ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ 2’ (Kantara 2) ಸಿದ್ಧತೆಯ ಬೆನ್ನಲ್ಲೇ ಪಂಜುರ್ಲಿ ದೈವ ಆಶೀರ್ವಾದ ಪಡೆದಿದ್ದಾರೆ. ಈ ಕುರಿತ ವೀಡಿಯೋವನ್ನ ನಟ ರಿಷಬ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇಡೀ ದೇಶವೇ ಮೆಚ್ಚಿದ ಸಿನಿಮಾ ಅಂದರೆ ಇತ್ತೀಚಿನ ‘ಕಾಂತಾರ’ ಸಿನಿಮಾ. ನಟನೆಯ ಜೊತೆ ನಿರ್ದೇಶನ ಮಾಡಿ ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದರು. ಪಂಜುರ್ಲಿ ದೈವದ ಕಥೆ ಅದ್ಭುತವಾಗಿ ತೆರೆಯ ಮೇಲೆ ತೋರಿಸಿದ್ದರು. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮುತ್ತೂರು ನೆಟ್ಟಿಲ ಪಂಜುರ್ಲಿ (Panjurli) ದೈವ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ರಿಷಬ್ ಅವರು ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ನಟ ರಿಷಬ್ ದೈವದ ಪಾತ್ರದಲ್ಲಿ ನಟಿಸಿದ್ದರು. ಚಿತ್ರ ಗ್ರ್ಯಾಂಡ್ ಸಕ್ಸಸ್ ಕಂಡಿತ್ತು. ಸಿನಿಮಾ ಸಕ್ಸಸ್ ಬಳಿಕ ದೈವಕ್ಕೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದರು.
View this post on Instagram
ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೇರ್ ಮಾಡಿರುವ ಮುತ್ತೂರು ನೆಟ್ಟಿಲ ‘ಪಂಜುರ್ಲಿ’ ಕೋಲದ ವೀಡಿಯೋ ಭರ್ಜರಿ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಈ ವೀಡಿಯೋ ವೈರಲ್ ಆಗ್ತಿದ್ದಂತೆ ‘ಕಾಂತಾರ 2’ (Kantara 2) ಸಿನಿಮಾ ಬಗ್ಗೆ ಫ್ಯಾನ್ಸ್ ಅಪ್‌ಡೇಟ್ ಕೇಳಿದ್ದಾರೆ.