ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಪುತ್ರಿ ಐಶ್ವರ್ಯ (Aishwarya) ನಿರ್ದೇಶನದ ‘ಲಾಲ್ ಸಲಾಮ್’ ಸಿನಿಮಾದಲ್ಲಿ ನಟಿಸುವ ಮೂಲಕ ಸಾಥ್ ನೀಡಿದ್ದಾರೆ. ಕ್ರಿಕೆಟ್ ಲೋಕದ ದಂತಕಥೆ ಕಪಿಲ್ ದೇವ್ ಅವರು ತಲೈವಾ ಜೊತೆ ಕೈಜೋಡಿಸಿದ್ದಾರೆ.
7 ವರ್ಷಗಳ ನಂತರ ನಿರ್ದೇಶನಕ್ಕೆ ಕಮ್ ಬ್ಯಾಕ್ ಆಗಿರುವ ಐಶ್ವರ್ಯ ಅವರು ‘ಲಾಲ್ ಸಲಾಮ್’ (Lal Salaam) ಎಂಬ ವಿಭಿನ್ನ ಸಿನಿಮಾ ಮಾಡ್ತಿದ್ದಾರೆ. ಮಗಳ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ತಲೈವಾ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ತಲೈವಾ ಲುಕ್ ರಿವೀಲ್ ಮಾಡಲಾಗಿತ್ತು. ತಲೈವಾ ಲುಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ
View this post on Instagram
‘ಲಾಲ್ ಸಲಾಮ್’ ಚಿತ್ರದಲ್ಲಿ ಕಪಿಲ್ ದೇವ್ ನಟಿಸಿರುವ ಬಗ್ಗೆ ರಜನಿಕಾಂತ್ (Rajanikanth) ಸುಳಿವು ಬಿಟ್ಟು ಕೊಟ್ಟಿದ್ದಾರೆ. ಈ ಬಗ್ಗೆ ರಜನಿಕಾಂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಕಪಿಲ್ ದೇವ್ (Kapil Dev) ಜೊತೆ ಕೆಲಸ ಮಾಡಿರೋದು ಖುಷಿ ಕೊಟ್ಟಿದೆ ಎಂದು ತಲೈವಾ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
It is my honour and privilege working with the Legendary, most respected and wonderful human being Kapildevji., who made India proud winning for the first time ever..Cricket World Cup!!!#lalsalaam#therealkapildev pic.twitter.com/OUvUtQXjoQ
— Rajinikanth (@rajinikanth) May 18, 2023
ಚಿತ್ರದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಲೀಡ್ ರೋಲ್‌ನಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ.