ನವದೆಹಲಿ: ಪಾಕಿಸ್ತಾನ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್ ಅವರ ಆಹ್ವಾನವನ್ನು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ತಿರಸ್ಕರಿಸಿದ್ದಾರೆ.
ಆಗಸ್ಟ್ 18 ರಂದು ನಡೆಯಲಿರುವ ಪಾಕಿಸ್ತಾನ ನೂತ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕರ ಸಮಾರಂಭಕ್ಕೆ ಕಪಿಲ್ ದೇವ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸದ್ಯ ಈ ಆಹ್ವಾನವನ್ನು ಕಪಿಲ್ ದೇವ್ ತಿರಸ್ಕರಿಸಿದ್ದಾರೆ.
Advertisement
Advertisement
ಕಪಿಲ್ ದೇವ್ ತಮ್ಮ ವೈಯಕ್ತಿಕ ಕಾರಣಗಳಿಂದ ಸಮಾರಂಭದಲ್ಲಿ ಭಾಗಹಿಸುತ್ತಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಕುರಿತು ಇಮ್ರಾನ್ ಖಾನ್ ಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನ ಚುನಾವಣೆಯಲ್ಲಿ ಬಹುಮತ ಪಡೆದ ವೇಳೆ ಕಪಿಲ್ ದೇವ್, ಇಮ್ರಾನ್ ಅವರ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದರು.
Advertisement
ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕರಾಗಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ ಇಮ್ರಾನ್ ಖಾನ್ ತಮ್ಮದೇ ಸ್ವತಃ ಪಕ್ಷ ಸ್ಥಾಪಿಸಿ ಸಕ್ರೀಯ ರಾಜಕಾರಣಿದಲ್ಲಿ ತೊಡಗಿದ್ದಾರೆ. ಅಲ್ಲದೇ ಈ ಬಾರಿಯ ಪಾಕ್ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
Advertisement
ಅಂದಹಾಗೇ ಈ ಸಮಾರಂಭಕ್ಕೆ ಆಹ್ವಾನ ಪಡೆದಿದ್ದ ನವಜೋತ್ ಸಿಂಗ್ ಸಿಧು ಕಾರ್ಯಕ್ರಮ ಆಹ್ವಾನವನ್ನು ಒಪ್ಪಿಕೊಂಡಿದ್ದರು. ಅಲ್ಲದೇ ಪಾಕಿಸ್ತಾನಕ್ಕೆ ತೆರಳಲು ಗೃಹ ಇಲಾಖೆ ಹಾಗೂ ಪಂಜಾಬ್ ಸರ್ಕಾರ ಅನುಮತಿ ಕೋರಿದ್ದರು. ಆದರೆ ಸಿಧು ಆಹ್ವಾನವನನ್ನು ಒಪ್ಪಿಕೊಂಡ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಸಿಧು ಭಾಗವಹಿಸಿದರೆ ಅವರನ್ನು ದೇಶದ್ರೋಹಿಯಾಗಿ ಪರಿಗಣಿಸಲಾಗುತ್ತದೆ ಎಂದು ಕಿಡಿಕಾರಿದ್ದರು. ಇದನ್ನುಓದಿ: ಸಿಧು ಪಾಕಿಸ್ತಾನಕ್ಕೆ ತೆರಳಿದ್ರೆ ದೇಶದ್ರೋಹಿ ಎಂದು ಪರಿಗಣಿಸಲಾಗುತ್ತೆ: ಸುಬ್ರಮಣಿಯನ್ ಸ್ವಾಮಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv