ಕನ್ನಡದ ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಮತ್ತು ಒಂದು ಗುಂಪಿನ ನಡುವೆ ಕಿರಕ್ ಆಗಿದ್ದು, ಈ ಗಲಾಟೆ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ವೀಕ್ಷಣೆಗೆಂದು ಬೆಂಗಳೂರಿನ ಊರ್ವಶಿ (Urvashi) ಚಿತ್ರಮಂದಿರಕ್ಕೆ ತನ್ನ ಫ್ರೆಂಡ್ಸ್ ಜೊತೆ ವಾಸುಕಿ ಹೋಗಿದ್ದರು. ಈ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಜಗಳ ತಾರಕ್ಕೇರಿ ಪೊಲೀಸ್ ಠಾಣೆ ಮೆಟ್ಟಿಲು ಏರುವಂತೆ ಮಾಡಿದೆ.
Advertisement
ಅಕ್ಟೋಬರ್ 3 ರಂದು ಸಂಜೆ ಗಾಯಕ ವಾಸುಕಿ ವೈಭವ್, ಸ್ನೇಹಿತ ದರ್ಶನ್ ಗೌಡ (Darshan) ಮತ್ತು ವಾಸುಕಿ ಸ್ನೇಹಿತೆ ಹೀಗೆ ಮೂವರು ಕಾಂತಾರ ಸಿನಿಮಾ ವೀಕ್ಷಿಸಲು ಊರ್ವಶಿ ಥಿಯೇಟರ್ ಗೆ ಹೋಗಿದ್ದಾರೆ. ಅದೇ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬಂದಿದ್ದ ನಾಲ್ಕೈದು ಜನರ ಗುಂಪುವೊಂದು ವಾಸುಕಿ ಕುಳಿತಿದ್ದ ಸೀಟ್ ಮುಂದೆ ಹೋಗುವಾಗ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ
Advertisement
Advertisement
ಟಿಕೆಟ್ ತೆಗೆದುಕೊಂಡು ಮೊದಲೇ ಸೀಟ್ ನಲ್ಲಿ ಕುಳಿತಿದ್ದ ವಾಸುಕಿ ವೈಭವ್ ಹಾಗೂ ಸ್ನೇಹಿತರು. ಈ ವೇಳೆ ವಾಸುಕಿ ಕುಳಿತಿದ್ದ ಸೀಟ್ ಮುಂದೆ ಕೂರಲು ನಾಲ್ಕೈದು ಜನರಿದ್ದ ಗುಂಪು ಬಂದಿದೆ. ಸಿನಿಮಾ ಶುರುವಾಗಿದ್ದರಿಂದ ಬೇಗ ಹೋಗಿ ಕುಳಿತುಕೊಳ್ಳುವಂತೆ ಅವರಿಗೆ ವಾಸುಕಿ ಸ್ನೇಹಿತ ದರ್ಶನ್ ಗೌಡ ಹಾಗೂ ಅವರ ಗೆಳತಿ ಹೇಳಿದ್ದಾರೆ. ಇದರಿಂದ ಕುಪಿತರಾದ ಮುರುಳಿ, ಬಸವರಾಜ್ ಹಾಗೂ ಸ್ನೇಹಿತರಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಾಸುಕಿ ಹಾಗೂ ಗೆಳತಿಗೆ ಅಸಭ್ಯ ಪದ ಬಳಸಿ ನಿಂದಿಸಿದ್ದರಿಂದ ಗಲಾಟೆ ಶುರುವಾಗಿದೆ.
Advertisement
ಕೂಡಲೇ ವಾಸುಕಿ ಪೊಲೀಸರಿಗೆ (Police) ಕರೆ ಮಾಡಿ ಕರೆಯಿಸಿಕೊಂಡಿದ್ದಾರೆ. ಆಗ ಎದುರಾಳಿ ಗುಂಪಿನಲ್ಲಿದ್ದ ಬಸವರಾಜ್, ಮುರುಳಿ ಮತ್ತಿತರರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಲಾಗಿದೆ. ಕೇಸ್ ಏನು ಬೇಡ ಗಾಯಕ ವಾಸುಕಿ ವೈಭವ್ ಹಾಗೂ ಸ್ನೇಹಿತರು ಹೇಳಿದ್ದರಿಂದ ಹಾಗೂ ಸಾರಿ ಕೇಳಿದ್ರೆ ಸಾಕು ಎಂದಿದ್ದ ವಾಸುಕಿ ವೈಭವ ಹಾಗೂ ಫ್ರೆಂಡ್ಸ್ ಹೇಳಿದ ಕಾರಣದಿಂದಾಗಿ ವಾಸುಕಿ ವೈಭವ್ ಮತ್ತು ಸ್ನೇಹಿತೆಗೆ ಗಲಾಟೆ ಮಾಡಿದ ಗುಂಪು ಕ್ಷಮೆ ಕೇಳಿದೆ. ನಂತರ ಕೆಲ ಗಂಟೆಗಳ ಕಾಲ ಸ್ಟೇಷನ್ ನಲ್ಲಿ ಇದ್ದ ಗಾಯಕ ವಾಸುಕಿ ವೈಭವ್, ನಿರ್ದೇಶಕ ಪನ್ನಾಗಭರಣ ಹಾಗೂ ಸ್ನೇಹಿತರು ಎರಡೂ ಗುಂಪಿನ ನಡುವೆ ಸಂಧಾನ ಮಾಡಿ ಕಳಿಸಿದ್ದಾರೆ ಕಲಾಸಿಪಾಳ್ಯ (, Kalasipalya) ಪೊಲೀಸರು.