ನವದೆಹಲಿ: ಟೀಂ ಇಂಡಿಯಾ (Team India) ಆಟಗಾರಿಗೆ ಹಣ ಬಲದಿಂದ ಮಂಕು ಕವಿದಿದೆ. ಇದರಿಂದಾಗಿ ಅತಿಯಾದ ಆತ್ಮವಿಶ್ವಾಸ ಅವರಲ್ಲಿ ಮನೆ ಮಾಡಿದೆ. ಇದೇ ಕಾರಣಕ್ಕೆ ಕ್ರಿಕೆಟ್ ದಿಗ್ಗಜರ ಸಲಹೆಯನ್ನು ಪಡೆಯಲು ಅವರು ಮುಂದೆ ಬರುತ್ತಿಲ್ಲ ಎಂದು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಆಕ್ರೋಶ ಹೊರ ಹಾಕಿದ್ದಾರೆ.
ಗವಾಸ್ಕರ್ ಅವರು ಟೀಂ ಇಂಡಿಯಾ ಆಟಗಾರರಿಗೆ ಸಹಕರಿಸಲು ಸಿದ್ಧರಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್‍ರಂತಹ ಆಟಗಾರರೇ ಗವಾಸ್ಕರ್ ಅವರ ಸಲಹೆಗಳನ್ನು ಪಡೆಯುತ್ತಾರೆ. ಆದರೆ ಈಗಿನ ಯುವ ಆಟಗಾರರು ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಲು ಮುಂದೆ ಬರುತ್ತಿಲ್ಲ ಎಂಬುದು ಬೇಸರದ ವಿಚಾರವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ದೊಡ್ಡ ಪ್ರತಿಫಲಕ್ಕೆ ಕಾಯುತ್ತೇನೆ – ಟೀಂ ಇಂಡಿಯಾ ಅಭಿಮಾನಿಗಳಿಗೆ ದ್ರಾವಿಡ್ ಪ್ರತಿಕ್ರಿಯೆ
ಈಗಿನ ಯುವ ಆಟಗಾರರಲ್ಲಿ ನಾವು ಎಲ್ಲಾ ವಿಚಾರವನ್ನು ತಿಳಿದಿದ್ದೇವೆ ಎಂಬ ಆತ್ಮವಿಶ್ವಾಸದಲ್ಲಿ ಇರುವುದೇ ಇದಕ್ಕೆ ಕಾರಣವಾಗಿದೆ. ಕ್ರಿಕೆಟ್‍ನ 50 ಸೀಸನ್‍ಗಳಿಗೆ ಸಾಕ್ಷಿಯಾಗಿರುವ ವ್ಯಕ್ತಿಯಿಂದ ಸಲಹೆಯನ್ನು ಪಡೆಯುವುದು ಉತ್ತಮ ಬೆಳವಣಿಗೆಗೆ ಕಾರಣವಾಗಬಹುದು. ಇದರಿಂದ ಆಟಗಾರರ ದೃಷ್ಟಿಕೋನಗಳನ್ನು ಬದಲಾಯಿಸಲು ಅನುಕೂಲವಾಗಲಿದೆ ಎಂದಿದ್ದಾರೆ.
ಕಪಿಲ್ ದೇವ್ 1999 ರಿಂದ 2000 ರವರೆಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 48 ರನ್ ಚಚ್ಚಿದ ಆಫ್ಘನ್ ಬ್ಯಾಟರ್ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್
Web Stories