ್ ಕಾರ್ಯಕ್ರಮಕ್ಕೆ ಕರವೇ ಕ್ಯಾತೆ ತೆಗೆದಿದೆ. `ಸನ್ನಿ ನೈಟ್ಸ್’ ನಮ್ಮ ಸಂಸ್ಕೃತಿ ಅಲ್ಲ. ಬೆತ್ತಲೆ ನಟಿ ಇಲ್ಲಿ ಬಂದು ಸೊಂಟ ಕುಣಿಸಿ, ಡ್ಯಾನ್ಸ್ ಮಾಡಿ ನಮ್ಮ ಯುವಜನರನ್ನು ಹಾಳು ಮಾಡೋದು ಬೇಡ ಅಂತಾ ಕರವೇ ಯುವ ಸೇನೆ ಸನ್ನಿ ಎಂಟ್ರಿಗೆ ವಿರೋಧಿಸಿ ಗುರುವಾರದಂದು ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದ್ರು. ಸನ್ನಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ರು.
ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಅಂತಾ ಕರವೇ ಯುವ ಸೇನೆ ಸವಾಲು ಹಾಕಿದೆ. ಇದರ ಜೊತೆಗೆ ಕಾರ್ಯಕ್ರಮದ ಆಯೋಜಕರಿಗೆ ಹಾಗೂ ಕಮೀಷನರ್‍ಗೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡುವಂತೆ ಮನವಿ ಕೊಡೋದಾಗಿ ಹೇಳಿದ್ದಾರೆ. ಸನ್ನಿ ಕಾರ್ಯಕ್ರಮ ನಡೆಸಿದ್ರೆ ಕಪ್ಪು ಬಾವುಟ ಹಾರಿಸೋದಾಗಿ ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಪ್ರೇಮ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕರವೇ ವಿರೋಧದಿಂದ ಕಾರ್ಯಕ್ರಮ ರದ್ದಾಗಲಿದೆಯಾ ಗೊತ್ತಿಲ್ಲ. ಆದ್ರೆ ಸನ್ನಿಯನ್ನ ನೋಡೋಕೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದ ಜನ್ರಿಗೆ ಕೊಂಚ ಡವಡವ ಶುರುವಾಗಿದೆ.
https://www.youtube.com/watch?v=naANm0aEdZs