ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಇನ್ನಷ್ಟು ಬಿರುಸುಗೊಂಡಿದ್ದು ಇವತ್ತೂ ಕೂಡ ಮಳೆರಾಯನ ಆರ್ಭಟ ಮುಂದುವರೆದಿದೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಕ್ಕೆ ವಾಡಿಕೆಯಂತೆ ಆರು ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 12 ಮಿಲಿ ಮೀಟರ್ ಮಳೆಯಾಗಿದ್ದು ಶೇ117 ರಷ್ಟು ಹೆಚ್ಚು ಮಳೆಯಾಗಿದೆ.
Advertisement
ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.
Advertisement
ಇಂದು ಕೂಡಗಿನಲ್ಲಿ 136 ಮಿ.ಮೀ, ಚಿಕ್ಕಮಗಳೂರಿನಲ್ಲಿ 65 ಮೀ.ಮೀ ದಕ್ಷಿಣ ಕನ್ನಡದಲ್ಲಿ 100 ಮೀ.ಮೀ. ಶಿವಮೊಗ್ಗದಲ್ಲಿ 208 ಮಿ.ಮೀ ಹಾಸನ 38 ಮಿ.ಮೀ, ಉತ್ತರಕನ್ನಡ 50 ಮಿ.ಮೀ, ಮೈಸೂರು 17 ಮಿಮೀ ನಷ್ಟು ಮಳೆಯಾಗಿದೆ.
Advertisement
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನಲೆ ಕೆಆರ್‍ಎಸ್ ನ ಒಳ ಹರಿವು ಹೆಚ್ಚಳ ಕಂಡಿದ್ದು 17,883 ಕ್ಯೂಸೆಕ್ ನಷ್ಟಿದೆ ಹಾಗೂ ಹೊರ ಹರಿವು 342 ಕ್ಯೂಸೆಕ್ ನಷ್ಟಿದೆ. ಒಂದೇ ದಿನದಲ್ಲಿ ಮೂರು ಅಡಿ ನೀರು ಹೆಚ್ಚಳವಾಗಿದೆ. 124.80 ಅಡಿ ಗರಿಷ್ಟ ಮಟ್ಟವನ್ನು ಹೊಂದಿರುವ ಕೆಆರ್‍ಎಸ್ ನಲ್ಲಿ ಸೋಮವಾರ 79.50 ಅಡಿ ನೀರಿದ್ದರೆ ಮಂಗಳವಾರ 82.80 ಅಡಿಗೆ ಏರಿಕೆಯಾಗಿದೆ.