ರಿಷಬ್ ಶೆಟ್ಟಿ (Rishab Shetty) ಅಭಿನಯದ `ಕಾಂತಾರ’ (Kantara Film) ಈ ಶುಕ್ರವಾರಕ್ಕೆ 50 ದಿನಗಳನ್ನ ಪೂರೈಸಲಿದೆ. ನವರಾತ್ರಿ ಸಮಯದಲ್ಲಿ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ 50ನೇ ದಿನಕ್ಕೆ ಕಾಲಿಡುತ್ತಿರುವ ಸಮಯದಲ್ಲೇ ಈ ಚಿತ್ರ ಥಿಯೇಟರ್‌ನಿಂದ ಎತ್ತಂಗಡಿ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ.
Advertisement
ಹೌದು. ಪ್ರಜ್ವಲ್ ದೇವರಾಜ್ (Prajwal Devraj) ನಟನೆಯ `ಅಬ್ಬರ’ ಚಿತ್ರ ಈ ಶುಕ್ರವಾರ(ನ.28) ತೆರೆಗೆ ಬರಲಿದೆ. ʻಕಾಂತಾರʼ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್ ಆಗಲಿರುವುದರಿಂದ ಕಾಂತಾರದ ಕಲೆಕ್ಷನ್ ಓಟಕ್ಕೆ ಬ್ರೇಕ್ ಬೀಳಲಿದೆ. ಇದನ್ನೂ ಓದಿ:ಉರ್ಫಿ ಜಾವೇದ್ ಮೇಲೆ ದೂರುಗಳ ಸುರಿಮಳೆ : ಗೌರಮ್ಮ ಆಗಿ ಬದಲಾದ ನಟಿ
Advertisement
Advertisement
ಈ ಹಿಂದೆ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ ಮುಖ್ಯ(Santhosh Theatre) ಚಿತ್ರಮಂದಿರದಲ್ಲಿ ಕೊರೊನಾ ನಂತರ ರಿಲೀಸ್ ಆದ ಯಾವ ಚಿತ್ರವು 25 ದಿನಗಳನ್ನ ಪೂರೈಸಿರಲಿಲ್ಲ. ಈಗ ಕಾಂತಾರ 50 ದಿನ ಪೂರೈಸುವತ್ತ ಹೆಜ್ಜೆ ಇಟ್ಟಿತ್ತು. ಆದರೆ ಪ್ರಜ್ವಲ್ ದೇವರಾಜ್ ನಟನೆಯ ʻಅಬ್ಬರʼ ಚಿತ್ರ ಬರುತ್ತಿರುವ ಕಾರಣ, ಕಾಂತಾರ ಓಟಕ್ಕೆ ಬ್ರೇಕ್ ಬಿದ್ದಿದೆ. ಕಾಂತಾರದ ಮಹತ್ತರ ದಾಖಲೆಗೆ ಅಡ್ಡಿಯಾಗಿದೆ.
Advertisement
ಈಗಾಗಲೇ ಅಬ್ಬರ ಚಿತ್ರಕ್ಕೆ ಮುಂಚಿತವಾಗಿ ಮುಂಗಡ ಬುಕ್ಕಿಂಗ್ ಕೂಡ ತೆರೆಯಲಾಗಿದೆ. ಸಂತೋಷ ಚಿತ್ರಮಂದಿರವನ್ನ ಮುಖ್ಯ ಚಿತ್ರಮಂದಿರ ಎಂದು ಘೋಷಿಸಿರುವ ಕಾರಣ ಹೊಸ ಸಿನಿಮಾ ಪ್ರದರ್ಶನವಾಗುತ್ತಿದೆ.
ಹದಿನಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಾಂತಾರ 380 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ನಿರ್ಮಾಪಕರ ಜೇಬು ತುಂಬಿಸಿದೆ. ಆದರೆ ಈ ವಾರ ʼಅಬ್ಬರʼದ ಜೊತೆ ಹಲವು ಚಿತ್ರಗಳು ಬಿಡುಗಡೆಯಾಗಲಿರುವುದರಿಂದ ಕಾಂತಾರ ಕಲೆಕ್ಷನ್ ಕಡಿಮೆಯಾಗುವ ಸಾಧ್ಯತೆಯಿದೆ.
ದೈವದ ಕಥೆಗೆ ಪರಭಾಷಾ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಕಾಂತಾರ ವರ್ಲ್ಡ್ ವೈಡ್ 400 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಮುನ್ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಒಂದು, ಎರಡು ವಾರಗಳ ಕಾಲ ಥಿಯೇಟರ್‌ನಲ್ಲಿ ಓಡುವುದು ಅಪರೂಪ. ಪ್ರತಿ ವಾರ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದರೂ ಕಾಂತಾರ ಕನ್ನಡ ಅಲ್ಲದೇ ಬೇರೆ ಭಾಷೆಗಳಲ್ಲಿ ಭಾರತ ಅಲ್ಲದೇ ವಿದೇಶದಲ್ಲೂ ಕಮಾಲ್ ಮಾಡುತ್ತಿದೆ.