`ಕಾಂತಾರ’ (Kantara) ಸಕ್ಸಸ್ ಅಲೆಯಲ್ಲಿ ರಿಷಬ್ ಶೆಟ್ಟಿ ತೇಲುತ್ತಿದ್ದಾರೆ. ಈ ಬೆನ್ನಲ್ಲೇ ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ರಿಷಬ್‌ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ʻಕಾಂತಾರʼ ಹೀರೋ ಕಿರಿಕ್ ಬ್ಯೂಟಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬಹುಭಾಷಾ ನಟಿಯಾಗಿ ಮಿಂಚ್ತಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಕನ್ನಡಿಗರ ಕೆಂಗಣ್ಣಿಗೆ ಹಲವು ವಿಚಾರಗಳಿಗೆ ಗುರಿಯಾಗಿದ್ದಾರೆ. ಕನ್ನಡದ ಮೊದಲ ಸಿನಿಮಾ ನಿರ್ಮಾಣ ಸಂಸ್ಥೆ ಬಗ್ಗೆ ನಟಿ ಕೊಟ್ಟ ಉತ್ತರಕ್ಕೆ ಕನ್ನಡಿಗರು ಕಿಡಿಕಾರಿದ್ದರು. ಅದಕ್ಕೆ ರಿಷಬ್ ಶೆಟ್ಟಿ (Rishab Shetty) ಕೂಡ ಪರೋಕ್ಷವಾಗಿ ಉತ್ತರ ಕೊಟ್ಟಿರುವ ಇದೀಗ ಮತ್ತೆ ರಶ್ಮಿಕಾ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ರಿಷಬ್‌ಗೆ ಕೇಳಲಾಗಿದೆ. ಇದನ್ನೂ ಓದಿ: ವಿಜಯ್ ಕಿರಗಂದೂರು ಸೇರಿದಂತೆ ಮೂವರಿಗೆ ವಿಶೇಷ ಪ್ರಶಸ್ತಿ
ಅಯ್ಯೋ.. ಅಂತವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಾವು ಸಾಕಷ್ಟು ಕಲಾವಿದರನ್ನ ಲಾಂಚ್ ಮಾಡಿದ್ದೇವೆ. ನಮಗೂ ಕೂಡ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಅಂತಹ ದೊಡ್ಡ ವ್ಯಕ್ತಿಗಳ ಲಿಸ್ಟ್ ನಮ್ಮ ಬಳಿಯೂ ಇದೆ, ಈ ಬಗ್ಗೆ ಮತ್ತೆ ಮಾತನಾಡೋಕೆ ಎನು ಇಲ್ಲಾ ಎಂದು ರಿಷಬ್ ಮಾತನಾಡಿದ್ದಾರೆ. ಈ ಮೂಲಕ ರಶ್ಮಿಕಾಗೆ ರಿಷಬ್ ಟಾಂಗ್ ಕೊಟ್ಟಿದ್ದಾರೆ.
ಇನ್ನೂ ನಟಿಯ ಹಳೆಯ ವಿವಾದದ ಬಳಿಕ ಇತ್ತೀಚಿನ ʻಮಿಷನ್ ಮಜ್ನುʼ ಸಂದರ್ಶನದಲ್ಲಿ, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಅವರು ಸಿನಿಮಾ ಇಂಡಸ್ಟ್ರಿಯ ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು. `ಅಂಜನಿಪುತ್ರ’ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದೆ. ಅವರು ವಿಶಾಲವಾಗಿ ಹೇಗೆ ಆಲೋಚಿಸೋದು ಅಂತಾ ಹೇಳಿಕೊಟ್ಟರು. ನಾನು ನಾಲ್ಕು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಅವರಿಗೆ ಧನ್ಯವಾದ ಎಂದಿದ್ದಾರೆ ರಶ್ಮಿಕಾ.
ಇದೀಗ ರಶ್ಮಿಕಾ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಕೆಟ್ಟ ಮೇಲೆ ಈಗ ಬುದ್ಧಿ ಬಂತಾ ಅಂದರೆ, ಇನ್ನೂ ಕೆಲವರು ನಮ್ಮವರಾಗಲು ಪ್ರಯತ್ನಿಸಬೇಡಿ ಎಂದು ರಶ್ಮಿಕಾ ವಿರುದ್ಧ ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k