ಬೆಂಗಳೂರು: ಚಿತ್ರ ಸಾಹಿತಿ, ಪತ್ರಕರ್ತ, ರಾಜಕಾರಣಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕ್ರಿಕೆಟ್ ಅಭಿಮಾನಿಯಾಗಿದ್ದರು. ಇನ್ನು ವಿಶೇಷ ಏನೆಂದರೆ ಭಾರತ ತಂಡದ ಮಹತ್ವದ ಪಂದ್ಯ ಇದ್ದಾಗ ಸಭೆಗಳನ್ನು ರದ್ದು ಮಾಡಿ ಕ್ರಿಕೆಟ್ ವೀಕ್ಷಿಸುತ್ತಿದ್ದರು.
2011 ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ಮುಖ್ಯಮಂತ್ರಿಯಾಗಿದ್ದ ಅವರು 3 ಲಕ್ಷ ರೂ. ನಗದು ಬಹುಮಾನವನ್ನು ಪ್ರಕಟಿಸಿದ್ದರು. ಈ ವೇಳೆ ತಂಡದಲ್ಲಿದ್ದ ಏಕೈಕ ತಮಿಳಿಗ ಆರ್ ಅಶ್ವಿನ್ ಅವರಿಗೆ 1 ಕೋಟಿ ರೂ. ಬಹುಮಾನವನ್ನು ನೀಡಿದ್ದರು.
2013ರಲ್ಲಿ ಕರುಣಾನಿಧಿ ಕಪಿಲ್ ದೇವ್ ಮತ್ತು ಧೋನಿ ನನ್ನ ಫೇವರೇಟ್ ಕ್ರಿಕೆಟ್ ಆಟಗಾರರು ಎಂದು ಟ್ವೀಟ್ ಮಾಡಿದ್ದರು. ಸಚಿನ್ ತೆಂಡೂಲ್ಕರ್ ಅವರ `ಫ್ಲೈಯಿಂಗ್ ಇಟ್ ಮೈ ವೇ’ ಆತ್ಮಚರಿತ್ರೆಯನ್ನು ಕರುಣಾನಿಧಿ ಓದಿದ್ದರು.
ಕೆಲವು ಸಂದರ್ಭದಲ್ಲಿ ಸ್ಟೇಡಿಯಂ ಹೋಗಿ ಕ್ರಿಕೆಟ್ ವೀಕ್ಷಿಸುತ್ತಿದ್ದ ಕರುಣಾನಿಧಿ ಬಿಡುವಿನ ಸಮಯದಲ್ಲಿ ಮೊಮ್ಮಕ್ಕಳ ಜೊತೆ ಕ್ರಿಕೆಟ್ ಆಡುತ್ತಿದ್ದರು. ಈಗ ಮೊಮ್ಮಕಳ ಜೊತೆ ಕ್ರಿಕೆಟ್ ಆಡುತ್ತಿದ್ದ ವಿಡಿಯೋ ವೈರಲ್ ಆಗಿದೆ.